ಕೆ.ಎಲ್.ರಾಹುಲ್ ಇತ್ತೀಚೆಗೆ ಪತ್ನಿ ಅತಿಯಾ ಶೆಟ್ಟಿ ಜೊತೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದು, ಅವರ ಕೈಯಲ್ಲಿದ್ದ ದುಬಾರಿ ವಾಚ್ ಎಲ್ಲರ ಗಮನ ಸೆಳೆದಿದೆ. ಅವರು ಧರಿಸಿದ್ದ ಪಾಟೆಕ್ ಫಿಲಿಪ್ ವಾಚ್‌ನ ಬೆಲೆ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಎಷ್ಟಿದೆ ಬೆಲೆ?
ನಮ್ಮ ಕೆಎಲ್ ರಾಹುಲ್ (KL Rahul) ಅವರು ಇತ್ತೀಚೆಗೆ ಪತ್ನಿ ಅತಿಯಾ ಶೆಟ್ಟಿ (Athiya Shetty) ಜೊತೆ ಮುಂಬೈನ ಬಾಂದ್ರಾದಲ್ಲಿ ಕಾಣಿಸಿಕೊಂಡರು. ಪತ್ನಿ ಕೈಹಿಡಿದು ಹೋಟೆಲ್‌ಗೆ ಆಗಮಿಸಿದ್ದ ರಾಹುಲ್ ವಿಶೇಷ ಭೋಜನ ಸವಿದರು. ಸದ್ಯ ಈ ಸ್ಟಾರ್ ಜೋಡಿಯ ಎಂಟ್ರಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.
ಅದಕ್ಕೆ ಕಾರಣ ರಾಹುಲ್ ಅವರ ಕೈಯಲ್ಲಿದ್ದ ಗಡಿಯಾರ. ಆ ಗಡಿಯಾರ ಸಾಮಾನ್ಯದ್ದಲ್ಲ. ಅದಕ್ಕೂ ಮೊದಲು ಅವರು, ಕಪ್ಪು ಬಣ್ಣದ ಬಟ್ಟೆಗಳನ್ನ ಆರಿಸಿಕೊಂಡರು. ಬ್ಲ್ಯಾಕ್ ಕಲರ್ ಪ್ಯಾಂಟ್ ಜೊತೆ ಮ್ಯಾಚ್ ಆಗುವ ಕ್ಲಾಸಿಕ್ ಕಪ್ಪು ಶರ್ಟ್ ಧರಿಸಿದ್ದರು. ಅವರ ಲುಕ್ ಜಬರ್ದಸ್ತ್ ಆಗಿತ್ತು. ರಾಹುಲ್ ಅವರ ಸ್ಟೈಲಿಶ್ ಲಿಕ್‌ಗೆ ಫ್ಯಾನ್ಸ್ ದಂಗಾಗಿ ಹೋಗಿದ್ದಾರೆ.
ವಾಚ್ ಮೌಲ್ಯ ಎಷ್ಟು?
ಇನ್ನು, ಅವರ ಕೈಯಲ್ಲಿ ಹೊಳೆಯುತ್ತಿದ್ದ ವಾಚ್‌ನ ಮೌಲ್ಯ ಅಷ್ಟಿಷ್ಟಲ್ಲ. ಪಾಟೆಕ್ ಫಿಲಿಪ್ (Patek Philippe) ವಾಚ್ ಅದಾಗಿದೆ. ಅದರ ಬೆಲೆ 80.95 ಲಕ್ಷ ರೂಪಾಯಿ ಆಗಿದೆ. ಪಟೆಕ್ ಫಿಲಿಪ್ ನಾಟಿಲಸ್ 5726A-001 ವಾಚ್, ಸ್ವಿಸ್‌ನ ಅತ್ಯಂತ ಐಷಾರಾಮಿ ಕೈಗಡಿಯಾರ. ಡಿಫೆರೆಂಟ್ ಸ್ಫೋರ್ಟಿ, ಸೊಗಸಾದ ವಿನ್ಯಾಸವನ್ನು ಹೊಂದಿದೆ. ಈ ಕಂಪನಿಗೆ ಇದೇ ಮಾದರಿಯ ಹಲವು ಡಿಸೈನ್‌ಗಳನ್ನ ತಯಾರಿಸುತ್ತದೆ.
