ಎಂಟು ವರ್ಷಗಳ ನಂತರ ಭಾರತೀಯ ಟೆಸ್ಟ್ ತಂಡಕ್ಕೆ ಮರಳಿದ ಕರುಣ್ ನಾಯರ್, ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಸ್ಥಿರ ಪ್ರದರ್ಶನದ ಕೊರತೆ ಮತ್ತು ಯುವ ಆಟಗಾರರ ಸ್ಪರ್ಧೆಯಿಂದಾಗಿ ಮುಂದಿನ ಪಂದ್ಯಗಳಲ್ಲಿ ಅವರ ಸ್ಥಾನ ಅನುಮಾನದಲ್ಲಿದೆ. 

ಬೆಂಗಳೂರು: ಪ್ರೀತಿಯ ಕ್ರಿಕೆಟ್, ದಯವಿಟ್ಟು ನನಗೆ ಇನ್ನೊಂದು ಅವಕಾಶ ಕೊಡು. ಎಂಟು ವರ್ಷಗಳ ನಂತರ ಮತ್ತೆ ಕಮ್‌ಬ್ಯಾಕ್. ಭಾರತೀಯ ಕ್ರಿಕೆಟ್‌ನಲ್ಲಿ ಇಂಥದ್ದು ತುಂಬಾ ಅಪರೂಪ. ಕರುಣ್ ನಾಯರ್ ಅನ್ನೋ ಇನ್ಸ್ಪೈರಿಂಗ್ ಸ್ಟೋರಿ ಇಂಗ್ಲೆಂಡ್ ಅಧ್ಯಾಯ ಫೇರಿ ಟೇಲ್ ತರ ಆಗ್ಬೇಕು ಅಂತ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದರು. ಆದ್ರೆ ಆಂಡರ್ಸನ್-ತೆಂಡುಲ್ಕರ್ ಟ್ರೋಫಿ ಕಹಿ ಅನುಭವ ನೀಡಿದೆ. ಕರುಣ್‌ಗೆ ಟೀಂ ಇಂಡಿಯಾ ಮತ್ತೆ ಅವಕಾಶ ಕೊಡುತ್ತಾ ಅನ್ನೋದು ಪ್ರಶ್ನೆ.

ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಇಲ್ಲದ್ದರಿಂದ ಅನುಭವಿ ಆಟಗಾರನ ಅವಶ್ಯಕತೆ ಇತ್ತು. ಅದಕ್ಕೆ ಉತ್ತರ ಕರುಣ್. ರೋಹಿತ್ ಅಥವಾ ಕೊಹ್ಲಿ ಇದ್ರೆ ಕರುಣ್‌ಗೆ ಮತ್ತೆ ಟೀಮ್‌ಗೆ ಬರೋಕೆ ಇನ್ನೂ ತಡ ಆಗ್ತಿತ್ತು. ಟ್ರಿಪಲ್ ಸೆಂಚುರಿ ಹೊಡೆದ್ರೂ ಸಾಕಷ್ಟು ವರ್ಷ ಕಾಯ್ಬೇಕಾಯ್ತು. ಹೀಗಾಗಿ, ಇಂಗ್ಲೆಂಡ್ ಪ್ರವಾಸ ಕರುಣ್‌ಗೆ ತುಂಬಾ ಮುಖ್ಯವಾಗಿತ್ತು. ಮೂರು ಟೆಸ್ಟ್‌ಗಳಲ್ಲಿ ಕೇವಲ 131 ರನ್ ಮಾಡಿದ್ದಾರೆ. ಲಾರ್ಡ್ಸ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 40 ರನ್ ಅತ್ಯಧಿಕ ಸ್ಕೋರ್. ಸರಾಸರಿ 25ಕ್ಕಿಂತ ಕಡಿಮೆ. ಲೀಡ್ಸ್‌ನಲ್ಲಿ ಆರನೇ ಸ್ಥಾನದಲ್ಲಿ ಆಡಿದ್ರು, ನಂತರದ ಎರಡು ಪಂದ್ಯಗಳಲ್ಲಿ ಮೇಲಿನ ಕ್ರಮಾಂಕದಲ್ಲಿ ಆಡಿದ್ರು.

