ಬೆಂಗಳೂರು(ಆ.20): ಹಿರಿಯ ಕ್ರಿಕೆ​ಟಿಗ ಗೋಪಾ​ಲ​ಸ್ವಾಮಿ ಕಸ್ತೂರಿರಂಗನ್‌ (89) ಬುಧ​ವಾರ ಇಲ್ಲಿನ ತಮ್ಮ ನಿವಾಸದಲ್ಲಿ ಹೃದ​ಯಾ​ಘಾತದಿಂದ ನಿಧ​ನ​ರಾ​ದರು. ಕಸ್ತೂರಿರಂಗನ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

1948ರಿಂದ 1963ರವರೆಗೂ ಮೈಸೂರು ರಾಜ್ಯದ ಪರ 36 ಪ್ರಥಮ ದರ್ಜೆ ಪಂದ್ಯ​ಗ​ಳಲ್ಲಿ ಆಡಿದ್ದ ವೇಗಿ 94 ವಿಕೆಟ್‌ ಕಬ​ಳಿ​ಸಿ​ದ್ದರು. ಕ್ರಿಕೆಟ್‌ ಪಿಚ್‌ಗಳ ಬಗ್ಗೆ ಅತ್ಯು​ತ್ತಮ ಜ್ಞಾನ ಹೊಂದಿದ್ದ ಕಸ್ತೂರಿರಂಗನ್‌ ಬಿಸಿ​ಸಿಐ ಪಿಚ್‌ ಕ್ಯುರೇ​ಟರ್‌ ಸಮಿ​ತಿಯ ಅಧ್ಯಕ್ಷರಾಗಿ ಕಾರ್ಯ​ನಿ​ರ್ವ​ಹಿ​ಸಿ​ದ್ದರು. ಕರ್ನಾ​ಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆ​ಎಸ್‌ಸಿಎ) ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿ​ಸಿ​ದ್ದರು. ಅವರ ನಿಧ​ನಕ್ಕೆ ಕೆಎಸ್‌ಸಿಎ ಸಂತಾಪ ಸೂಚಿ​ಸಿದೆ.

ಧೋನಿ ನಿವೃತ್ತಿಯ ಬೆನ್ನಲ್ಲೇ ಬಿಸಿಸಿಐನಿಂದ ಗುಡ್‌ ನ್ಯೂಸ್..!

ಇನ್ನುಳಿದಂತೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಅನಿಲ್‌ ಕುಂಬ್ಳೆ, ವಿಜಯ್‌ ಭಾರದ್ವಾಜ್‌, ದೊಡ್ಡ ಗಣೇಶ್‌ ಸೇರಿ​ದಂತೆ ಅನೇಕ ಮಾಜಿ ಕ್ರಿಕೆ​ಟಿ​ಗರು ಟ್ವೀಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.