ಹೈದ್ರಾಬಾದ್-ಮುಂಬೈ ಚಾಂಪಿಯನ್ ಮಾಡಿದ ಲೆಗ್ ಸ್ಪಿನ್ನರ್ ಈ ಕ್ರಿಕೆಟಿಗ ತಂಡದಲ್ಲಿರುವಾಗ ಸಿಎಸ್‌ಕೆ 2 ಬಾರಿ ಚಾಂಪಿಯನ್ 2022ರಲ್ಲಿ ಆರ್‌ಸಿಬಿ ತಂಡಕ್ಕೆ ಚೊಚ್ಚಲ ಪ್ರಶಸ್ತಿ ಎಂದ ಫ್ಯಾನ್ಸ್
ಬೆಂಗಳೂರು(ಮಾ.25) : ಐಪಿಎಲ್ ಟೂರ್ನಿಯಲ್ಲಿ(IPL 2022) ಒಂದೂ ಕಪ್ ಗೆಲ್ಲದ ತಂಡಗಳಲ್ಲಿ ನಮ್ಮ ಬೆಂಗಳೂರು(RCB) ಟೀಮ್ ಸಹ ಒಂದು. 14 ವರ್ಷಗಳಿಂದ ಐಪಿಎಲ್ ಟ್ರೋಫಿ(IPL Trophy) ಬರ ಎದುರಿಸುತ್ತಿದೆ. ನಾಲ್ಕೈದು ಕ್ಯಾಪ್ಟನ್ ಬದಲಾದ್ರು. ನೂರಾರು ಆಟಗಾರರು ಬಂದು ಹೋದ್ರು. ಆದ್ರೂ ಆರ್ಸಿಬಿಗೆ ಐಪಿಎಲ್ ಕಪ್ ಮರೀಚೆಕೆಯಾಗಿಯೇ ಇದೆ. ಈ ಸಲ ಕಪ್ ನಮ್ದೆ ಅಂತ ನಾಲ್ಕೈದು ವರ್ಷಗಳಿಂದ ಹೇಳಿದ್ದೇ ಹೇಳಿದ್ದು. ಕಪ್ ಗೆಲ್ಲೋದಿರಲಿ, ಈ ಅಭಿಯಾನ ಸ್ಟಾರ್ಟ್ ಆದ್ಮೇಲೆ ಆರ್‌ಸಿಬಿ ಟೀಮ್ ಫೈನಲ್ ಸಹ ಪ್ರವೇಶಿಸಿಲ್ಲ. ಆದರೆ ಈ ಬಾರಿ ತಂಡದಲ್ಲೊಬ್ಬ ಅದೃಷ್ಠವಂತ ಸೇರಿಕೊಂಡಿದ್ದಾನೆ. ಹೀಗಾಗಿ ಪ್ರಶಸ್ತಿ ಖಚಿತ ಎನ್ನುತ್ತಿದ್ದಾರೆ ಅಭಿಮಾನಿಗಳು.
ಸ್ಪಿನ್ನರ್ ಕರಣ್ ಶರ್ಮಾ(Karan Sharma) ಯಾವ ತಂಡದಲ್ಲಿದ್ದಾರೋ ಆ ತಂಡ ಪ್ರಶಸ್ತಿ ಗೆದ್ದುಕೊಂಡ ಊದಾಹರಣೆಗಳೇ ಹೆಚ್ಚು. 14 ವರ್ಷದ್ದು ಒಂದು ಲೆಕ್ಕ. ಈ ವರ್ಷದ್ದು ಒಂದು ಲೆಕ್ಕ ಅಂತಿದ್ದಾರೆ ಆರ್‌ಸಿಬಿ ಅಭಿಮಾನಿಗಳು. ಯಾಕಂದರೆ ಈ ಸಲ ಟೀಮ್‌ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕ್ಯಾಪ್ಟನ್ ಸಹ ಬದಲಾಗಿದ್ದಾರೆ. ಜೊತೆಗೆ ಟೀಮ್‌ಗೆ ಒಬ್ಬ ಅದೃಷ್ಟವಂತ ಬಂದಿದ್ದಾನೆ. ಆತ ಆಡಿದ ಐಪಿಎಲ್ ತಂಡಗಳೆಲ್ಲಾ ಚಾಂಪಿಯನ್ ಆಗಿವೆ. ಮೂರು ತಂಡಗಳನ್ನ ಚಾಂಪಿಯನ್ ಮಾಡಿ ಈಗ ನಾಲ್ಕನೇ ತಂಡ ಆರ್‌ಸಿಬಿ ಸೇರಿಕೊಂಡಿದ್ದಾನೆ. ಒಟ್ಟು 4 ಟ್ರೋಫಿ ಹಿಡಿದಿದ್ದಾನೆ.
ಐಪಿಎಲ್ ವೇಳೆ ಭಯೋತ್ಪಾದಕ ಕೃತ್ಯಕ್ಕೆ ಪ್ಲಾನ್, ಮುಂಬೈನಲ್ಲಿ ಬಿಗಿ ಭದ್ರತೆ!
ಹೈದ್ರಾಬಾದ್-ಮುಂಬೈ ಚಾಂಪಿಯನ್ ಮಾಡಿದ ಲೆಗ್ ಸ್ಪಿನ್ನರ್:
2013ರಲ್ಲಿ ಐಪಿಎಲ್ಗೆ ಎಂಟ್ರಿಕೊಟ್ಟ ಕರಣ್ ಶರ್ಮಾ ಇದುವರೆಗೂ 67 ಪಂದ್ಯಗಳಿಂದ 59 ವಿಕೆಟ್ ಪಡೆದಿದ್ದಾರೆ. 316 ರನ್ ಸಹ ಹೊಡೆದಿದ್ದಾರೆ. 4 ವರ್ಷಗಳ ಕಾಲ ಹೈದ್ರಾಬಾದ್ ಪರ ಆಡಿದ ಕರಣ್, 2016ರಲ್ಲಿ ಚಾಂಪಿಯನ್ ಆದ ಸನ್ ರೈಸರ್ಸ್ ಹೈದ್ರಾಬಾದ್ ಟೀಮ್ ಮೆಂಬರ್ ಸಹ ಆಗಿದ್ದರು. ತಮ್ಮ ಲೆಗ್ ಸ್ಪಿನ್ ಜೊತೆ ಬ್ಯಾಟಿಂಗ್‌ನಲ್ಲೂ ಮಿಂಚಿ, ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದ್ದರು.
ಹೈದ್ರಾಬಾದ್ನಿಂದ ಕರಣ್ ಬಂದಿದ್ದು ಮುಂಬೈ ಇಂಡಿಯನ್ಸ್ ತಂಡಕ್ಕೆ. 2017ರ ಸೀಸನ್ನಲ್ಲಿ ಮುಂಬೈ ಪರ ಆಡಿದ ಕರಣ್, ಅಲ್ಲೂ ತಮ್ಮ ಸ್ಪಿನ್ ಜಾದೂ ತೋರಿಸಿದ್ರು. 2017ರಲ್ಲಿ ಮುಂಬೈ ಚಾಂಪಿಯನ್ ಆಯಿತು. ಆಗಲೂ ಕಪ್ ಹಿಡಿದು ಸಂಭ್ರಮಿಸಿದ್ದರು.
IPL 2022 ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ರವೀಂದ್ರ ಜಡೇಜಾಗೆ ನೀಡಿದ ಎಂಎಸ್ ಧೋನಿ!
ಸಿಎಸ್‌ಕೆ ಪರ ಎರಡು ಸಲ ಕಪ್ ಹಿಡಿದಿರುವ ಕರಣ್:
ಹೈದ್ರಾಬಾದ್ ಮತ್ತು ಮುಂಬೈ ಪರ ಉತ್ತಮ ಪ್ರದರ್ಶನ ನೀಡಿದ್ರೂ, ಆ ತಂಡಗಳು ಚಾಂಪಿಯನ್ ಆದ್ರೂ ಕರಣ್ ಅವರನ್ನ ಡ್ರಾಪ್ ಮಾಡಿದ್ವು. ಹಾಗಾಗಿ 2018ರಲ್ಲಿ ಕರಣ್ ಶರ್ಮಾ ಸಿಎಸ್‌ಕೆ ಸೇರಿಕೊಂಡರು. ಧೋನಿ ಬಳಗದಲ್ಲೂ ತಮ್ಮ ಚಮತ್ಕಾರ ತೋರಿಸಿದ ಕರಣ್, ಅಲ್ಲೂ ಮಿಂಚಿದ್ರು. 2018 ಮತ್ತು 2021ರಲ್ಲಿ ಚಾಂಪಿಯನ್ ಆದ ಸಿಎಸ್‌ಕೆ ತಂಡದಲ್ಲೂ ಕರಣ್ ಶರ್ಮಾ ಇದ್ದರು. ಸತತ ಮೂರು ಐಪಿಎಲ್ ಟ್ರೋಫಿ ಗೆದ್ದ ಏಕೈಕ ಆಟಗಾರ ಅನ್ನೋ ಸಾಧನೆಯನ್ನೂ ಮಾಡಿದ್ದಾರೆ.
ಕರಣ್ ಶರ್ಮಾ ಲೆಗ್ ಸ್ಪಿನ್ ಜೊತೆ ಬ್ಯಾಟಿಂಗ್ ಸಹ ಮಾಡ್ತಾರೆ. ಹಾಗಂತ ಗ್ರೇಟ್ ಪ್ಲೇಯರ್ ಏನು ಅಲ್ಲ. ಆದರೆ ಅದೃಷ್ಟವಂತ. ಅವರು ಯಾವ ತಂಡದ ಪರ ಆಡ್ತಾರೋ ಆ ತಂಡ ಚಾಂಪಿಯನ್ ಆಗುತ್ತೆ. ಮೂರು ತಂಡಗಳನ್ನ ಚಾಂಪಿಯನ್ ಮಾಡಿದ ಕೀರ್ತಿ ಕರಣ್ಗೆ ಸಲ್ಲುತ್ತೆ. ಈ ಸಲ ಆರ್‌ಸಿಬಿ ತಂಡ ಸೇರಿಕೊಂಡಿದ್ದಾರೆ. ಆ ಮೂರು ತಂಡಗಳನ್ನ ಚಾಂಪಿಯನ್ ಮಾಡಿದ ಹಾಗೆ ಆರ್‌ಸಿಬಿ ತಂಡವನ್ನ ಚಾಂಪಿಯನ್ ಮಾಡ್ತಾರಾ..? ಈ ಅದೃಷ್ಟವಂತನ ರೂಪದಲ್ಲಾದ್ರು ಆರ್‌ಸಿಬಿ ಐಪಿಎಲ್ ಕಪ್ ಗೆಲ್ಲುತ್ತಾ..? ಈ ಎಲ್ಲದಕ್ಕೂ ಇನ್ನೆರಡು ತಿಂಗಳಲ್ಲಿ ಉತ್ತರ ಸಿಗಲಿದೆ.