ಲೀಡ್ಸ್‌ನಲ್ಲಿ ಓಲಿ ಪೋಪ್‌ಗೆ ವಿಕೆಟ್ ಕೊಟ್ಟು, ಎರಡನೇ ಇನ್ನಿಂಗ್ಸ್‌ನಲ್ಲಿ ವೋಕ್ಸ್‌ಗೆ ಕ್ಯಾಚ್ ಕೊಟ್ಟು ಔಟ್ ಆದ್ರು. 20 ರನ್ ಮಾಡಿದ್ರು. ಬರ್ಮಿಂಗ್‌ಹ್ಯಾಮ್‌ನಲ್ಲಿ ಬ್ರೈಡನ್ ಕಾರ್ಸ್‌ ಬೌಲಿಂಗ್‌ನಲ್ಲಿ ಔಟ್ ಆದ್ರು. ಮೊದಲ ಇನ್ನಿಂಗ್ಸ್‌ನಲ್ಲಿ 31 ರನ್, ಎರಡನೇ ಇನ್ನಿಂಗ್ಸ್‌ನಲ್ಲಿ 26 ರನ್ ಮಾಡಿದ್ರು. ಲಾರ್ಡ್ಸ್‌ನಲ್ಲಿ ಜೋ ರೂಟ್ ಸೂಪರ್ ಕ್ಯಾಚ್‌ಗೆ ಔಟ್ ಆದ್ರು. ಎರಡನೇ ಇನ್ನಿಂಗ್ಸ್‌ನಲ್ಲಿ ಕಾರ್ಸ್‌ ಬೌಲಿಂಗ್‌ನಲ್ಲಿ ಔಟ್ ಆದ್ರು. ಲಾರ್ಡ್ಸ್‌ನಲ್ಲಿ ಕರುಣ್ ಚೆನ್ನಾಗಿ ಆಡಬೇಕಿತ್ತು. ಆದ್ರೆ ಅದು ಆಗ್ಲಿಲ್ಲ. ನಾಲ್ಕನೇ ದಿನ ಕರುಣ್ ಔಟ್ ಆದ ನಂತರ ಗಿಲ್ ಮತ್ತು ಆಕಾಶ್ ದೀಪ್ ಕೂಡ ಔಟ್ ಆದ್ರು.

ಇದರಿಂದ ಭಾರತಕ್ಕೆ ಸೋಲುಂಟಾಯ್ತು. ಲೀಡ್ಸ್‌ನ ಮೊದಲ ಇನ್ನಿಂಗ್ಸ್ ಬಿಟ್ರೆ ಬೇರೆಲ್ಲಾ ಸಲ ಚೆನ್ನಾಗಿ ಆರಂಭಿಸಿದ್ರು. ಆದ್ರೆ ದೊಡ್ಡ ಸ್ಕೋರ್ ಮಾಡೋಕೆ ಆಗ್ಲಿಲ್ಲ. ಸ್ಥಿರತೆ ಇಲ್ಲ ಅನ್ನೋದೇ ಅವಕರುಣ್‌ಗೆಕಾಶ ಸಿಗದಿರೋಕೆ ಕಾರಣ. ಆದ್ರೆ ಸ್ಥಿರತೆ ತೋರಿಸೋಕೆ ಅವಕಾಶ ಸಿಕ್ಕಿಲ್ಲ ಅನ್ನೋದೂ ಸತ್ಯ. ಟ್ರಿಪಲ್ ಸೆಂಚುರಿ ಬಿಟ್ರೆ ಬೇರೆ ಯಾವ ಇನ್ನಿಂಗ್ಸ್‌ನಲ್ಲೂ 50 ರನ್ ದಾಟಿಲ್ಲ.

