ಮುಂಬೈನಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು ಯಶಸ್ವಿಯಾಗಿ ಮುಕ್ತಾಯತಂಡದ ಆಯ್ಕೆಯ ಕುರಿತಂತೆ ಹರ್ಷ ವ್ಯಕ್ತಪಡಿಸಿದ ಆರ್‌ಸಿಬಿ ಕ್ರಿಕೆಟ್ ಆಪರೇಷನ್ ಡೈರೆಕ್ಟರ್‌ ಮೈಕ್ ಹೆಸನ್ಮೂಲ ಬೆಲೆಗೆ ವಿದೇಶಿ ಆಟಗಾರ್ತಿಯರನ್ನು ಖರೀದಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಹೆಸನ್

ಮುಂಬೈ(ಫೆ.14): ಚೊಚ್ಚಲ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್ ಲೀಗ್‌ ಹರಾಜು ಮುಂಬೈನಲ್ಲಿ ಯಶಸ್ವಿಯಾಗಿಯೇ ಸಂಪನ್ನಗೊಂಡಿದೆ. ಫೆಬ್ರವರಿ 13ರಂದು ನಡೆದ ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿಯು ಸೇರಿದಂತೆ ಒಟ್ಟು 5 ಫ್ರಾಂಚೈಸಿಗಳು ಪಾಲ್ಗೊಂಡಿದ್ದವು. ಇನ್ನು ಹರಾಜಿನ ಬಳಿಕ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿಯ ಕ್ರಿಕೆಟ್ ಆಪರೇಷನ್ ಡೈರೆಕ್ಟರ್ ಮೈಕ್ ಹೆಸನ್ ಸಂತಸ ವ್ಯಕ್ತಪಡಿಸಿದ್ದಾರೆ.

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿಯು, ಹರಾಜಿನಲ್ಲಿ ದಾಖಲೆಯ 3.40 ಕೋಟಿ ರುಪಾಯಿ ನೀಡಿ ಸ್ಮೃತಿ ಮಂಧನಾ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತು. ಇದಾದ ಬಳಿಕ ಸೋಫಿ ಡಿವೈನ್‌, ಎಲೈಸಿ ಪೆರ್ರಿ, ರಿಚಾ ಘೋಷ್ ಹಾಗೂ ಹೀಥರ್ ನೈಟ್‌ ಅವರಂತಹ ಟಿ20 ಸ್ಪೆಷಲಿಸ್ಟ್‌ಗಳನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು. ಅದರಲ್ಲೂ ಇಂಗ್ಲೆಂಡ್ ತಂಡದ ನಾಯಕಿ ಹೀಥರ್ ನೈಟ್‌ ಹಾಗೂ ಆಸ್ಟ್ರೇಲಿಯಾದ ವೇಗಿ ಮೇಗನ್‌ ಶುಟ್‌ ಅವರನ್ನು ಮೂಲಬೆಲೆ 40 ಲಕ್ಷ ರುಪಾಯಿಗೆ ಸಿಕ್ಕಿದ್ದು, ಅನಿರೀಕ್ಷಿತವೇ ಸರಿ ಎಂದು ಹೆಸನ್ ಬಣ್ಣಿಸಿದ್ದಾರೆ.

ಹರಾಜು ಮುಕ್ತಾಯದ ಬಳಿಕ ಮಾತನಾಡಿದ ಮೈಕ್ ಹೆಸನ್, "ನಮಗೆ ವಿಶ್ವದರ್ಜೆಯ ಆಲ್ರೌಂಡರ್‌ಗಳು ಸಿಕ್ಕಿದರು. ಹೀಗಾಗಿ ಸಾಕಷ್ಟು ಕೊನೆಯವರೆಗೂ ಬ್ಯಾಟಿಂಗ್ ಮಾಡಬಹುದು. ಇದರ ಜತೆಗೆ ನಮ್ಮ ತಂಡದಲ್ಲಿ ಸಾಕಷ್ಟು ಒಳ್ಳೆಯ ಬೌಲಿಂಗ್ ಆಯ್ಕೆಗಳು ಇವೆ. ಮೇಗನ್‌ ಶುಟ್‌ ಅವರು ನಮಗೆ ಮೂಲ ಬೆಲೆಗೆ ಸಿಗುತ್ತಾರೆ ಎಂದುಕೊಂಡಿರಲಿಲ್ಲ. ಕನಿಷ್ಠ ಒಂದು ಕೋಟಿ ರುಪಾಯಿಗೆ ಅವರು ಹರಾಜಾಗುವ ನಿರೀಕ್ಷೆಯಿತ್ತು. ಅದೇ ರೀತಿ ಹೀಥರ್ ನೈಟ್‌ ವಿಚಾರದಲ್ಲೂ ನಮಗೆ ಹಾಗೆ ಅನಿಸಿತು. ಈ ಇಬ್ಬರು ಆಟಗಾರ್ತಿಯರು ಮೂಲ ಬೆಲೆಗೆ ನಮಗೆ ಸಿಕ್ಕಿದ್ದು ನಿಜಕ್ಕೂ ನಮ್ಮ ನಿರೀಕ್ಷೆಗೂ ಮೀರಿದ ಒಳ್ಳೆಯ ಬಿಡ್ಡಿಂಗ್" ಎಂದು ಅಭಿಪ್ರಾಯಪಟ್ಟಿದ್ದಾರೆ.

