ವಿಜಯ್ ಹಜಾರೆ ಟ್ರೋಫಿ: ಅಪರೂಪದ ವಿಶ್ವದಾಖಲೆ ಬರೆದ ಕನ್ನಡಿಗ ಕರುಣ್ ನಾಯರ್!

ಕರ್ನಾಟಕದ ಮಾಜಿ ಕ್ರಿಕೆಟಿಗ ಕರುಣ್ ನಾಯರ್ ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ ಔಟಾಗದೆ ಗರಿಷ್ಠ ರನ್‌ಗಳ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ 5 ಪಂದ್ಯಗಳಿಂದ 542 ರನ್ ಗಳಿಸಿದ ಅವರು, ನ್ಯೂಜಿಲೆಂಡ್‌ನ ಜೇಮ್ಸ್ ಫ್ರಾಂಕ್ಲಿನ್ ಅವರ ದಾಖಲೆಯನ್ನು ಮುರಿದರು. ಕರುಣ್ ಅವರ ಸಾಧನೆಯ ನೆರವಿನಿಂದ ವಿದರ್ಭ ಉತ್ತರ ಪ್ರದೇಶವನ್ನು ಸೋಲಿಸಿತು.

World record alert Karun Nair achieves sensational milestone in List A cricket kvn

ವಿಜಯನಗರಂ(ಆಂಧ್ರ ಪ್ರದೇಶ): ಕರ್ನಾಟಕದ ಮಾಜಿ ಕ್ರಿಕೆಟಿಗ, ಸದ್ಯ ವಿದರ್ಭ ತಂಡದಲ್ಲಿರುವ ಕರುಣ್ ನಾಯರ್ ಲಿಸ್ಟ್ 'ಎ' (50 ಓವರ್) ಕ್ರಿಕೆಟ್ ನಲ್ಲಿ ಔಟಾಗದೆ ಗರಿಷ್ಠ ರನ್ ಸಿಡಿಸಿದ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಕರುಣ್ ಈ ಬಾರಿ ವಿಜಯ್ ಹಜಾರೆ ಏಕದಿನ ಟೂರ್ನಿಯ 5 ಪಂದ್ಯಗಳಲ್ಲಿ 542 ರನ್ ಕಲೆಹಾಕಿದ್ದಾರೆ. ಅವರು ಔಟಾಗಿದ್ದು ಒಮ್ಮೆ ಮಾತ್ರ. ಆರಂಭಿಕ 4 ಪಂದ್ಯಗಳಲ್ಲಿ ಕ್ರಮವಾಗಿ 111, 44, 163, 111 ರನ್ ಗಳಿಸಿದ್ದ ಅವರು, ಶುಕ್ರವಾರ ಉತ್ತರ ಪ್ರದೇಶ ವಿರುದ್ಧ 112 ರನ್ ಸಿಡಿಸಿ ಔಟಾದರು ಈ ಮೊದಲು, ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ ಔಟಾಗದೆ ಗರಿಷ್ಠ ರನ್ ಬಾರಿಸಿದ ದಾಖಲೆ ನ್ಯೂಜಿಲೆಂಡ್‌ನ ಜೇಮ್ ಫ್ರಾಂಕ್ಲಿನ್ ಹೆಸರಲ್ಲಿತ್ತು. ಅವರು 2010ರಲ್ಲಿ 527 ರನ್ ಗಳಿಸಿದ್ದರು. ಅದನ್ನು ಕರುಣ್ ಮುರಿದಿದ್ದಾರೆ.

ಟೆಸ್ಟ್‌ ಟೀಮ್‌ನಿಂದಲೇ ಕ್ಯಾಪ್ಟನ್‌ಗೆ ಕೊಕ್‌: ಸರಣಿ ಮಧ್ಯವೇ ತಂಡದಿಂದ ಹೊರಬಿದ್ದ ಮೊದಲ ನಾಯಕ ರೋಹಿತ್

ಕರುಣ್ ಸಾಹಸದಿಂದ ವಿದರ್ಭ 8 ವಿಕೆಟ್ ಜಯಗಳಿಸಿತು. ಉತ್ತರ ಪ್ರದೇಶ 8 ವಿಕೆಟ್‌ಗೆ 307 ರನ್ ಗಳಿಸಿದರೆ, ವಿದರ್ಭ 47.2 ಓವರಲ್ಲಿ 2 ವಿಕೆಟ್‌ಗೆ 313 ರನ್ ಗಳಿಸಿ ಜಯ ಗಳಿಸಿತು.

