ಮುಂಬೈ ಇಂಡಿಯನ್ಸ್ ತಂಡದಲ್ಲಿ ಮತ್ತೊಂದು ಕೋಲಾಹಲ ಸೃಷ್ಟಿಯಾಗಿದೆ. ಹಾರ್ದಿಕ್ ಪಾಂಡ್ಯ ತಂಡ ತೊರೆಯುತ್ತಿರುವ ಚರ್ಚೆ ನಡುವೆ ಇದೀಗ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್‌ನಿಂದ ದೂರವಾಗುತ್ತಿದ್ದಾರಾ? ಆರ್ ಅಶ್ವಿನ್ ಹೇಳುತ್ತಿರುವುದೇನು?

ಮುಂಬೈ (ಆ.14) ಮುಂಬೈ ಇಂಡಿಯನ್ಸ್ ತಂಡದಿಂದ ರೋಹಿತ್ ಶರ್ಮಾ ದೂರ ಸರಿಯುತ್ತಿದ್ದಾರಾ? 2027ರ ಐಪಿಎಲ್ ಟೂರ್ನಿಯಲ್ಲಿ ಹೊಸ ತಂಡ ಸೇರಿಕೊಳ್ಳುತ್ತಾರಾ ಅನ್ನೋ ಪ್ರಶ್ನೆಗಳು, ಚರ್ಚೆಗಳು ಶುರುವಾಗಿದೆ. ಇದರ ಬೆನ್ನಲ್ಲೇ ಆರ್ ಅಶ್ವಿನ್ ಮಹತ್ವದ ಬೆನ್ನಲ್ಲೇ ಸಲಹೆ ನೀಡಿದ್ದಾರೆ. ರೋಹಿತ್ ಶರ್ಮಾ 5 ಐಪಿಎಲ್ ಟ್ರೋಫಿ ಗೆದ್ದ ನಾಯಕ. ಅವರನ್ನು ಮುಂಬೈ ಇಂಡಿಯನ್ಸ್ ಕೈಬಿಡಲೇಬಾರದು ಎಂದು ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ತಮ್ಮ ಕ್ರಿಕೆಟ್ ವಿಶ್ಲೇಷಣೆಯಲ್ಲಿ ಹೇಳಿದ್ದಾರೆ. 'ಐದು ಪ್ರಶಸ್ತಿ ಗೆದ್ದ ನಾಯಕ'ನನ್ನು ಫ್ರಾಂಚೈಸಿ ಹೇಗೆ ಉಳಿಸಿಕೊಳ್ಳಬೇಕು? ಯಾಕೆ ದೀರ್ಘಾವಧಿಗೆ ರೋಹಿತ್ ಶರ್ಮಾ ಬೇಕು ಎಂದು ಅಶ್ವಿನ್ ವಿವರಿಸಿದ್ದಾರೆ. ಅಂಥಾ ನಾಯಕನನ್ನ ಕಳೆದುಕೊಂಡರೆ ತಂಡಕ್ಕೆ ದೊಡ್ಡ ನಷ್ಟ ಎಂದಿದ್ದಾರೆ.

ರೋಹಿತ್ ಶರ್ಮಾ ಐಪಿಎಲ್ ಲೀಗ್ ಇತಿಹಾಸದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. ಅವರ ನಾಯಕತ್ವದಲ್ಲಿ ತಂಡ ಸ್ಥಿರ ಪ್ರದರ್ಶನ ನೀಡಿದೆ. ಅತಿ ಹೆಚ್ಚು ಗೆಲುವು ಕಂಡಿದೆ. ಹಲವಾರು ಯುವ ಆಟಗಾರರನ್ನು ಬೆಳೆಸಿದ್ದಾರೆ. ಅವರ ನಾಯಕತ್ವ ಕೇವಲ ಅಂಕಿಅಂಶಗಳ ಆಧಾರದ ಮೇಲೆ ನಿಂತಿಲ್ಲ. ತಂಡದಲ್ಲಿ ಧನಾತ್ಮಕ ವಾತಾವರಣ ನಿರ್ಮಿಸುವ ಸಾಮರ್ಥ್ಯ ಅವರಲ್ಲಿದೆ ಎಂದು ಅಶ್ವಿನ್ ಹೇಳಿದ್ದಾರೆ.

ಐದು ಪ್ರಶಸ್ತಿಗಳ ನಾಯಕ: ರೋಹಿತ್ ಶರ್ಮಾ ನೀಡಿದ ಅನನ್ಯ ಕೊಡುಗೆ

"ಐದು ಪ್ರಶಸ್ತಿಗಳನ್ನು ಗೆದ್ದ ಮತ್ತು ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ನಾಯಕರು ಸುಲಭವಾಗಿ ಸಿಗುವುದಿಲ್ಲ. ರೋಹಿತ್ ಶರ್ಮಾ'ಐದು ಪ್ರಶಸ್ತಿಗಳನ್ನು ಗೆದ್ದ ನಾಯಕ' ಎಂದಿದ್ದಾರೆ. . ಮುಂಬೈ ಇಂಡಿಯನ್ಸ್ ದೀರ್ಘಾವಧಿಯ ಯಶಸ್ಸಿಗೆ ರೋಹಿತ್ ಕೊಡುಗೆ ಭಾರೀ ಮುಖ್ಯ. ಕೇವಲ ಐಪಿಎಲ್ ಪ್ರಶಸ್ತಿಗಳಷ್ಟೇ ಅಲ್ಲ, ರೋಹಿತ್ ತಮ್ಮ ತಂತ್ರಗಾರಿಕೆ, ನಾಯಕತ್ವದ ಶೈಲಿಯಿಂದ ತಂಡಕ್ಕೆ ಸ್ಥಿರತೆ ತಂದಿದ್ದಾರೆ ಎಂದು ಅಶ್ವಿನ್ ಹೇಳಿದ್ದಾರೆ..

