Asianet Suvarna News Asianet Suvarna News

ಆಸ್ಟ್ರೇಲಿಯಾ ನಾಯಕನಾಗುವ ಅವಕಾಶ ಸಿಕ್ಕಿದರೆ ಅದು ನನ್ನ ಸೌಭಾಗ್ಯ: ಡೇವಿಡ್ ವಾರ್ನರ್

* ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕರಾಗಲು ಡೇವಿಡ್ ವಾರ್ನರ್ ಆಸಕ್ತಿ
* ಆ್ಯರೋನ್ ಫಿಂಚ್‌ ನಿವೃತ್ತಿಯಿಂದ ತೆರವಾಗಿರುವ ಆಸೀಸ್ ಏಕದಿನ ನಾಯಕತ್ವ
* ಆ್ಯರೋನ್ ಫಿಂಚ್‌ ಕೂಡಾ ವಾರ್ನರ್ ಪರ ಬ್ಯಾಟ್ ಬೀಸಿದ್ದರು.

It Would be a privilege to take up Australia captaincy Says David Warner kvn
Author
First Published Sep 30, 2022, 5:20 PM IST

ಮೆಲ್ಬೊರ್ನ್‌(ಸೆ.30): ಸ್ಪೋಟಕ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್‌, ತಾವು ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕರಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಆ್ಯರೋನ್ ಫಿಂಚ್‌, ಆಸ್ಟ್ರೇಲಿಯಾ ಏಕದಿನ ತಂಡದ ನಾಯಕತ್ವಕ್ಕೆ ವಿದಾಯ ಘೋಷಿಸಿದ್ದಾರೆ. ಇನ್ನು ಟಿ20 ವಿಶ್ವಕಪ್ ಬಳಿಕ ಫಿಂಚ್ ಚುಟುಕು ಕ್ರಿಕೆಟ ಮಾದರಿಗೂ ಗುಡ್‌ ಬೈ ಹೇಳುವ ಸಾಧ್ಯತೆಯಿದೆ. ಹೀಗಾಗಿ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ಹೊಸ ನಾಯಕನ ಹುಡುಕಾಟದಲ್ಲಿದೆ.

ಡೇವಿಡ್ ವಾರ್ನರ್‌ ಅವರಿಗೆ ನಾಯಕತ್ವದ ಗುಣಗಳಿದ್ದಿದ್ದರಿಂದಲೇ ಉಪನಾಯಕ ಪಟ್ಟ ಕಟ್ಟಲಾಗಿತ್ತು. ಆದರೆ 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಕೇಪ್‌ಟೌನ್‌ನಲ್ಲಿ ನಡೆದ ಟೆಸ್ಟ್ ವೇಳೆ ಬಾಲ್‌ ಟ್ಯಾಂಪರಿಂಗ್ ಮಾಡಿದ ತಪ್ಪಿಗಾಗಿ ನಾಯಕತ್ವದ ಮೇಲೆ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮೇಲೆ ಆಜೀವ ಶಿಕ್ಷೆ ವಿಧಿಸಲಾಗಿತ್ತು. ಆದರೆ ಕಳೆದ ಆ್ಯಷಸ್ ಟೆಸ್ಟ್ ಸರಣಿಯ ಸಂದರ್ಭದಲ್ಲಿ ಸ್ಟೀವ್ ಸ್ಮಿತ್ ನಾಯಕತ್ವ ಸ್ವೀಕರಿಸಿ ಒಂದು ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದರು. ಇನ್ನು ಡೇವಿಡ್ ವಾರ್ನರ್‌ ನಾಯಕರಾಗುವುದು ಬಾಕಿ ಇದೆ.

ಇದುವರೆಗೂ ನಾಯಕತ್ವದ ಕುರಿತಂತೆ ನನ್ನ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ನಡುವೆ ಅಂತಹ ಯಾವುದೇ ಚರ್ಚೆಗಳು ನಡೆದಿಲ್ಲ. ಆದರೆ ಒಂದಂತೂ ಸತ್ಯ, ದೇಶದ ನಾಯಕನಾಗಿ ತಂಡವನ್ನು ಮುನ್ನಡೆಸುವುದು ದೊಡ್ಡ ಸೌಭಾಗ್ಯ. ಆದರೆ ಸದ್ಯದ ನನ್ನ ಗುರಿ ಕ್ರಿಕೆಟ್ ಆಡುವುದು ಎಂದು ಡೇವಿಡ್ ವಾರ್ನರ್ ಹೇಳಿದ್ದಾರೆ.

