ಸ್ಟಾಕ್ಹೋಮ್(ಸೆ.11)‌: ದಕ್ಷಿಣ ಆಫ್ರಿ​ಕಾದ ಮಾಜಿ ಕ್ರಿಕೆ​ಟಿಗ ಜಾಂಟಿ ರೋಡ್ಸ್‌, ಸ್ವೀಡನ್‌ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ಆಗಿ ನೇಮ​ಕ​ಗೊಂಡಿದ್ದಾರೆ. 

ಐಪಿ​ಎಲ್‌ ಟೂರ್ನಿ​ಯಲ್ಲಿ ಕಿಂಗ್ಸ್‌ ಇಲೆ​ವೆನ್‌ ಪಂಜಾಬ್‌ ತಂಡದ ಫೀಲ್ಡಿಂಗ್‌ ಕೋಚ್‌ ಆಗಿ ಕಾರ್ಯ​ನಿ​ರ್ವ​ಹಿ​ಸ​ಲಿ​ರುವ 51 ವರ್ಷದ ರೋಡ್ಸ್‌, ಟೂರ್ನಿ ಮುಕ್ತಾ​ಯ​ಗೊಂಡ ಬಳಿಕ ಕುಟುಂಬ ಸಮೇತ ಸ್ವೀಡನ್‌ಗೆ ತೆರ​ಳ​ಲಿ​ದ್ದಾರೆ. 

‘ದೇಶ​ದಲ್ಲಿ ಕ್ರಿಕೆಟ್‌ ಅತಿ​ವೇ​ಗ​ವಾಗಿ ಬೆಳೆ​ಯು​ತ್ತಿ​ರುವ ಕ್ರೀಡೆಗಳ ಪೈಕಿ 2ನೇ ಸ್ಥಾನ​ದ​ಲ್ಲಿದೆ. ಕಳೆದ 2 ವರ್ಷ​ಗ​ಳಲ್ಲಿ ಕ್ರಿಕೆಟ್‌ನಲ್ಲಿ ಪಾಲ್ಗೊ​ಳ್ಳು​ವ​ವರ ಸಂಖ್ಯೆ ಶೇ.300ರಷ್ಟು ಏರಿ​ಕೆಯಾಗಿದೆ. ರೋಡ್ಸ್‌ರ ಅನು​ಭವ ದೇಶದಲ್ಲಿ ಕ್ರಿಕೆಟ್‌ ಏಳಿ​ಗೆಗೆ ಮತ್ತಷ್ಟು ಸಹ​ಕಾ​ರಿ​ಯಾ​ಗ​ಲಿದೆ’ ಎಂದು ಸ್ವೀಡನ್‌ ಕ್ರಿಕೆಟ್‌ ಫೆಡ​ರೇ​ಷನ್‌ ತಿಳಿ​ಸಿದೆ.

IPL 2020: ಕೊರೋನಾದಿಂದ ಮುಕ್ತವಾಗಿರಿಸಲು ವಿಶೇಷ ಪ್ಲಾನ್ ಮಾಡಿದ ಬಿಸಿಸಿಐ!

ಜಾಂಟಿ ರೋಡ್ಸ್‌ ಕೂಡಾ ಹೊಸ ಸವಾಲನ್ನು ಎದುರಿಸಲು ಸಿದ್ದರಿರುವುದಾಗಿ ತಿಳಿಸಿದ್ಧಾರೆ.  1992ರಿಂದ 2003ರ ಅವಧಿಯಲ್ಲಿ ರೋಡ್ಸ್ ದಕ್ಷಿಣ ಆಫ್ರಿಕಾ ತಂಡದ ಪರ 52 ಟೆಸ್ಟ್ ಹಾಗೂ 245 ಏಕದಿನ ಪಂದ್ಯಗಳನ್ನಾಡಿದ್ದಾರೆ. ವಿಶ್ವಕ್ರಿಕೆಟ್ ಕಂಡ ಶ್ರೇಷ್ಠ ಕ್ಷೇತ್ರ ರಕ್ಷಕರ ಪಟ್ಟಿಯಲ್ಲಿ ರೋಡ್ಸ್ ಅಗ್ರಗಣ್ಯ ಆಟಗಾರ ಎನಿಸಿದ್ದಾರೆ.