Asianet Suvarna News Asianet Suvarna News

ಆಯ್ಕೆ ಸಮಿತಿ ಅಧಿಕಾರ ಅವಧಿ ವಿಸ್ತರಣೆ ಇಲ್ಲ; MSK ಟೀಂಗೆ ಗಂಗೂಲಿ ಶಾಕ್!

ಬಿಸಿಸಿಐ ವಾರ್ಷಿಕ ಸಭೆಯಲ್ಲಿ ಸೌರವ್ ಗಂಗೂಲಿ ಟೀಂ ಹಲವು ನಿರ್ಧಾರಗಳನ್ನು ಕೈಗೊಂಡಿದೆ. ಆಯ್ಕೆ ಸಮಿತಿ ಅಧಿಕಾರವಧಿಗೆ ಅಂತ್ಯಹಾಡಿದ್ದರೆ, ಗಂಗೂಲಿ ಅಧಿಕಾರವದಿ ವಿಸ್ತರಣೆಗೆ ಕೋರಲಾಗಿದೆ. ಇನ್ನು ಐಸಿಸಿಯಲ್ಲಿ ಭಾರತದ ಪ್ರತಿನಿಧಿಯನ್ನು ಆಯ್ಕೆ ಮಾಡಲಾಗಿದೆ.

sourav ganguly confirms Team India selection committee terms end
Author
Bengaluru, First Published Dec 2, 2019, 9:49 AM IST

ಮುಂಬೈ(ಡಿ.02): ಟೀಮ್‌ ಇಂಡಿಯಾದ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎ​ಸ್‌.ಕೆ ಪ್ರಸಾದ್‌ ಅಧಿ​ಕಾ​ರಾ​ವಧಿ ಭಾನು​ವಾರ ನಡೆದ ವಾರ್ಷಿಕ ಸಭೆಯೊಂದಿಗೆ ಕೊನೆ​ಗೊಂಡಿದ್ದು, ಬಿಸಿ​ಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ದೃಢೀ​ಕ​ರಿ​ಸಿ​ದ​ರು. ಆಯ್ಕೆ ಸಮಿತಿಯ ಅಧಿಕಾರಾವಧಿ ವಿಸ್ತರಿಸಲು ಗಂಗೂಲಿ ಮುಂದಾಗದೇ ಇರುವ ಕಾರಣ ಪ್ರಸಾದ್‌ ಅಧಿಕಾರ ಅವಧಿ ಮುಕ್ತಾಯವಾಗಿದೆ. 

ಇದನ್ನೂ ಓದಿ: 3 ತಿಂಗಳಲ್ಲಿ ಹೊರಬೀಳಲಿದೆ ಧೋನಿ ಕ್ರಿಕೆಟ್ ಭವಿಷ್ಯ!

ಅವ​ಧಿ ಮೀರ​ಲು ಸಾಧ್ಯ​ವಿಲ್ಲ, ಅವರು ಉತ್ತಮ ಕೆಲಸ ಮಾಡಿದ್ದಾರೆ. ವರ್ಷ​ಕ್ಕೊಮ್ಮೆ ಸಮಿತಿ ನೇಮಿ​ಸು​ವುದು ಸರಿ​ಯಲ್ಲ. ಕೆಲವು ನಿಯ​ಮ​ಗ​ಳನ್ನು ನಿಗ​ದಿ​ಪ​ಡಿ​ಸು​ತ್ತೇ​ವೆ’ ಎಂದು ಗಂಗೂಲಿ ತಿಳಿ​ಸಿ​ದರು. ಪ್ರಸಾದ್‌ ಹಾಗೂ ಸದಸ್ಯ ಗಗನ್‌ ಖೋಡಾ 2015ರಲ್ಲಿ ನೇಮ​ಕ​ಗೊಂಡಿ​ದ್ದರು. ಬಿಸಿ​ಸಿಐ ಹಳೆಯ ಸಂವಿ​ಧಾ​ನದಂತೆ ಆಯ್ಕೆಗಾರರ ಅಧಿ​ಕಾ​ರಾ​ವಧಿ 4 ವರ್ಷ. ತಿದ್ದು​ಪಡಿಯಾದ ಸಂವಿ​ಧಾ​ನದ ಪ್ರಕಾರ 5 ವರ್ಷ ಸದ​ಸ್ಯ​ರಾಗಿ ಇರ​ಬ​ಹುದು. 2016ರಲ್ಲಿ ನೇಮ​ಕ​ಗೊಂಡಿದ್ದ ಜತಿನ್‌ ಪರಂಜ್ಪೆ, ಶರ​ಣ್‌​ದೀಪ್‌ ಸಿಂಗ್‌, ದೇವಾಂಗ್‌ ಗಾಂಧಿ ಇನ್ನೊಂದು ವರ್ಷ ಇರ​ಲಿ​ದ್ದಾ​ರೆ.