ಅದೇ ಕಾರಣಕ್ಕೆ ರಾಹುಲ್ ಅವರ ಈ ಲುಕ್ ಡಿನ್ನರ್ ಪಾರ್ಟಿಯಲ್ಲಿ ಎದ್ದು ಕಾಣುತ್ತಿತ್ತು. ಇನ್ನು ಅವರ ಪತ್ನಿ ಅತಿಯಾ ಶೆಟ್ಟಿ ಕ್ಯಾಶುಯಲ್ ಮತ್ತು ಚಿಕ್ ಆಗಿ ಇರಿಸಿಕೊಂಡಿದ್ದರು. ಅವರ ಪಟ್ಟೆ ಬಿಳಿ ಶರ್ಟ್, ಡೆನಿಮ್ ಜೀನ್ಸ್ ಧರಿಸಿದ್ದರು. ಇಬ್ಬರ ಡ್ರೆಸ್ಸಿಂಗ್ ಮ್ಯಾಚಿಂಗ್ ಮ್ಯಾಚಿಂಗ್ ಆಗಿತ್ತು.
ರಾಹುಲ್ ಕ್ರಿಕೆಟ್ ಜೀವನ
ಇನ್ನ, ರಾಹುಲ್ ಅವರು ಆಟದಲ್ಲಿ ಅದ್ಭುತ ಫಾರ್ಮ್‌ನಲ್ಲಿ ಇದ್ದಾರೆ. ಇತ್ತೀಚೆಗೆ ನಡೆದ ವೆಸ್ಟ್ ವಿಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರು 87 ಎಸೆತಗಳಲ್ಲಿ 129 ರನ್ ಚಚ್ಚಿದ್ದರು. ಇನ್ನು ಟೀಂ ಇಂಡಿಯಾ ಪರ ಟೀಂ ಇಂಡಿಯಾ ಪರ 101 ಏಕದಿನ ಪಂದ್ಯಗಳನ್ನ ಆಡಿದ್ದಾರೆ. 9 ಶತಕ, 20 ಅರ್ಧಶತಕ ಸೇರಿ ಒಟ್ಟು 3541 ರನ್‌ಗಳಿಸಿದ್ದಾರೆ. ಇನ್ನು, 70 ಟೆಸ್ಟ್ ಪಂದ್ಯಗಳಲ್ಲಿ 122 ಇನ್ನಿಂಗ್ಸ್ ಆಡಿ, 4288 ರನ್‌ಗಳಿಸಿದ್ದಾರೆ. 12 ಶತಕ, 21 ಅರ್ಧಶತಕ ಸೇರಿದೆ. ಜೊತೆಗೆ ಟಿ-20 ಕ್ರಿಕೆಟ್‌ನಲ್ಲಿ 72 ಪಂದ್ಯಗಳನ್ನ ಆಡಿ, 2 ಶತಕ, 22 ಅರ್ಧಶತಕಗಳೊಂದಿಗೆ 2265 ರನ್‌ಗಳಿಸಿದ್ದಾರೆ. ಪ್ರಸ್ತುತ ಟೀಂ ಇಂಡಿಯಾದಲ್ಲಿ ಕೆಎಲ್ ರಾಹುಲ್ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ಗೆ ಮಾತ್ರ ಸೀಮಿತರಾಗಿದ್ದಾರೆ. ಟಿ-20 ತಂಡದಲ್ಲಿ ಸ್ಥಾನ ಸಿಗುತ್ತಿಲ್ಲ.


