ಇಂದಿನಿಂದ ದುಲೀಪ್ ಟ್ರೋಫಿ ಟೂರ್ನಿಯ ಎರಡನೇ ಹಂತದ ಪಂದ್ಯಗಳು ಆರಂಭವಾಗಲಿವೆ. ಭಾರತ 'ಎ' ತಂಡವನ್ನು ಕನ್ನಡಿಗ ಮಯಾಂಕ್‌ ಅಗರ್‌ವಾಲ್ ಮುನ್ನಡೆಸಲಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ

ಅನಂತಪುರ: ಈ ಬಾರಿ ದುಲೀಪ್ ಟ್ರೋಫಿ ಕ್ರಿಕೆಟ್‌ನಲ್ಲಿ ಸೋಲಿನ ಆರಂಭ ಪಡೆದಿರುವ ಭಾರತ 'ಎ' ಹಾಗೂ ಭಾರತ 'ಡಿ' ತಂಡಗಳು
ಗುರುವಾರದಿಂದ ಆರಂಭಗೊಳ್ಳಲಿರುವ 2ನೇ ಹಂತದ ಪಂದ್ಯದಲ್ಲಿ ಪರಸ್ಪರ ಮುಖಾಮುಖಿ ಯಾಗಲಿವೆ. ಮತ್ತೊಂದು ಪಂದ್ಯದಲ್ಲಿ ಭಾರತ 'ಬಿ' ಹಾಗೂ 'ಸಿ' ಪರಸ್ಪರ ಸೆಣಸಾಡಲಿವೆ. 

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ 'ಬಿ' ತಂಡದ ವಿರುದ್ಧ ಪಂದ್ಯದಲ್ಲಿ 'ಎ' ತಂಡಕ್ಕೆ 76 ರನ್ ಸೋಲು ಎದುರಾಗಿತ್ತು. ಹೀಗಾಗಿ ಈ ಪಂದ್ಯದಲ್ಲಿ ತಂಡಕ್ಕೆ ಗೆಲುವು ಅತ್ಯಗತ್ಯ. ಮೊದಲ ಪಂದ್ಯಕ್ಕೆ ನಾಯಕರಾಗಿದ್ದ ಶುಭಮನ್ ಗಿಲ್ ಬಾಂಗ್ಲಾದೇಶ ವಿರುದ್ಧ ಸರಣಿಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ 'ಎ' ತಂಡವನ್ನು ಮಯಾಂಕ್ ಅಗರ್‌ವಾಲ್ ಮುನ್ನಡೆಸಲಿದ್ದಾರೆ.

ಮತ್ತೊಂದೆಡೆ ಆರಂಭಿಕ ಪಂದ್ಯದಲ್ಲಿ 'ಸಿ' ತಂಡದ ವಿರುದ್ಧ ಪರಾಭವಗೊಂಡಿದ್ದ ಶ್ರೇಯಸ್ ಅಯ್ಯರ್ ನಾಯಕತ್ವದ 'ಡಿ' ತಂಡ ಕೂಡಾ ಗೆಲುವಿನ ಲಯಕ್ಕೆ ಮರಳುವ ಕಾತರದಲ್ಲಿದೆ. ರಾಜ್ಯದ ವಿದ್ವತ್ ಕಾವೇರಪ್ಪ, ದೇವದತ್ ಪಡಿಕ್ಕಲ್ ಜೊತೆ ಸಂಜು ಸ್ಯಾಮನ್, ಹರ್ಷಿತ್ ರಾಣಾ, ಶ್ರೀಖರ್ ಭರತ್, ಅರ್ಶ್‌ದೀಪ್ ಸಿಂಗ್‌ ಸೇರಿ ಪ್ರಮುಖರು ತಂಡದಲ್ಲಿದ್ದಾರೆ.