ಅಶ್ವಿನ್ ವಿಶ್ಲೇಷಣೆ: ತಂತ್ರಗಾರಿಕೆ, ಮಾನವೀಯ ಸ್ಪರ್ಶ

ಅಶ್ವಿನ್ ವಿಶ್ಲೇಷಣೆಯ ಪ್ರಕಾರ, ರೋಹಿತ್ ಶರ್ಮಾ ಕೇವಲ ಐಪಿಎಲ್ ಗೆದ್ದ ನಾಯಕರಷ್ಟೇ ಅಲ್ಲ. ಅವರು ವಿಶಿಷ್ಟ ನಾಯಕತ್ವ ಗುಣಗಳನ್ನು ಹೊಂದಿದ್ದಾರೆ. ರೋಹಿತ್ ತಂಡದ ವಾತಾವರಣವನ್ನು ಸೌಹಾರ್ದಯುತವಾಗಿ ಇಡುತ್ತಾರೆ. ಇದರಿಂದ ಆಟಗಾರರು ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ತೋರಿಸುತ್ತಾರೆ. ತಂಡದ ಪ್ರತಿಯೊಬ್ಬ ಸದಸ್ಯನನ್ನೂ ಅರ್ಥಮಾಡಿಕೊಳ್ಳುತ್ತಾರೆ. ಅವರಿಗೆ ಬೆಂಬಲವಾಗಿ ನಿಲ್ಲುತ್ತಾರೆ. ರೋಹಿತ್ ಶರ್ಮಾ ಶೈಲಿ ತಂಡವನ್ನು ಒಗ್ಗೂಡಿಸುತ್ತದೆ. ಆಟಗಾರರ ಆತ್ಮವಿಶ್ವಾಸ ಹೆಚ್ಚಿಸುತ್ತದೆ.

ರೋಹಿತ್ ತಂತ್ರಗಳ ಮೇಲೆ ಹೆಚ್ಚು ಕೆಲಸ ಮಾಡುತ್ತಾರೆ ಎಂದು ಅಶ್ವಿನ್ ಹೇಳುತ್ತಾರೆ. ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ರೋಹಿತ್ ವೇಗವಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ವಿವಿಧ ಆಟಗಾರರನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಹೇಗೆ ಬಳಸಬೇಕು ಎಂಬ ಅರಿವು ಅವರಿಗಿದೆ. ಇವೆಲ್ಲವೂ ಮುಂಬೈ ಇಂಡಿಯನ್ಸ್ ಯಶಸ್ಸಿನ ಹಿಂದಿನ ಪ್ರಮುಖ ಶಕ್ತಿಗಳು ಎಂದು ಅಶ್ವಿನ್ 2022ರಲ್ಲೇ ಹೇಳಿದ್ದರು.

ರೋಹಿತ್ ಭವಿಷ್ಯದ ಪಾತ್ರ: ಮುಂಬೈ ಇಂಡಿಯನ್ಸ್‌ಗೆ ದೊಡ್ಡ ಆಸ್ತಿ

ರೋಹಿತ್ ಶರ್ಮಾರಂತಹ 'ಐದು ಪ್ರಶಸ್ತಿ ಗೆದ್ದ ನಾಯಕ' ಕೇವಲ ಆಟಗಾರನಾಗಷ್ಟೇ ಅಲ್ಲ, ನಿವೃತ್ತಿಯ ನಂತರವೂ ತಂಡಕ್ಕೆ ದೊಡ್ಡ ಆಸ್ತಿ. ಅಶ್ವಿನ್ ಇದನ್ನು ದೃಢವಾಗಿ ಹೇಳುತ್ತಾರೆ. ಅವರನ್ನು ಮುಂಬೈ ಇಂಡಿಯನ್ಸ್ ತಂಡದಲ್ಲಿ ಉಳಿಸಿಕೊಳ್ಳಿ ಎಂದು ಅಶ್ವಿನ್ ಬಲವಾಗಿ ಸಲಹೆ ನೀಡಿದರು. ಅವರು ಕೋಚಿಂಗ್, ಮೆಂಟರಿಂಗ್ ಅಥವಾ ನಿರ್ವಹಣಾ ಪಾತ್ರಗಳಲ್ಲಿ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಬಲ್ಲರು ಎಂದು ಅಶ್ವಿನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ಒಂದು ಅಥವಾ ಎರಡು ವರ್ಷಗಳ ವಿರಾಮದ ನಂತರ, ಅವರು ಅಂತಹ ಪಾತ್ರವನ್ನು ವಹಿಸಿಕೊಳ್ಳಲು ಸಿದ್ಧರಾಗುತ್ತಾರೆ" ಎಂದು ಅಶ್ವಿನ್ ತಿಳಿಸಿದ್ದಾರೆ.