ಜೋಹಾನ್ಸ್‌ಬರ್ಗ್‌(ಡಿ.19): ದಿಗ್ಗಜ ಆಲ್ರೌಂಡರ್‌ ಜಾಕ್‌ ಕಾಲಿಸ್‌ರನ್ನು ಬುಧವಾರ ತಂಡದ ಬ್ಯಾಟಿಂಗ್‌ ಸಲಹೆಗಾರರನ್ನಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಸಂಸ್ಥೆ ನೇಮಿಸಿದೆ. ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್‌ ಹಾಗೂ ಆಸ್ಪ್ರೇಲಿಯಾ ತಂಡಗಳಿಗೆ ಆತಿಥ್ಯ ವಹಿಸಲಿದ್ದು, ಆ ಸರಣಿಗಳಿಗೆ ಕಾಲಿಸ್‌ ಸಲಹೆಗಾರನಾಗಿ ಕಾರ್ಯನಿರ್ವಹಿಸಲಿದ್ದಾರೆ. 

ಶೀಘ್ರದಲ್ಲಿ ಡಿವಿಲಿಯರ್ಸ್ ತಂಡಕ್ಕೆ ವಾಪಸ್; ನಾಯಕ ಡುಪ್ಲೆಸಿಸ್ ಸ್ಪಷ್ಟನೆ!

2016ರಿಂದ 2019ರ ವರೆಗೂ ಕಾಲಿಸ್‌, ಐಪಿಎಲ್‌ನ ಕೆಕೆಆರ್‌ ತಂಡದ ಪ್ರಧಾನ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು. 2015ರಲ್ಲಿ ತಂಡದ ಬ್ಯಾಟಿಂಗ್‌ ಸಲಹೆಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮಾಜಿ ವೇಗದ ಬೌಲರ್‌ ಚಾರ್ಲ್ ಲಾಂಗವೆಲ್ಟ್‌ರನ್ನು ಬೌಲಿಂಗ್‌ ಕೋಚ್‌ ಆಗಿ ನೇಮಕ ಮಾಡಿಕೊಳ್ಳಲಾಗಿದೆ. ಇತ್ತೀಚೆಗಷ್ಟೇ ಅವರು ಬಾಂಗ್ಲಾದೇಶದ ವೇಗದ ಬೌಲಿಂಗ್‌ ಕೋಚ್‌ ಆಗಿ ನೇಮಕಗೊಂಡಿದ್ದರು. ಆ ಹುದ್ದೆಗೆ ಲಾಂಗವೆಲ್ಟ್‌ ರಾಜೀನಾಮೆ ನೀಡಿದ್ದಾರೆ.

ಇಂದು IPL ಆಟಗಾರರ ಹರಾಜು; ಯಾರಿಗೆ ಸಿಗುತ್ತೆ ಜಾಕ್‌ಪಾಟ್..?

44 ವರ್ಷದ ಕಾಲಿಸ್ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 25,534 ರನ್ ಹಾಗೂ 577 ವಿಕೆಟ್ ಕಬಳಿಸುವ ಮೂಲಕ ಆಧುನಿಕ ಕ್ರಿಕೆಟ್’ನ ಶ್ರೇಷ್ಠ ಆಲ್ರೌಂಡರ್ ಆಗಿ ಹೊರಹೊಮ್ಮಿದ್ದಾರೆ. ಈಗಾಗಲೇ ದಕ್ಷಿಣ ಆಫ್ರಿಕಾ ತಂಡಕ್ಕೆ ನೂತನ ಕೋಚ್ ಆಗಿ ಮಾರ್ಕ್ ಬೌಚರ್ ನೇಮಕವಾಗಿದ್ದು, ಬಲಿಷ್ಠ ತಂಡ ಕಟ್ಟಲು ಹರಿಣಗಳ ಕ್ರಿಕೆಟ್ ಮಂಡಳಿ ಸಜ್ಜಾಗಿದೆ.