ಕ್ರಿಕೆಟಿಗರು ಮೈದಾನದಲ್ಲಿ ಚೂಯಿಂಗ್ ಗಮ್ ಅನ್ನು ಏಕೆ ಅಗಿಯುತ್ತಾರೆ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್‌

2ನೇ ಜಯ ಗುರಿ: ಇನ್ನು ಆರಂಭಿಕ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಭಾರತ 'ಬಿಹಾಗೂ 'ಸಿ' ತಂಡಗಳು 2ನೇ ಜಯದ ನಿರೀಕ್ಷೆಯಲ್ಲಿದೆ. 'ಬಿ' ತಂಡಕ್ಕೆ ಅಭಿಮನ್ಯು ಈಶ್ವರನ್ ನಾಯಕತ್ವ ವಹಿಸಲಿದ್ದು, 'ಸಿ' ತಂಡ ಋತುರಾಜ್ ಗಾಯಕ್ವಾಡ್ ಮುಂದಾಳತ್ವದಲ್ಲಿ ಕಣಕ್ಕಿಳಿಯಲಿದೆ.

ದುಲೀಪ್‌ ಟ್ರೋಫಿ: 2ನೇ ಸುತ್ತಿಗೆ ರಿಂಕು ಸಿಂಗ್‌ ಆಯ್ಕೆ

ಅನಂತಪುರ(ಆಂಧ್ರಪ್ರದೇಶ): ಸೆ.12ರಿಂದ ಅನಂತಪುರದಲ್ಲಿ ಆರಂಭಗೊಳ್ಳಲಿರುವ ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ 2ನೇ ಸುತ್ತಿನ ಪಂದ್ಯಕ್ಕೆ ರಿಂಕು ಸಿಂಗ್‌ ಸೇರಿ ಕೆಲ ಆಟಗಾರರು ಆಯ್ಕೆಯಾಗಿದ್ದಾರೆ. ಮೊದಲ ಸುತ್ತಿನಲ್ಲಿ ಆಡಿದ್ದ ಹಲವು ಆಟಗಾರರು ಸೆ.19ರಿಂದ ಆರಂಭಗೊಳ್ಳಲಿರುವ ಬಾಂಗ್ಲಾದೇಶ ವಿರುದ್ಧ ಸರಣಿಗಾಗಿ ಭಾರತ ತಂಡ ಸೇರ್ಪಡೆಗೊಂಡಿದ್ದಾರೆ. ಹೀಗಾಗಿ ಅವರ ಬದಲು ಇತರ ಕೆಲ ಆಟಗಾರರನ್ನು ದುಲೀಪ್‌ ಟ್ರೋಫಿಗೆ ಆಯ್ಕೆ ಮಾಡಲಾಗಿದೆ. 

ಆರ್‌ಸಿಬಿ ತಂಡದಲ್ಲಿ ಮೇಜರ್‌ ಸರ್ಜರಿ; ಇಬ್ಬರು ಟಿ20 ಸ್ಪೆಷಲಿಸ್ಟ್‌ಗಳಿಗೆ ಗೇಟ್‌ಪಾಸ್ ನೀಡಲು ಬೆಂಗಳೂರು ಫ್ರಾಂಚೈಸಿ ನಿರ್ಧಾರ?

ರಿಷಭ್‌ ಪಂತ್‌ ಹಾಗೂ ಯಶಸ್ವಿ ಜೈಸ್ವಾಲ್‌ ಬದಲು ಭಾರತ ‘ಬಿ’ ತಂಡಕ್ಕೆ ರಿಂಕು ಹಾಗೂ ಸುಯಶ್‌ ಪ್ರಭುದೇಸಾಯಿ ಆಯ್ಕೆಯಾಗಿದ್ದಾರೆ. ಭಾರತ ‘ಡಿ’ ತಂಡಕ್ಕೆ ಅಕ್ಷರ್‌ ಪಟೇಲ್‌ ಬದಲು ನಿಶಾಂತ್‌ ಸಂಧು, ಭಾರತ ‘ಎ’ ತಂಡಕ್ಕೆ ತುಷಾರ್‌ ದೇಶಪಾಂಡೆ ಬದಲು ಕನ್ನಡಿಗ ವಿದ್ವತ್‌ ಕಾವೇರಪ್ಪ ಸೇರ್ಪಡೆಗೊಂಡಿದ್ದಾರೆ. ಇನ್ನು, ಸರ್ಫರಾಜ್‌ ಖಾನ್‌ ಹಾಗೂ ಅಕಾಶ್‌ದೀಪ್‌ ಬಾಂಗ್ಲಾ ಸರಣಿಗೆ ಆಯ್ಕೆಯಾದರೂ ದುಲೀಪ್‌ ಟ್ರೋಫಿಯ 2ನೇ ಸುತ್ತಿನ ಪಂದ್ಯದಲ್ಲಿ ಆಡಲಿದ್ದಾರೆ. ಸೆ.15ರ ಬಳಿಕ ಭಾರತ ತಂಡ ಕೂಡಿಕೊಳ್ಳಲಿದ್ದಾರೆ.