Scroll to load tweet…

ಇಂಗ್ಲೆಂಡ್ ತಂಡದ ನಾಯಕಿಯೂ ಆಗಿರುವ ಹೀಥರ್ ನೈಟ್‌ಗೆ ಒಳ್ಳೆಯ ನಾಯಕತ್ವದ ಅನುಭವವೂ ಇದೆ. ಹೀಥರ್ ನೈಟ್‌ ಇಂಗ್ಲೆಂಡ್‌ ಪರ 95 ಟಿ20 ಪಂದ್ಯಗಳನ್ನಾಡಿ 1520 ರನ್ ಹಾಗೂ 21 ವಿಕೆಟ್ ಕಬಳಿಸಿದ್ದಾರೆ. ಇದಷ್ಟೇ ಅಲ್ಲದೇ ಹೀಥರ್ ನೈಟ್, ಇಂಗ್ಲೆಂಡ್ ಪರ 129 ಏಕದಿಕ ಹಾಗೂ 10 ಟೆಸ್ಟ್‌ ಪಂದ್ಯಗಳನ್ನೂ ಆಡಿದ್ದಾರೆ.

WPL Auction: ವುಮೆನ್ಸ್‌ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ವೈರಲ್ ಆದ ಟಾಪ್ 10 ಮೀಮ್ಸ್‌ಗಳಿವು..!

ಇನ್ನು ಆಸ್ಟ್ರೇಲಿಯಾದ ವೇಗದ ಬೌಲರ್‌ ಮೇಗನ್ ಶುಟ್‌, ಆಸ್ಟ್ರೇಲಿಯಾ ಪರ 91 ಟಿ20 ಪಂದ್ಯಗಳನ್ನಾಡಿ 116 ವಿಕೆಟ್‌ ಕಬಳಿಸಿದ್ದಾರೆ. ಇನ್ನು ಒಟ್ಟಾರೆ ಮೂರು ಮಾದರಿಯ ಕ್ರಿಕೆಟ್‌ನಿಂದ ಮೇಗನ್ ಶುಟ್‌ 237 ಬಲಿ ಪಡೆದುಕೊಂಡಿದ್ದಾರೆ.

WPL ಹರಾಜಿನ ಬಳಿಕ ಮಹಿಳಾ ಆರ್‌ಸಿಬಿ ತಂಡ ಹೀಗಿದೆ ನೋಡಿ

1. ಸ್ಮೃತಿ ಮಂಧ​​ನಾ .3.4 ಕೋಟಿ ರುಪಾಯಿ
2. ರಿಚಾ ಘೋಷ್‌ 1.9 ಕೋಟಿ ರುಪಾಯಿ
3. ಎಲೈಸಿ ಪೆರ್ರಿ 1.7 ಕೋಟಿ ರುಪಾಯಿ
4. ರೇಣುಕಾ ಸಿಂಗ್‌ 1.5 ಕೋಟಿ ರುಪಾಯಿ
5. ಸೋಫಿ ಡಿವೈ​ನ್‌ 50 ಲಕ್ಷ ರುಪಾಯಿ
6. ಹೀಥರ್‌ ನೈಟ್‌ 40 ಲಕ್ಷ ರುಪಾಯಿ
7. ಮೇಗನ್‌ ಶುಟ್‌ 40 ಲಕ್ಷ ರುಪಾಯಿ
8. ಕನಿಕಾ ಅಹುಜಾ 35 ಲಕ್ಷ ರುಪಾಯಿ
9. ವಾನ್‌ ನೀಕಕ್‌ 30 ಲಕ್ಷ ರುಪಾಯಿ
10. ಎರಿನ್‌ ಬರ್ನ್ಸ್‌ 30 ಲಕ್ಷ ರುಪಾಯಿ
11. ಪ್ರೀತಿ ಬೋಸ್‌ 30 ಲಕ್ಷ ರುಪಾಯಿ
12. ಕೋಮಲ್‌ ಜಂಜದ್‌ 25 ಲಕ್ಷ ರುಪಾಯಿ
13. ಆಶಾ ಶೋಭ​ನಾ 10 ಲಕ್ಷ ರುಪಾಯಿ
14. ದಿಶಾ ಕಸಟ್‌ 10 ಲಕ್ಷ ರುಪಾಯಿ
15. ಇಂದ್ರಾನಿ ರಾಯ್‌ 10 ಲಕ್ಷ ರುಪಾಯಿ
16. ಪೂನಂ ಕೆಮ್ನ​ರ್‌ 10 ಲಕ್ಷ ರುಪಾಯಿ
17. ಸಹನಾ ಪವಾ​ರ್‌ 10 ಲಕ್ಷ ರುಪಾಯಿ
18. ಶ್ರೇಯಾಂಕಾ ಪಾಟೀ​ಲ್‌ 10 ಲಕ್ಷ ರುಪಾಯಿ.