ವಿರಾಟ್ ಕೊಹ್ಲಿ ನಾಯಕತ್ವ ಪ್ರಶ್ನೆ ಮಾಡಿದ ಗಂಭೀರ್/ ರೋಹಿತ್ ಶರ್ಮಾಗೆ ನಾಯಕತ್ವ ನೀಡದೆ ಇದ್ದರೆ ಭಾರತಕ್ಕೆ ನಷ್ಟ/  ಐಪಿಎಲ್ ಗೆದ್ದ ರೋಹಿತ್ ನಾಯಕತ್ವ ಮೆಚ್ಚಿಕೊಳ್ಳಬೇಕು/ ರೋಹಿತ್ ಶರ್ಮಾಗೆ ನಾಯಕತ್ವ ನೀಡಿ

ನವದೆಹಲಿ(ನ. 11) ಐಪಿಎಲ್ ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಟ್ರೋಫಿ ಮುಡಿಗೇರಿಸಿಕೊಂಡಿದೆ. ಟಿ20 ಭಾರತ ತಂಡದ ನಾಯಕತ್ವವನ್ನು ರೋಹಿತ್ ಶರ್ಮಾ ಅವರಿಗೆ ನೀಡದೇ ಇದ್ದರೆ ಅದು ಭಾರತಕ್ಕೆ ಲಾಸ್ ಎಂದು ದಿಗ್ಗಜ ಕ್ರಿಕೆಟಿಗ , ಸಂಸದ ಗೌತಮ್‌ ಗಂಭೀರ್‌ ಹೇಳಿದ್ದಾರೆ.

ಈ ಮೂಲಕ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಗಂಭೀರ ಗಂಭೀರ ಪ್ರಶ್ನೆ ಮಾಡಿದ್ದಾರೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮುಂಬೈ ಚಾಂಪಿಯನ್ ಆಗಿತ್ತು. ಕಳೆದ ಸಾರಿ ಸಹ ಐಪಿಎಲ್ ಟ್ರೋಫಿಯನ್ನು ರೋಹಿತ್ ನಾಯಕತ್ವದಲ್ಲೇ ಮುಂಬೈ ಗಳಿಸಿಕೊಂಡಿತ್ತು.

ಐಪಿಎಲ್ ಹವಾ; ಮುಂಬೈ ಪ್ಲೆ ಅಪ್ ಪ್ರಯಾಣ ಹೇಗಿತ್ತು?

ಸೀಮಿತ ಓವರ್‌ಗಳ ರಾಷ್ಟ್ರೀಯ ತಂಡಕ್ಕೆ ರೋಹಿತ್‌ ಶರ್ಮಾ ನಾಯಕನಾಗದೇ ಇದ್ದಲ್ಲಿ, ಭಾರತಕ್ಕೆ ತುಂಬಾ ನಷ್ಟ ಉಂಟಾಗಲಿದೆ ಹಾಗೂ ಇದರಿಂದ ರೋಹಿತ್‌ ಶರ್ಮಾಗೆ ಯಾವುದೇ ನಷ್ಟವಿಲ್ಲ. ಅವರು ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದಾರೆ ಎಂದು ಗಂಭೀರ್ ಗುಣಗಾನ ಮಾಡಿದ್ದಾರೆ.

ಎಂಎಸ್‌ ಧೋನಿ ಭಾರತದ ಅತ್ಯಂತ ಯಶಸ್ವಿ ನಾಯಕ ಎಂಬುದರಲ್ಲಿ ಅನುಮಾನ ಇಲ್ಲ. ಅವರು ಎರಡು ವಿಶ್ವಕಪ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ ಗೆ ಮೂರು ಬಾರಿ ಐಪಿಎಲ್‌ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ ಅದೇ ರೀತಿ ರೋಹಿತ್‌ ಶರ್ಮಾ ತನ್ನ ನಾಯಕತ್ವದಲ್ಲಿ ಐದು ಐಪಿಎಲ್‌ ಟ್ರೋಫಿಗಳನ್ನು ಗೆದ್ದಿದ್ದಾರೆ ಎಂಬುದನ್ನು ಉಲ್ಲೇಖಿಸಿದ್ದಾರೆ. ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದು ತಂಡ ತೆರಳಿದೆ.