ದುಲೀಪ್‌ ಟ್ರೋಫಿ ಕ್ರಿಕೆಟ್‌: ಭಾರತ ‘ಎ’ ತಂಡಕ್ಕೆ ಕನ್ನಡಿಗ ಮಯಾಂಕ್‌ ನಾಯಕ

ಅನಂತಪುರ(ಆಂಧ್ರಪ್ರದೇಶ): ಬಾಂಗ್ಲಾದೇಶ ವಿರುದ್ಧ ಸರಣಿಗೆ ಶುಭ್‌ಮನ್‌ ಗಿಲ್‌ ಭಾರತ ತಂಡಕ್ಕೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ದುಲೀಪ್‌ ಟ್ರೋಫಿ ಕ್ರಿಕೆಟ್‌ನ ಭಾರತ ‘ಎ’ ತಂಡಕ್ಕೆ ಕರ್ನಾಟಕದ ಮಯಾಂಕ್‌ ಅಗರ್‌ವಾಲ್‌ ನಾಯಕನಾಗಿ ನೇಮಕಗೊಂಡಿದ್ದಾರೆ.

ಭಾರತ ‘ಡಿ’ ತಂಡದ ವಿರುದ್ಧ ಸೆ.12ರಿಂದ ಪಂದ್ಯ ಆರಂಭಗೊಳ್ಳಲಿದೆ. ಬೆಂಗಳೂರಿನಲ್ಲಿ ನಡೆದಿದ್ದ ‘ಬಿ’ ತಂಡದ ವಿರುದ್ಧದ ಮೊದಲ ಪಂದ್ಯದಲ್ಲಿ ‘ಎ’ ತಂಡಕ್ಕೆ ಗಿಲ್‌ ನಾಯಕರಾಗಿದ್ದರು. ಅವರು ಭಾರತ ತಂಡ ಸೇರಿಕೊಳ್ಳಲಿರುವ ಕಾರಣ, ಮಯಾಂಕ್‌ಗೆ ಹೊಣೆ ನೀಡಲಾಗಿದೆ.

ಇದೇ ವೇಳೆ ‘ಎ’ ತಂಡದಲ್ಲಿದ್ದ ಕೆ.ಎಲ್‌.ರಾಹುಲ್‌, ಧ್ರುವ್‌ ಜುರೆಲ್‌, ಆಕಾಶ್‌ದೀಪ್, ಕುಲ್ದೀಪ್‌ ಯಾದವ್‌ ಕೂಡಾ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅವರ ಬದಲು ಪ್ರಸಿದ್ಧ್‌ ಕೃಷ್ಣ, ಅಕ್ಷಯ್‌ ನಾರಂಗ್‌, ಶೇಖ್‌ ರಶೀದ್‌, ಶಮ್ಸ್‌ ಮುಲಾನಿ ‘ಎ’ ತಂಡ ಸೇರ್ಪಡೆಗೊಂಡಿದ್ದಾರೆ. ಇತರ 3 ತಂಡಗಳಿಗೂ ಕೆಲ ಬದಲಿ ಆಟಗಾರರನ್ನು ಸೇರಿಸಿಕೊಳ್ಳಲಾಗಿದೆ.