ಕೋಲ್ಕತಾ(ಜ.27):  ಟೀಂ ಇಂಡಿಯಾ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತೆ ಆಸ್ಪತ್ರೆ ದಾಖಲಾಗಿದ್ದಾರೆ. ಇಂದು(ಜ.27) ಬೆಳಗ್ಗೆ ಎರಡನೇ ಬಾರಿಗೆ ಎದೆ ನೋವು ಕಾಣಸಿಕೊಂಡಿದೆ. ತಕ್ಷಣವೇ ಗಂಗೂಲಿಯನ್ನು ಕೋಲ್ಕತಾದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.

"

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು! 

ಎದೆನೋವು ಕಾಣಿಸಿಕೊಂಡ ಬೆನ್ನಲ್ಲೇ ಆಸ್ಪತ್ರೆ ವಾಹನದಲ್ಲಿ ಗಂಗೂಲಿಯನ್ನು ಆಸ್ಪತ್ರೆಗ ಕರೆದುಕೊಂಡು ಬರಲಾಗಿದೆ. ಗಂಗೂಲಿ ಜೊತೆಗೆ ಪತ್ನಿ ಡೋನಾ ಗಂಗೂಲಿ ಹಾಗೂ ಪುತ್ರಿ ಸನಾ ಗಂಗೂಲಿ ಆಸ್ಪತ್ರೆಗೆ ಆಗಮಿಸಿದ್ದಾರೆ. ತುರ್ತು ನಿಘಾ ಘಟಕದಲ್ಲಿ (ICU) ಗಂಗೂಲಿಗೆ ಚಿಕಿತ್ಸೆ ನೀಡಲಾಗುತ್ತಿದೆ.  ಇತ್ತೀಚೆಗೆ ಸೌರವ್ ಗಂಗೂಲಿಗೆ ಲಘು ಹೃದಯಾಘಾತವಾಗಿತ್ತು. ಹೀಗಾಗಿ ಗಂಗೂಲಿಗೆ ಆ್ಯಂಜಿಯೋಪ್ಲಾಸ್ಟಿ ಸರ್ಜರಿ ಮಾಡಲಾಗಿತ್ತು. ತುರ್ತು ನಿಘಾತ ಘಟಕದಲ್ಲಿ ಚಿಕಿತ್ಸೆ ಪಡೆದಿದ್ದ ಗಂಗೂಲಿ, ಚೇತರಿಸಿಕೊಂಡಿದ್ದರು. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಗಂಗೂಲಿ ವಿಶ್ರಾಂತಿಗೆ ಜಾರಿದ್ದರು. 

 

ಜನವರಿ 2 ರಂದು ಜಿಮ್ ವರ್ಕೌಟ್ ಮಾಡುವ ವೇಳೆ ಗಂಗೂಲಿಗೆ ಲಘು ಹೃದಯಾಘಾತವಾಗಿತ್ತು.  ಇದೀಗ ಎರಡನೇ ಬಾರಿಗೆ ಎದೆ ನೋವು ಕಾಣಿಸಿಕೊಂಡಿರುವುದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.