* ಐಪಿಎಲ್‌ ಭಾಗ-2ಗೂ ಮುನ್ನ ಕೆಕೆಆರ್ ತಂಡಕ್ಕೆ ಶಾಕ್‌* ವೇಗಿ ಪ್ಯಾಟ್ ಕಮಿನ್ಸ್‌ 14ನೇ ಆವೃತ್ತಿಯ ಐಪಿಎಲ್‌ನ ಇನ್ನುಳಿದ ಪಂದ್ಯಗಳಿಗೆ ಭಾಗವಹಿಸುವುದು ಅನುಮಾನ* ಐಪಿಎಲ್ 2021 ಭಾಗ-2 ಯುಎಇನಲ್ಲಿ ಜರುಗಲಿದೆ.

ಸಿಡ್ನಿ(ಮೇ.31): ಕೋಲ್ಕತಾ ನೈಟ್‌ರೈಡರ್ಸ್‌ ತಂಡದ ತಾರಾ ವೇಗದ ಬೌಲರ್‌, ಆಸ್ಪ್ರೇಲಿಯಾದ ಪ್ಯಾಟ್‌ ಕಮಿನ್ಸ್‌, ಸೆಪ್ಟೆಂಬರ್‌-ಅಕ್ಟೋಬರ್‌ನಲ್ಲಿ ಯುಎಇನಲ್ಲಿ ನಡೆಯಲಿರುವ ಐಪಿಎಲ್‌ 14ನೇ ಆವೃತ್ತಿಯ ಭಾಗ-2ಕ್ಕೆ ಅಲಭ್ಯರಾಗಲಿದ್ದಾರೆ ಎನ್ನಲಾಗಿದೆ. 

ಬಹುಕೋಟಿ ಗುತ್ತಿಗೆ ಹೊಂದಿದ್ದರೂ, ಕಮಿನ್ಸ್‌ ಐಪಿಎಲ್‌ನಲ್ಲಿ ಪಾಲ್ಗೊಳ್ಳುವುದಿಲ್ಲ. ಟಿ20 ವಿಶ್ವಕಪ್‌, ಆ್ಯಷಸ್‌ ಸರಣಿಗೆ ಫಿಟ್‌ ಆಗಿರಬೇಕು ಎನ್ನುವ ಕಾರಣಕ್ಕೆ ಅವರು ಐಪಿಎಲ್‌ಗೆ ಗೈರಾಗಲಿದ್ದಾರೆ ಎಂದು ಸಿಡ್ನಿ ಮಾರ್ನಿಂಗ್‌ ಹೆರಾಲ್ಡ್‌ ಪತ್ರಿಕೆ ವರದಿ ಮಾಡಿದೆ. ಅಕ್ಟೋಬರ್‌-ನವೆಂಬರ್‌ನಲ್ಲಿ ಟಿ20 ವಿಶ್ವಕಪ್‌ ನಡೆಯಲಿರುವ ಕಾರಣ, ಆಟಗಾರರ ಕೆಲಸದ ಒತ್ತಡವನ್ನು ನಿಭಾಯಿಸುವ ಸಲುವಾಗಿ ಕ್ರಿಕೆಟ್‌ ಆಸ್ಪ್ರೇಲಿಯಾ ತನ್ನ ಇತರ ಆಟಗಾರರನ್ನು ಐಪಿಎಲ್‌ಗೆ ಕಳುಹಿಸುವ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಭಾರತದ ಕೋವಿಡ್‌ ಸಂಕಷ್ಟಕ್ಕೆ ಆಕ್ಸಿಜನ್ ಖರೀದಿಸಲು ಪ್ಯಾಟ್ ಕಮಿನ್ಸ್‌, 37 ಲಕ್ಷ ರುಪಾಯಿ ದೇಣಿಗೆ ನೀಡುವ ಮೂಲಕ ಉಳಿದ ಕ್ರಿಕೆಟಿಗರಿಗೆ ಸ್ಪೂರ್ತಿಯಾಗಿದ್ದನ್ನು ಸ್ಮರಿಸಬಹುದಾಗಿದೆ. 

ಗುಡ್ ನ್ಯೂಸ್‌: ಐಪಿಎಲ್‌ 2021 ಭಾಗ-2 ಆತಿಥ್ಯ ಎಲ್ಲಿ? ಗೊಂದಲಗಳಿಗೆ ಬಿಸಿಸಿಐ ತೆರೆ

ಭಾರತದಲ್ಲಿ ಆಯೋಜನೆಗೊಂಡಿದ್ದ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಮೊದಲ 29 ಪಂದ್ಯಗಳು ಸರಾಗವಾಗಿ ನಡೆದಿದ್ದವು. ಆದರೆ ಬಯೋ ಬಬಲ್‌ನೊಳಗಿದ್ದ ಆಟಗಾರರಿಗೆ ಹಾಗೂ ಸಿಬ್ಬಂದಿಗಳಿಗೆ ಕೋವಿಡ್ 19 ಪ್ರಕರಣಗಳು ದೃಢಪಟ್ಟ ಹಿನ್ನೆಲೆಯಲ್ಲಿ ಬಿಸಿಸಿಐ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಇದೀಗ ಜೂನ್ 29ರಂದು ನಡೆದ ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯಲ್ಲಿ ಐಪಿಎಲ್‌ ಭಾಗ-2 ಟೂರ್ನಿಯ ಇನ್ನುಳಿದ 31 ಪಂದ್ಯಗಳನ್ನು ಯುಎಇನಲ್ಲಿ ಆಯೋಜಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

"