ಕೇರಳ(ಜ.27): ತಂದೆಯಾಗಿ ಬಡ್ತಿ ಪಡೆದಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇದೀಗ ಕಾನೂನು ಸಂಕಷ್ಟ ಎದುರಾಗಿದೆ.  ಇಂಗ್ಲೆಂಡ್ ವಿರುದ್ಧದ ತವರಿನ ಸರಣಿಗೆ ತಯಾರಿ ಆರಂಭಿಸಿರುವ ವಿರಾಟ್ ಕೊಹ್ಲಿಗೆ ಕೇರಳ ಹೈಕೋರ್ಟ್ ಲೀಗಲ್ ನೊಟೀಸ್ ನೀಡಿದೆ. 

ಸೌರವ್ ಗಂಗೂಲಿಗೆ ಮತ್ತೆ ಕಾಣಿಸಿಕೊಂಡ ಎದೆನೋವು; ಆಸ್ಪತ್ರೆ ದಾಖಲು!..

ಆನ್‌ಲೈನ್ ರಮ್ಮಿ ಸರ್ಕಲ್ ಗೇಮ್‌ಗಳಿಂದ ಯುವಕರ ವ್ಯಸನಿಗಳಾಗುತ್ತಿದ್ದಾರೆ. ಇದಕ್ಕೆ ರಾಯಭಾರಿಯಾದ ವಿರಾಟ್ ಕೊಹ್ಲಿ ಕೂಡ ಕಾರಣರಾಗಿದ್ದಾರೆ ಎಂದು ಪಿಟೀಶನ್ ಸಲ್ಲಿಸಲಾಗಿತ್ತು. ಇಷ್ಟೇ ಅಲ್ಲ ರಮ್ಮಿ ಸರ್ಕಲ್ ಗೇಮ್ ನಿಷೇಧಿಸುವಂತೆ ಕೋರಲಾಗಿದೆ. ಈ ಕುರಿತು ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ರಮ್ಮ ಸರ್ಕಲ್ ರಾಯಭಾರಿಗಳಾದ ವಿರಾಟ್ ಕೊಹ್ಲಿ, ನಟಿ ತಮ್ಮನ್ನ ಹಾಗೂ ನಟ ಅಜ್ಜು ವರ್ಗೀಸ್‌ಗೆ ನೊಟೀಸ್ ನೀಡಿದೆ.

ಮಗಳ ಆಗಮನ: ಟ್ವಿಟರ್ ಬಯೋ ಬದಲಾಯಿಸಿದ ಕೊಹ್ಲಿ, ವಾವ್ ಎಷ್ಟು ಲವ್ಲೀ.

ರಮ್ಮಿಯಂತಹ ಆನ್‌ಲೈನ್ ಗೇಮ್‌ಗಳಿಂದ ಯುವಕರು ವ್ಯಸನಿಗಳಾಗುತ್ತಿದ್ದಾರೆ. ಸಾಕಷ್ಟು ಹಣ ಕಳೆದುಕೊಳ್ಳುತ್ತಿದ್ದಾರೆ. ಪರಿಣಾಮ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದೆ. ಹೀಗಾಗಿ ಈ ರೀತಿಯ ಆನ್‌ಲೈನ್ ಗೇಮ್ ನಿಷೇಧಿಸಬೇಕು ಎಂದು ಕೇರಳ ಹೈಕೋರ್ಟ್‌ಗೆ ಸಲ್ಲಿಸಲಾಗಿರುವ ಪಿಟೀಶನ್‌ನಲ್ಲಿ ಆಗ್ರಹಿಸಲಾಗಿದೆ. ಈ ಕುರಿತು ಕೇರಳ ಹೈಕೋರ್ಟ್ ರಾಜ್ಯ ಸರ್ಕಾರ ಹಾಗೂ ರಮ್ಮಿ ರಾಭಾರಿಗಳಿಗೆ ಉತ್ತರಿಸಲು ನೊಟೀಸ್ ನೀಡಿದೆ.

ತಿರುವನಂತಪುರದ ಕುಟ್ಟಿಚಾಲ್‌ನ 27 ವರ್ಷದ ವಿನೀತ್ ರಮ್ಮಿ ಆಡಿ 21 ಲಕ್ಷ ರೂಪಾಯಿ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಮತ್ತೊರ್ವ ಸಜೇಶನ್ ರಮ್ಮಿ ಮೂಲಕ ಲಕ್ಷ ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾನೆ. ಹೀಗಾಗಿ ವ್ಯಸನಿಳಾಗಿ ಮಾಡುತ್ತಿರುಲ ರಮ್ಮಿ ಸರ್ಕಲ್ ಗೇಮ್ ನಿಷೇಧಿಸುವಂತೆ ಪಿಟೀಶನ್‌ನಲ್ಲಿ ಕೋರಲಾಗಿದೆ.