ಆ್ಯರೋನ್ ಫಿಂಚ್ ಅವರಿಂದ ತೆರವಾದ ನಾಯಕ ಸ್ಥಾನಕ್ಕೆ ಡೇವಿಡ್ ವಾರ್ನರ್‌, ಸ್ಟೀವ್ ಸ್ಮಿತ್ ಹಾಗೂ ಪ್ಯಾಟ್ ಕಮಿನ್ಸ್‌ ಸಂಭಾವ್ಯ ಅಭ್ಯರ್ಥಿಗಳೆನಿಸಿದ್ದಾರೆ. ಆದರೆ ನಾಯಕತ್ವದಲ್ಲಿ ಬ್ಯಾನ್ ಆಗಿದ್ದು ಹಾಗೂ ವರ್ಕ್‌ಲೋಡ್‌ ಗಮನದಲ್ಲಿಟ್ಟುಕೊಂಡು ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿಯುವ ಯಾವ ಆಟಗಾರನಿಗೆ ನಾಯಕ ಪಟ್ಟ ಕಟ್ಟಲಿದೆ ಎನ್ನುವ ಕುತೂಹಲ ಜೋರಾಗಿದೆ. 

ಈತನೇ ಆಸ್ಟ್ರೇಲಿಯಾದ ಮುಂದಿನ ಕ್ಯಾಪ್ಟನ್ ಆಗಲಿ: ಆ್ಯರೋನ್ ಫಿಂಚ್

ಕೆಲ ದಿನಗಳ ಹಿಂದಷ್ಟೇ ಈ ಕುರಿತಂತೆ ಮಾತನಾಡಿದ್ದ ಆ್ಯರೋನ್ ಫಿಂಚ್, ಕ್ರಿಕೆಟ್‌ ಆಸ್ಟ್ರೇಲಿಯಾ ಹೊಸ ನಾಯಕನ ಕುರಿತಂತೆ ಪುನರಾವಲೋಕನ ಮಾಡಲಿದೆ ಎಂದೆನಿಸುತ್ತಿದೆ. ಅವರು ನಾಯಕರಾಗಿದ್ದಾಗ ನಾನು ಅವರಡಿಯಲ್ಲಿ ಕೆಲ ಪಂದ್ಯಗಳನ್ನಾಡುವ ಅವಕಾಶ ಸಿಕ್ಕಿತು. ಅವರೊಬ್ಬ ಅದ್ಭುತ ವ್ಯಕ್ತಿ. ಅವರೊಬ್ಬ ಅತ್ಯದ್ಭುತ ತಂತ್ರಗಾರಿಕೆ ಹೊಂದಿರುವ ನಾಯಕನಾಗಿದ್ದು, ಅವರ ನಾಯಕತ್ವದಲ್ಲಿ ಆಡಲು ಎಲ್ಲರು ಇಷ್ಟಪಡುತ್ತಾರೆ ಎಂದು ಡೇವಿಡ್ ವಾರ್ನರ್ ಕುರಿತಂತೆ ಆ್ಯರೋನ್ ಫಿಂಚ್ ಹೇಳಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾ ಈ ಕುರಿತಂತೆ ಏನೆಲ್ಲಾ ಯೋಚನೆ ಮಾಡುತ್ತಿದೆ ಎಂದು ನನಗಂತೂ 100% ಗೊತ್ತಿಲ್ಲ. ಆದರೆ ಡೇವಿಡ್ ವಾರ್ನರ್, ಕ್ರಿಕೆಟ್‌ ಆಸ್ಟ್ರೇಲಿಯಾದ ನಂಬಿಕೆ ಉಳಿಸಿಕೊಳ್ಳುವ ರೀತಿಯಲ್ಲಿಯೇ ಕಾರ್ಯ ನಿರ್ವಹಿಸುವ ವಿಶ್ವಾಸವಿದೆ ಎಂದು ಆ್ಯರೋನ್ ಫಿಂಚ್ ಹೇಳಿದ್ದರು

Follow Us:
Download App:
  • android
  • ios