ಇದನ್ನೂ ಓದಿ: ಪಿಂಕ್ ಬಾಲ್‌ ಟೆಸ್ಟ್ ಯಶಸ್ವಿ ಬೆನ್ನಲ್ಲೆ ಅಚ್ಚರಿಯ ಹೇಳಿಕೆ ನೀಡಿದ ದಾದಾ.

MSK ಟೀಂ ಅಧಿಕಾರವದಿ ಅಂತ್ಯವಾಗಿದ್ದರೆ, 88ನೇ ವಾರ್ಷಿ​ಕ ಸಭೆಯಲ್ಲಿ ಬಿಸಿಸಿಐನ ನೂತನ ಅಧ್ಯಕ್ಷ ಸೌರವ್‌ ಗಂಗೂಲಿ ಅಧಿಕಾರಾವಧಿ ವಿಸ್ತರಣೆ ಮಾಡಲು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ. ಇಲ್ಲಿನ ಪ್ರಧಾನ ಕಚೇ​ರಿ​ಯಲ್ಲಿ ಭಾನು​ವಾರ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ಬಿಸಿಸಿಐ ನೂತನ ನಿಯಮದಂತೆ ಅಕ್ಟೋಬರ್‌ 23 ರಂದು ಅಧಿಕಾರ ಸ್ವೀಕರಿಸಿದ ಗಂಗೂಲಿ, ಮುಂದಿನ ವರ್ಷ ತಮ್ಮ ಸ್ಥಾನ ತೊರೆಯಬೇಕಿದೆ. ಆದರೆ ಸುಪ್ರೀಂ ಅವಕಾಶ ಕಲ್ಪಿಸಿದರೆ, ಗಂಗೂಲಿ 2024 ರವರೆಗೆ ಮುಂದುವರಿಯಬಹುದಾಗಿದೆ.

ಇದನ್ನೂ ಓದಿ:ಕಲಿತಿದ್ದು ನಿಮ್ಮಿಂದಲೇ; ಸೌರವ್ ಗಂಗೂಲಿಗೆ ಪುತ್ರಿ ಟಕ್ಕರ್!

ಗಂಗೂಲಿ ಅಧ್ಯ​ಕ್ಷ​ತೆ​ಯಲ್ಲಿ ನಡೆದ ಮೊದಲ ಸಭೆ​ಯಲ್ಲಿ, ಬಿಸಿ​ಸಿಐ ಪದಾ​ಧಿ​ಕಾ​ರಿ​ಗಳ ಅಧಿ​ಕಾ​ರಾ​ವಧಿ ವಿಸ್ತರಣೆ ಬಗ್ಗೆ ಚರ್ಚಿಸಲಾಯಿತು. ‘ಪ್ರ​ಸ್ತಾ​ಪಿ​ಸಿದ ತಿದ್ದು​ಪ​ಡಿ​ಗಳ​ನ್ನು ಮಾಡಿದ್ದು, ಅಂಗೀ​ಕಾರ​ಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಹಸ್ತಾಂತ​ರಿ​ಸಿ​ದ್ದೇ​ವೆ’ ಎಂದು ಬಿಸಿ​ಸಿಐ ಉನ್ನತ ಅಧಿ​ಕಾರಿ ತಿಳಿ​ಸಿ​ದ​ರು.

