ನವದೆಹಲಿ(ಅ.26): ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮೈದಾನದಲ್ಲಿ ಯಾವುದೇ ಸೂಪರ್‌ ಹೀರೋಗಿಂತ ಕಮ್ಮಿಯೇನಲ್ಲ. ಆದರೆ ತೆರೆಯಲ್ಲೂ ಸೂಪರ್‌ ಹೀರೋ ಆಗಲು ತಯಾರಾಗಿದ್ದಾರೆ.

ಹಗ​ಲು-ರಾತ್ರಿ ಟೆಸ್ಟ್‌ಗೆ ಕೊಹ್ಲಿಗೂ ಸಹಮತವಿದೆ ಎಂದ ದಾದಾ

ವಿರಾಟ್‌ ಕೊಹ್ಲಿ ಜೀವನವನ್ನು ಆಧರಿಸಿ ಸ್ಟಾರ್‌ ಸ್ಪೋರ್ಟ್ಸ್ ಹಾಗೂ ಡಿಸ್ನಿ ಜಂಟಿಯಾಗಿ ‘ಸೂಪರ್‌ ವಿ’ ಎಂಬ ಅನಿಮೇಷನ್‌ ಕತೆಯೊಂದನ್ನು ಪರಿಚಯಿಸುತ್ತಿವೆ. ನ.5ರಂದು ಕೊಹ್ಲಿ ಜನ್ಮದಿನಕ್ಕೆ ‘ಸೂಪರ್‌ ವಿ’ ಸ್ಟಾರ್‌ ಪ್ಲಸ್‌, ಸ್ಟಾರ್‌ ಸ್ಪೋರ್ಟ್ಸ್, ಡಿಸ್ನಿ ಹಾಗೂ ಹಾಟ್‌ ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ. ‘ಸೂಪರ್‌ ವಿ’ ಟ್ರೈಲರ್‌ಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಬಾಂಗ್ಲಾ ಸರಣಿಗೆ ಟೀಂ ಇಂಡಿಯಾ ಪ್ರಕಟ: ಮೂವರು ಕನ್ನಡಿಗರಿಗೆ ಸ್ಥಾನ

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಟೆಸ್ಟ್ ಚಾಂಪಿಯನ್’ಶಿಪ್’ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ವೆಸ್ಟ್ ಇಂಡೀಸ್ ವಿರುದ್ಧ 2-0 ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ 3-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ಟೆಸ್ಟ್ ಶ್ರೇಯಾಂಕದಲ್ಲೂ ನಂ.1 ಸ್ಥಾನವನ್ನು ಟೀಂ ಇಂಡಿಯಾ ಗಟ್ಟಿಗೊಳಿಸಿಕೊಂಡಿದೆ. ಇದೀಗ ವಿರಾಟ್ ಕೊಹ್ಲಿ ಬಾಂಗ್ಲಾದೇಶ ವಿರುದ್ಧ ನವೆಂಬರ್ 03ರಿಂದ ಆರಂಭವಾಗಲಿರುವ ಟಿ20 ಸರಣಿಯಿಂದ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ಟೆಸ್ಟ್ ಸರಣಿ ವೇಳೆಗೆ ಕೊಹ್ಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ.