ಕೇವಲ 40 ನಿಮಿಷದಲ್ಲಿ ಹೃದಯ ಗೆದ್ದ ನಾಯಕ; ಗಂಗೂಲಿ ಹೊಗಳಿದ ಪಾಕ್ ದಿಗ್ಗಜ!
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್‌ಗೆ ಹೊಸ ಮೆರುಗು ನೀಡಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗ ಹಾಗೂ ನಾಯಕನಾಗಿದ್ದಾಗಲೂ ಗಂಗೂಲಿ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚು ಮೆಚ್ಚು. ಆದರೆ ಎದುರಾಳಿಗೆ ಸಿಂಹ ಸ್ವಪ್ನ. ಕಾರಣ ದಾದಾ ಅಗ್ರೆಸ್ಸೀವ್ ಕ್ರಿಕೆಟಿಗ. ಕಿರಿಕ್, ಸ್ಲೆಡ್ಜ್ ಯಾವುದೇ ಪ್ರತಿಕ್ರಿಯೆಗೆ ಗಂಗೂಲಿ ಅಲ್ಲೆ ಉತ್ತರ ನೀಡುತ್ತಿದ್ದರು. ಇದೇ ಅಗ್ರೆಸ್ಸೀವ್ ಕ್ರಿಕೆಟಿಗ ದಾದಾ ಕೇವಲ 40 ನಿಮಿಷದಲ್ಲಿ ಪಾಕಿಸ್ತಾನ ಕ್ರಿಕಿಟಗನ ಮನಸ್ದು ಗೆದ್ದಿದ್ದರು.
ಲಂಡನ್(ಡಿ.25): ಟೀಂ ಇಂಡಿಯಾ ನಾಯಕನಾಗಿ ಸೌರವ್ ಗಂಗೂಲಿ ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದರು. ಪ್ರದರ್ಶನದ ಜೊತೆಗೆ ಏಟಿಗೆ ಎದಿರೇಟು ಕೊಡೋ ನಾಯಕ. ಅದರಲ್ಲೂ ಪಾಕಿಸ್ತಾನ ಕ್ರಿಕೆಟಿಗರಿಗೆ ದಾದಾ ಮೈದಾನದಲ್ಲಿದ್ದರೆ ಬಾಲ ಬಿಚ್ಚುತ್ತಿರಲಿಲ್ಲಲ್ಲ. ಪಾಕಿಸ್ತಾನ ಕ್ರಿಕೆಟಿಗರು ಗಂಗೂಲಿಯಿಂದ ದೂರ ಉಳಿಯುತ್ತಿದ್ದರು. ಆದರೆ ಗಂಗೂಲಿ ಕೇವಲ 40 ನಿಮಿಷದಲ್ಲಿ ಪಾಕಿಸ್ತಾನ ಕ್ರಿಕೆಟಿಗನ ಮನಸ್ಸು ಗೆದ್ದಿದ್ದರು.
ಇದನ್ನೂ ಓದಿ: ಪುತ್ರಿ ಸನಾ ವಿರುದ್ದ ಸೋಲೋಪ್ಪಿಕೊಂಡ ಸೌರವ್ ಗಂಗೂಲಿ!.
ಪಾಕಿಸ್ತಾನದ ಸ್ಪಿನ್ ದಿಗ್ಗಜ ಸಕ್ಲೈನ್ ಮುಷ್ತಾಕ್ ಇದೀಗ ಗಂಗೂಲಿ ಕುರಿತ ಇಂಟರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟಿದ್ದಾರೆ. 2005-06ರಲ್ಲಿ ಭಾರತ ಇಂಗ್ಲೆಂಡ್ ಪ್ರವಾಸದಲ್ಲಿತ್ತು. ಒಂದು ಪಂದ್ಯದಲ್ಲಿ ಗಂಗೂಲಿ ತಂಡದಿಂದ ಹೊರಗಿದ್ದರು. ಈ ವೇಳೆ ನಾನು ಸಸೆಕ್ಸ್ ತಂಡದ ಪರ ಆಡುತ್ತಿದ್ದೆ. ಬಾಲ್ಕನಿಯಲ್ಲಿದ್ದ ನನ್ನ ನೋಡಿದ ಗಂಗೂಲಿ ನೇರವಾಗಿ ಬಳಿ ಬಂದು ನನ್ನ ಇಂಜುರಿ ಕುರಿತು ವಿಚಾರಿಸಿದರು. ಟೀ ಕುಡಿಯಲು ಆಹ್ವಾನಿಸಿದರು. ಆ ದಿನ ನಾನು ಗಂಗೂಲಿ 40 ನಿಮಿಷ ಮಾತನಾಡಿದ್ದೆವು ಎಂದು ಮುಷ್ತಾಕ್ ಘಟನೆಯನ್ನು ವಿವರಿಸಿದ್ದಾರೆ.
ಇದನ್ನೂ ಓದಿ: ಆಯ್ಕೆ ಸಮಿತಿ ಅಧಿಕಾರ ಅವಧಿ ವಿಸ್ತರಣೆ ಇಲ್ಲ; MSK ಟೀಂಗೆ ಗಂಗೂಲಿ ಶಾಕ್!.
40 ನಿಮಿಷದ ಭೇಟಿಯಲ್ಲಿ ಗಂಗೂಲಿ ನನ್ನ ಹೃದಯ ಗೆದ್ದಿದ್ದರು. ಆಕ್ರಮಣಕಾರಿ ಕ್ರಿಕೆಟಿಗನಾಗಿ ನಾನು ನೋಡಿದ್ದೆ. ಆದರೆ ಮೈದಾನದ ಹೊರಗೆ ಗಂಗೂಲಿ ಆತ್ಮೀಯ ಗೆಳೆಯ ಎಂದು ಮುಷ್ತಾಕ್ ಹೇಳಿದ್ದಾರೆ. ಗಂಗೂಲಿ ಕ್ರಿಕೆಟ್ ಆಟದ ಜಂಟ್ಲಮೆನ್ ಎಂದು ಬಣ್ಣಿಸಿದ್ದಾರೆ.