ಜೋಹಾನ್ಸ್‌ಬರ್ಗ್(ಡಿ.17): ವಿಶ್ವ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಾ ಕಾದಿದೆ. ಎಲ್ಲಾ ಮಾದರಿ ಕ್ರಿಕೆಟ್‌ಗೆ ದಿಢೀರ್ ವಿದಾಯ ಹೇಳಿ ಅಚ್ಚರಿ ಮೂಡಿಸಿದ್ದ ಸೌತ್ ಆಫ್ರಿಕಾ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಮತ್ತೆ ತಂಡಕ್ಕೆ ವಾಪಸ್ಸಾಗುವ ಸಾಧ್ಯತೆ ಹೆಚ್ಚಿದೆ. ಈಗಾಲೇ ತಂಡದ ನೂತನ ಕೋಚ್ ಮಾರ್ಕ್ ಬೌಷರ್ ಡಿವಿಲಿಯರ್ಸ್ ಕಮ್‌ಬ್ಯಾಕ್  ಕುರಿತು ಬೆಳಕು ಚೆಲ್ಲಿದ್ದರೆ, ಇದೀಗ ನಾಯಕ ಫಾಫ್ ಡುಪ್ಲೆಸಿಸ್ ಸ್ಪಷ್ಟ ಪಡಿಸಿದ್ದಾರೆ.

ಇದನ್ನೂ ಓದಿ: MSL 2019: ಐಪಿಎಲ್‌ಗೂ ಮುನ್ನ ಎಬಿಡಿ ಭರ್ಜರಿ ಫಾರ್ಮ್; 360 ಡಿಗ್ರಿ ಪರ್ಫಾಮೆನ್ಸ್!

ಕಳೆದ 3 ತಿಂಗಳಿಂದ ಡಿವಿಲಿಯರ್ಸ್ ಜೊತೆ ಮಾತುಕತೆ ನಡೆಯುತ್ತಿದೆ. ಮಾರ್ಕ್ ಬೌಷರ್ ತಂಡದ ಕೋಚ್ ಜವಾಬ್ದಾರಿ ವಹಿಸಿದ ಬೆನ್ನಲ್ಲೇ ಡಿವಿಲಿಯರ್ಸ್ ವಾಪಸ್ ಕರೆತರುವ ಕಾರ್ಯಕ್ಕೆ ಮತ್ತಷ್ಟು ವೇಗ ಸಿಕ್ಕಿದೆ. ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೂ ಮೊದಲು ಡಿವಿಲಿಯರ್ಸ್ ತಂಡಕ್ಕೆ ಕಮ್‌ಬ್ಯಾಕ್ ಮಾಡಲಿದ್ದಾರೆ ಎಂದು ಡುಪ್ಲೆಸಿಸ್ ಹೇಳಿದ್ದಾರೆ.

ಇದನ್ನೂ ಓದಿ: ಪಾಕ್ ಸೂಪರ್ ಲೀಗ್ ಟೂರ್ನಿಯಿಂದ ಹಿಂದೆ ಸರಿದ ಎಬಿ ಡಿವಿಲಿಯರ್ಸ್!

ಡಿವಿಲಿಯರ್ಸ್ ವಿದಾಯದ ಬಳಿಕವೂ ಟಿ20 ಲೀಗ್ ಕ್ರಿಕೆಟ್ ಆಡುತ್ತಿದ್ದಾರೆ. ಹೀಗಾಗಿ ಮತ್ತೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಆಡುವುದು ಎಬಿಡಿಗೆ ಕಷ್ಟವಾಗಲ್ಲ. ಎಬಿಡಿ ತಂಡ ಸೇರಿಕೊಂಡರೆ ಮುಂಬರುವ ಟಿ20  ವಿಶ್ವಕಪ್ ಟೂರ್ನಿಯಲ್ಲಿ ಸೌತ್ ಆಫ್ರಿಕಾ ಅತ್ಯುತ್ತಮ ಪ್ರದರ್ಶನ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಡುಪ್ಲೆಸಿಸ್ ಹೇಳಿದ್ದಾರೆ.

2019ರ ವಿಶ್ವಕಪ್ ಟೂರ್ನಿಗೂ ಮುನ್ನ ಡಿವಿಲಿಯರ್ಸ್ ಡಿಢೀರ್ ವಿದಾಯ ಹೇಳಿದ್ದರು. ಇದು ವಿಶ್ವ ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ನೀಡಿತ್ತು. 2019ರ ವಿಶ್ವಕಪ್ ಟೂರ್ನಿಗೆ ಎಬಿಡಿ ಕರೆತರುವ ಪ್ರಯತ್ನ ನಡೆದಿತ್ತು. ಆದರೆ ಕೈಗೂಡಿರಲಿಲ್ಲ. ಇದೀಗ ಟಿ20 ವಿಶ್ವಕಪ್ ಟೂರ್ನಿಗೆ ಎಬಿಡಿ ಮರಳುವ ಸಾಧ್ಯತೆ ಹೆಚ್ಚಿದೆ.