ಏಷ್ಯಾದ ಮಹಿಳಾ ಕ್ರಿಕೆಟಿಗರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಬೇಕು. ಈ ನಿಟ್ಟಿನಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

ಕೌಲಾಲಂಪುರ(ಮಲೇಷ್ಯಾ): ಇನ್ನು ಮಹಿಳೆಯರಿಗೂ ಅಂಡರ್-19 ಟಿ20 ಏಷ್ಯಾಕಪ್ ಆಯೋಜಿಸುವುದಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥ ಜಯ್‌ ಶಾ ಘೋಷಿಸಿದ್ದಾರೆ. ಬುಧವಾರ ಮಲೇಷ್ಯಾದಲ್ಲಿ ನಡೆದ ಎಸಿಸಿ ಸಭೆಯಲ್ಲಿ ಟೂರ್ನಿ ಆಯೋಜನೆ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.

ಏಷ್ಯಾದ ಮಹಿಳಾ ಕ್ರಿಕೆಟಿಗರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಬೇಕು. ಈ ನಿಟ್ಟಿನಲ್ಲಿ ಅವರಿಗೆ ಅಂಡ‌ರ್ -19 ಟೂರ್ನಿ ಮೂಲಕ ಉತ್ತಮ ವೇದಿಕೆ ಒದಗಿಸಿಕೊಡುತ್ತೇವೆ ಎಂದು ಶಾ ತಿಳಿಸಿದ್ದಾರೆ. ಪ್ರತಿ ಬಾರಿ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಗೂ ಮುನ್ನ ಅಂಡರ್-19 ಟಿ20 ಏಷ್ಯಾಕಪ್ ನಡೆಸಲು ಎಸಿಸಿ ನಿರ್ಧರಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಈಗಾಗಲೇ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪುರುಷ ಹಾಗೂ ಮಹಿಳೆಯರ ಏಷ್ಯಾಕಪ್, ಪುರುಷರ ಏಷ್ಯಾಕಪ್ ಆಯೋಜಿಸುತ್ತಿದೆ.

ಬಾಂಗ್ಲಾ ಸರಣಿ: ಭಾರತದ ಆಟಗಾರರು ನಾಳೆ ಚೆನ್ನೈಗೆ

ಚೆನ್ನೈ: ಸೆ.19ರಿಂದ ಆರಂಭಗೊಳ್ಳಲಿರುವ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿಗಾಗಿ ಭಾರತ ತಂಡದ ಆಟಗಾರರು ಗುರುವಾರ ಚೆನ್ನೈಗೆ ಆಗಮಿಸಲಿದ್ದಾರೆ. ಸುದೀರ್ಘ ವಿಶ್ರಾಂತಿ ಪಡೆದಿರುವ ಹಲವು ಆಟಗಾರರು ಸೆ.13ರಿಂದ ನಗರದ ಚೆಪಾಕ್‌ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಲಿದ್ದಾರೆ. ಆಟಗಾರರು 6 ದಿನಗಳ ಕಾಲ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಇಂದಿನಿಂದ ದುಲೀಪ್ ಟೋಫಿ 2ನೇ ಹಂತ; ಭಾರತ ‘ಎ’ ತಂಡಕ್ಕೆ ಕನ್ನಡಿಗ ಮಯಾಂಕ್‌ ನಾಯಕ

ನಾಯಕ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಜಸ್‌ಪ್ರೀತ್ ಬೂಮ್ರಾ, ರವೀಂದ್ರ ಜಡೇಜಾ, ಮೊಹಮದ್ ಸಿರಾಜ್‌ ಸೇರಿ ಕೆಲ ಆಟಗಾರರು ಟಿ20 ವಿಶ್ವಕಪ್‌ ಬಳಿಕ ವಿಶ್ರಾಂತಿಯಲ್ಲಿದ್ದಾರೆ. ಶುಭ್‌ಮನ್‌ ಗಿಲ್‌, ಕೆ.ಎಲ್‌.ರಾಹುಲ್‌, ಯಶಸ್ವಿ ಜೈಸ್ವಾಲ್, ರಿಷಭ್‌ ಪಂತ್‌, ಕುಲ್ದೀಪ್‌ ಯಾದವ್‌, ಅಕ್ಷರ್‌ ಪಟೇಲ್‌ ಸೇರಿ ಇನ್ನೂ ಕೆಲ ಆಟಗಾರರು ದುಲೀಪ್‌ ಟ್ರೋಫಿಯ ಮೊದಲ ಹಂತದ ಪಂದ್ಯದಲ್ಲಿ ಭಾಗಿಯಾಗಿದ್ದಾರೆ. ಗುರುವಾರ ಎಲ್ಲಾ ಆಟಗಾರರು ಚೆನ್ನೈಗೆ ಆಗಮಿಸಿ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಬಾಂಗ್ಲಾದೇಶ ಆಟಗಾರರು ಭಾನುವಾರ ಚೆನ್ನೈಗೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸದ್ಯ ಮೊದಲ ಟೆಸ್ಟ್‌ಗೆ ಮಾತ್ರ ಭಾರತ ತಂಡ ಪ್ರಕಟಿಸಲಾಗಿದೆ. 2ನೇ ಪಂದ್ಯ ಕಾನ್ಪುರದಲ್ಲಿ ಸೆ.27ರಿಂದ ಅ.1ರ ವರೆಗೆ ನಡೆಯಲಿದೆ. ಆ ಪಂದ್ಯಕ್ಕೆ ಇನ್ನಷ್ಟೇ ತಂಡ ಪ್ರಕಟಗೊಳ್ಳಬೇಕಿದೆ.

ರನ್‌ ಮಷಿನ್ ವಿರಾಟ್ ಕೊಹ್ಲಿ ಹಾದಿಯಲ್ಲಿ ಹಿಟ್‌ಮ್ಯಾನ್ ರೋಹಿತ್ ಶರ್ಮಾ..!

ಮುಂಬೈನಿಂದ ಲಖನೌಗೆ ಇರಾನಿ ಕಪ್ ಪಂದ್ಯ ಶಿಫ್ಟ್‌

ಲಖನೌ: ಅ.1ರಿಂದ ಆರಂಭಗೊಳ್ಳಲಿರುವ ಇರಾನಿ ಕಪ್‌ ಪ್ರಥಮ ದರ್ಜೆ ಪಂದ್ಯವನ್ನು ಬಿಸಿಸಿಐ ಮುಂಬೈನಿಂದ ಲಖನೌಗೆ ಸ್ಥಳಾಂತರಿಸಿದೆ. ಹಾಲಿ ರಣಜಿ ಚಾಂಪಿಯನ್‌ ಮುಂಬೈ ಹಾಗೂ ರೆಸ್ಟ್‌ ಆಫ್‌ ಇಂಡಿಯಾ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಪಂದ್ಯ ಮೊದಲು ಮುಂಬೈನಲ್ಲಿ ನಿಗದಿಯಾಗಿತ್ತಾದರೂ, ನಗರದಲ್ಲಿ ಭಾರಿ ಮಳೆ ಮುನ್ಸೂಚನೆ ಇರುವ ಕಾರಣ ಲಖನೌ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ. ಇದೇ ಮೊದಲ ಬಾರಿ ಲಖನೌದಲ್ಲಿ ಇರಾನಿ ಕಪ್‌ ಪಂದ್ಯ ನಡೆಯಲಿದೆ.