ಮ್ಯಾಂಚೆಸ್ಟರ್‌ನಲ್ಲಿ ನಡೆಯೋ ನಾಲ್ಕನೇ ಟೆಸ್ಟ್‌ನಲ್ಲಿ ಕರುಣ್ ಆಡ್ತಾರಾ ಅನ್ನೋದು ಪ್ರಶ್ನೆ. ಮೊದಲ ಟೆಸ್ಟ್‌ನಲ್ಲಿ ಮಾತ್ರ ಆಡಿದ ಸಾಯ್ ಸುದರ್ಶನ್‌ಗೆ ಅವಕಾಶ ಕೊಡಬೇಕು ಅಂತ ಕೆಲವರು ಹೇಳ್ತಿದ್ದಾರೆ. ವಿದೇಶಿ ಪಿಚ್‌ಗಳಲ್ಲಿ ಸಾಯ್‌ಗೆ ಅನುಭವ ಬೇಕು. ಲೀಡ್ಸ್‌ನಲ್ಲಿ ಸಾಯ್ 0 ಮತ್ತು 30 ರನ್ ಮಾಡಿದ್ರು.

ದೀರ್ಘಕಾಲ ಮೂರನೇ ಕ್ರಮಾಂಕದಲ್ಲಿ ಸಾಯ್ ಆಡ್ತಾರೆ ಅಂತ ಅಂದುಕೊಂಡ್ರೆ ಕರುಣ್‌ಗಿಂತ ಸಾಯ್‌ಗೆ ಅವಕಾಶ ಕೊಡಬೇಕು. ಸಾಯ್‌ಗೆ ಅವಕಾಶ ಸಿಕ್ಕಿದ್ರೆ ಕರುಣ್ ಆರನೇ ಕ್ರಮಾಂಕಕ್ಕೆ ಹೋಗ್ಬೇಕು. ಇಲ್ಲಾಂದ್ರೆ ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗೆ ಉಳಿಬೇಕು. ಹಾಗಾದ್ರೆ ಕರುಣ್‌ಗೆ ಮತ್ತೆ ಅವಕಾಶ ಸಿಗುತ್ತಾ ಅನ್ನೋದು ಡೌಟ್. ದೊಡ್ಡ ಇನ್ನಿಂಗ್ಸ್ ಆಡಿಲ್ಲ ಅಂತ ಕರುಣ್‌ನ ಬಗ್ಗೆ ತೀರ್ಮಾನಕ್ಕೆ ಬರೋದು ಸರಿಯಲ್ಲ. ಮ್ಯಾಂಚೆಸ್ಟರ್‌ನಲ್ಲಿ ಅವಕಾಶ ಸಿಕ್ಕಿದ್ರೆ ಕರುಣ್ ಚೆನ್ನಾಗಿ ಆಡ್ಬೇಕು. ಆಗ ಮಾತ್ರ ಟೆಸ್ಟ್ ತಂಡದಲ್ಲಿ ಮುಂದುವರಿಯಬಹುದು.

ಕರುಣ್ ನಾಯರ್ ಬ್ಯಾಟರ್ ಆಗಿ ಕೊಂಚ ವೈಫಲ್ಯ ಅನುಭವಿಸಿದ್ರೂ, ಸ್ಲಿಪ್ ಫೀಲ್ಡರ್ ಆಗಿ ಅತ್ಯುತ್ತಮವಾಗಿ ಕಾಣಿಸಿಕೊಂಡಿದ್ದಾರೆ. ಬಹುತೇಖ ಫೀಲ್ಡರ್‌ಗಳು ಕ್ಷೇತ್ರರಕ್ಷಣೆಯಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಆದರೆ ಕರುಣ್ ನಾಯರ್ ಹಲವು ಕ್ಲಿಷ್ಟಕರ ಕ್ಯಾಚ್‌ಗಳನ್ನು ಯಶಸ್ವಿಯಾಗಿ ಹಿಡಿದಿದ್ದಾರೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಗೌತಮ್ ಗಂಭೀರ್-ಶುಭ್‌ಮನ್ ಗಿಲ್ ಜೋಡಿ ಕರುಣ್ ನಾಯರ್‌ಗೆ ಮತ್ತೊಂದು ಅವಕಾಶ ಕೊಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.