ಬಿಸಿ​ಸಿಐ ನೂತನ ಸಂವಿ​ಧಾ​ನದ ಪ್ರಕಾರ, ಮಂಡಳಿ ಅಥವಾ ರಾಜ್ಯ ಕ್ರಿಕೆಟ್‌ ಸಂಸ್ಥೆ​ಯಲ್ಲಿ 2-3 ವರ್ಷ ಆಡಳಿತ ನಡೆಸಿರುವವರು ಮುಂದಿನ ಕನಿಷ್ಠ 3 ವರ್ಷಗಳ ಕಾಲ ಕೂಲಿಂಗ್‌ ಅವಧಿಯನ್ನು ಅನುಸರಿಸ​ಬೇಕು. ಗಂಗೂಲಿ, ಬಂಗಾಳ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿ 2ನೇ ಬಾರಿ ಅಧಿಕಾರದಲ್ಲಿ ಮುಂದುವರಿದಿದ್ದರು. ಈ ಸಂದರ್ಭದಲ್ಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೇರಿದ್ದರು. ಡಿ.3ರಂದು ಸುಪ್ರೀಂ ತೀರ್ಪಿನ ಬಳಿ​ಕ ಕ್ರಿಕೆಟ್‌ ಸಲಹಾ ಸಮಿತಿ (ಸಿಎ​ಸಿ) ನೇಮ​ಕಾತಿ ಬಗ್ಗೆ ಬಿಸಿ​ಸಿಐ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಐಸಿ​ಸಿ​ನಲ್ಲಿ ಜಯ್‌ ಭಾರತ ಪ್ರತಿ​ನಿ​ಧಿ:
ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿ​ಸಿ) ಪ್ರಧಾನ ಕಾರ್ಯ ನಿರ್ವಾ​ಹಕ ಸಮಿತಿ ಸಭೆ​ಗ​ಳಲ್ಲಿ ಇನ್ನು ಭಾರ​ತ​ವನ್ನು ಜಯ್‌ ಶಾ ಪ್ರತಿ​ನಿ​ಧಿ​ಸ​ಲಿ​ದ್ದಾರೆ. 33 ತಿಂಗಳು ಸುಪ್ರೀಂ ಕೋರ್ಟ್‌ ನೇಮಿತ ಆಡ​ಳಿತ ಸಮಿತಿ (ಸಿಒ​ಎ) ಅಧಿ​ಕಾರ ನಡೆ​ಸಿದ್ದು, ಆಗ ಬಿಸಿ​ಸಿಐ ಸಿಇಒ ರಾಹುಲ್‌ ಜೊಹ್ರಿ ಭಾರ​ತ​ದ ಪ್ರತಿ​ನಿಧಿ ಆಗಿ​ದ್ದ​ರು. ಬಿಸಿ​ಸಿಐ ಪೂರ್ಣ ಅಧಿ​ಕಾರ ಪಡೆ​ದಿದ್ದು, ದೇಶ ಪ್ರತಿ​ನಿಧಿಸುವು​ದು ಕಾರ‍್ಯ​ದರ್ಶಿ ಜವಾ​ಬ್ದಾರಿ. ಆದರೆ ಐಸಿಸಿ ಮಂಡಳಿ ಸಭೆಗೆ ಪ್ರತಿ​ನಿಧಿ ಯಾರೆಂದು ನಿರ್ಧ​ರಿ​ಸಿ​ಲ್ಲ.

Follow Us:
Download App:
  • android
  • ios