ವಿಜಯ್ ಹಜಾರೆ ಏಕದಿನ ಟೂರ್ನಿಯಲ್ಲಿ ಕರ್ನಾಟಕಕ್ಕೆ 5ನೇ ಜಯ: ನಾಕೌಟ್‌ಗೆ ಹತ್ತಿರ

ಅಹಮದಾಬಾದ್: ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಕರ್ನಾ ಟಕ 5ನೇ ಗೆಲುವು ದಾಖಲಿಸಿದೆ. ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ರಾಜ್ಯ ತಂಡ ಶುಕ್ರವಾರ ಸೌರಾಷ್ಟ್ರವನ್ನು 60 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ ಮಯಾಂಕ್ ಅಗರ್‌ವಾಲ್ ಬಳಗ 'ಸಿ' ಗುಂಪಿನಲ್ಲಿ 20 ಅಂಕಗಳನ್ನು ಸಂಪಾದಿಸಿತು. ಆದರೆ ನೆಟ್ ರನ್‌ರೇಟ್ ಆಧಾರದಲ್ಲಿ ತಂಡ 2ನೇ ಸ್ಥಾನಕ್ಕೆ ಜಾರಿದ್ದು, ಪಂಜಾಬ್ (20 ಅಂಕ) ಅಗ್ರಸ್ತಾನಕ್ಕೇರಿದೆ. ಕೊನೆ ಪಂದ್ಯದಲ್ಲಿ ದೊಡ್ಡ ಅಂತರದಲ್ಲಿ ಗೆದ್ದರೆ ಕರ್ನಾಟಕ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಲಿದೆ.

ಸಿಡ್ನಿ ಟೆಸ್ಟ್‌; ಸಿರಾಜ್, ಪ್ರಸಿದ್ಧ್ ಮಾರಕ ದಾಳಿ, ಟೀಂ ಇಂಡಿಯಾಗೆ ಅಲ್ಪ ಮುನ್ನಡೆ!

ಶುಕ್ರವಾರದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜ್ಯ ತಂಡ 1 ವಿಕೆಟ್‌ಗೆ 349 ರನ್ ಕಲೆಹಾಕಿತು. ಅನೀಶ್ ಕೆ.ವಿ 93, ಮಯಾಂಕ್ ಅಗರ್‌ವಾಲ್ 69, ಅಭಿನವ್ 44 ಹಾಗೂ ಆರ್.ಸ್ಮರಣ್ 40 ರನ್ ಸಿಡಿಸಿದರು. ದೊಡ್ಡ ಗುರಿಯನ್ನು ಬೆನ್ನತ್ತಿದ ಸೌರಾಷ್ಟ್ರ 47.5 ಓವರ್‌ಗಳಲ್ಲಿ 289 ರನ್‌ಗೆ ಆಲೌಟಾ ಯಿತು. ಆರಂಭಿಕ ಆಟಗಾರ ಹಾರ್ವಿಕ್ 114 ರನ್ ಸಿಡಿಸಿದರೂ, ಇತರರು ಮಿಂಚಲಿಲ್ಲ. ವಾಸುಕಿ ಕೌಶಿಕ್ 5 ವಿಕೆಟ್ ಕಿತ್ತರು.

ಸ್ಕೋರ್: 
ಕರ್ನಾಟಕ 50 ಓವರಲ್ಲಿ 349/7 (ಅನೀಶ್ 93, ಮಯಾಂಕ್ 69, ಅಭಿನವ್ 44, ಧರ್ಮೇಂದ್ರ ಸಿಂಗ್ 3-61),
ಸೌರಾಷ್ಟ್ರ 47.5 ಓವರಲ್ಲಿ 289/10(ಹಾರ್ವಿಕ್ 114, ಜಯ್ 40, ಅರ್ಪಿತ್ 40, ಕೌಶಿಕ್ 5-51) 

ಪಂದ್ಯಶ್ರೇಷ್ಠ: ವಾಸುಕಿ

Latest Videos
Follow Us:
Download App:
  • android
  • ios