ತಿರುವನಂತಪುರಂ(ಡಿ.09): ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿಯಲ್ಲಿ ಆಟಗಾರರ ಪೈಪೋಟಿ ಹೆಚ್ಚಾಗಿದೆ. ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವೇಗಿ ಕೆಸ್ರಿಕ್ ವಿಲಿಯಮ್ಸ್ ಎಸೆತದಲ್ಲಿ ಸಿಕ್ಸರ್ ಸಿಡಿಸಿ ನೋಟ್ ಬುಕ್ ಸಂಭ್ರಮದ ಮೂಲಕ ಕೊಹ್ಲಿ ಹಳೇ ಸೋಲಿಗೆ ತಿರುಗೇಟು ನೀಡಿದ್ದರು. 2ನೇ ಟಿ20ಯಲ್ಲಿ ಮತ್ತೆ ಕೊಹ್ಲಿ ವಿಕೆಟ್ ಕಬಳಿಸಿದ ವಿಲಿಯಮ್ಸ್ ಗಪ್ ಚುಪ್ ಸೆಲೆಬ್ರೇಷನ್ ಆಚರಿಸಿ ಸೈಲೆಂಟ್ ಆಗಿ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ವಿಲಿಯಮ್ಸ್ ನೋಟ್‌ಬುಕ್ ಸಂಭ್ರಮಕ್ಕೆ ತಿರುಗೇಟು; ಕೊಹ್ಲಿಗೆ ಭೇಷ್ ಎಂದ ಫ್ಯಾನ್ಸ್!.

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಕೊಹ್ಲಿ ವಿಕೆಟ್ ಕಬಳಿಸಿದ ಕೆಸ್ರಿಕ್ ವಿಲಿಯಮ್ಸ್ ತಮ್ಮ ಸಿಗ್ನೇಚರ್ ನೋಟ್ ಬುಕ್ ಸೆಲೆಬ್ರೇಷನ್ ಸಂಭ್ರಮ ಆಚರಿಸಿದ್ದರು. ಇದಕ್ಕೆ ಹೈದರಾಬಾದ್ ಟಿ20 ಪಂದ್ಯದಲ್ಲಿ ಕೊಹ್ಲಿ ಸಿಕ್ಸರ್ ಸಿಡಿಸಿ ವಿಲಿಯಮ್ಸ್ ನೋಟ್ ಬುಕ್ ಸಂಭ್ರಮವನ್ನು ಅನುಕರಿಸಿ ತಿರುಗೇಟು ನೀಡಿದ್ದರು. ಆದರೆ 2ನೇ ಟಿ20ಯಲ್ಲಿ ಕೊಹ್ಲಿ ವಿಕೆಟ್ ಕಬಳಿಸಿದ ವಿಲಿಯಮ್ಸ್ ನೋಟ್ ಬುಕ್ ಸೆಲೆಬ್ರೇಷನ್ ಬದಲು, ಸಹ ಆಟಗಾರರಿಗೆ ಗಪ್ ಚುಪ್ ಹೇಳೋ ಮೂಲಕ ಸಂಭ್ರಮ ಆಚರಿಸಿದರು.

 

ಇದನ್ನೂ ಓದಿ: ಕೊಹ್ಲಿ ನೋಟ್‌ಬುಕ್ ಸಂಭ್ರಮ; ಇಲ್ಲಿದೆ ಟಾಪ್ 10 ಮೆಮೆ !.

ಕೊಹ್ಲಿ ವಿಕೆಟ್ ಕಬಳಿಸಿದ ಬಳಿಕ ಸಹ ಆಟಗಾರರು ಹಾಗೂ ಅಭಿಮಾನಿಗಳಿಗೆ ಗಪ್ ಚುಪ್ ಸಂಭ್ರಮ ಆಚರಿಸಿದರು. ಇದೀಗ ವಿಲಿಯಮ್ಸ್ ಹಾಗೂ ಕೊಹ್ಲಿ ನಡುವಿನ ತಿರುಗೇಟು ಸಮರ ಮುಂದುವರಿದಿದೆ. 2ನೇ ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸೋ ಮೂಲಕ ಸರಣಿ 1-1 ಅಂತರದಲ್ಲಿ ಸಮಬಲಗೊಂಡಿದೆ. ಅಂತಿಮ ಪಂದ್ಯ ಗೆದ್ದ ತಂಡ ಸರಣಿ ಕೈವಶ ಮಾಡಲಿದೆ. ಹೀಗಾಗಿ ಡಿ.11ರಂದು ನಡೆಯಲಿರುವ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.