Asianet Suvarna News Asianet Suvarna News

ಮುಗಿಯಿತಾ ಈ ಇಬ್ಬರು Team India ಸ್ಟಾರ್ ಕ್ರಿಕೆಟಿಗರ ಟಿ20 ವೃತ್ತಿಬದುಕು..?

* ಟೀಂ ಇಂಡಿಯಾ ಟಿ20 ತಂಡದಲ್ಲಿ ಪದೇ ಪದೇ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವ ಇಬ್ಬರು ಕ್ರಿಕೆಟಿಗರು
* ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್‌ಗೆ ಟೀಂ ಇಂಡಿಯಾ ಟಿ20 ತಂಡದಲ್ಲಿಲ್ಲ ಸ್ಥಾನ
* ವೇಗಿ ಮೊಹಮ್ಮದ್‌ ಶಮಿಗೂ ಸಿಗುತ್ತಿಲ್ಲ ಭಾರತ ಚುಟುಕು ಕ್ರಿಕೆಟ್ ತಂಡದಲ್ಲಿ ಸ್ಥಾನ

Is Mohammed Shami Shikhar Dhawan International T20 Cricket Comes to an end kvn
Author
Bengaluru, First Published Jul 9, 2022, 2:50 PM IST

ಮುಂಬೈ(ಜು.09): ಗಬ್ಬರ್‌ ಸಿಂಗ್ ಖ್ಯಾತಿಯ ಶಿಖರ್ ಧವನ್, ಚೊಚ್ಚಲ ಟೆಸ್ಟ್​ನಲ್ಲೇ 187 ರನ್ ಹೊಡೆದು ದಾಖಲೆ ನಿರ್ಮಿಸಿದ್ದರು. ಐಪಿಎಲ್ ಸೇರಿದಂತೆ ಟಿ20ಯಲ್ಲಿ ಕನ್ಸಿಟೆನ್ಸಿ ಪರ್ಫಾಮೆನ್ಸ್. ಮೊಹಮ್ಮದ್ ಶಮಿ ಸ್ವಿಂಗ್ ಮಾಸ್ಟರ್​. ಐಪಿಎಲ್​ನಲ್ಲಿ ಮಿಂಚುತ್ತಿದ್ದಾರೆ. ಹೀಗಿದ್ದೂ ಈ ಇಬ್ಬರ ಟಿ20 ಕೆರಿಯರ್ ಬಹುತೇಕ​ ಕ್ಲೋಸ್​ ಆಗಿದೆ. ಬಿಸಿಸಿಐ ಬಹಿರಂಗವಾಗಿ ಹೇಳದಿದ್ದರೂ ಇರುವ ಸತ್ಯವನ್ನ ಈ ಇಬ್ಬರು ಪ್ಲೇಯರ್ಸ್ ಒಪ್ಪಿಕೊಂಡಿದ್ದಾರೆ.

ಗಬ್ಬರ್ ಸಿಂಗ್ ಒನ್​ಡೇಗೆ ಬ್ಯಾಕ್ ಅಪ್ ಓಪನರ್: 

ಶಿಖರ್ ಧವನ್ (Shikhar Dhawan) ಮೊದಲ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ 187 ರನ್ ಬಾರಿಸಿ, ಚೊಚ್ಚಲ ಟೆಸ್ಟ್​ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದರು. ಆದರೆ ಅವರ ಟೆಸ್ಟ್ ಕೆರಿಯರ್ ಕ್ಲೋಸ್ ಆಗಿ 4 ವರ್ಷಗಳು ಕಳೆದಿವೆ. ಇನ್ನು ಟಿ20 ಫಾರ್ಮ್ಯಾಟ್​ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಸ್ಟ್ರೈಕ್​ರೇಟ್​ ಕಡಿಮೆ ಇದೆ ಅನ್ನೋ ಕಾರಣಕ್ಕೆ ಅವರನ್ನ ಕಳೆದ ವರ್ಷದ ಟಿ20 ವರ್ಲ್ಡ್​ಕಪ್ ಟೀಮ್​ನಿಂದ ಡ್ರಾಪ್ ಮಾಡಲಾಗಿತ್ತು. ಅವರು ಸ್ಟೇಡಿಯಂನಲ್ಲಿ ಪ್ರೇಕ್ಷಕರಾಗಿ ಇಂಡಿಯಾ-ಪಾಕಿಸ್ತಾನ ಪಂದ್ಯ ವೀಕ್ಷಿಸಿದ್ದರು.

Is Mohammed Shami Shikhar Dhawan International T20 Cricket Comes to an end kvn

ಶಿಖರ್ ಧವನ್ ಈಗ ಕೇವಲ ಒನ್​ಡೇ ಟೀಂ​ಗೆ ಸೀಮಿತವಾಗಿದ್ದಾರೆ. ಆದ್ರೆ ಅದು ಎಷ್ಟು ದಿನ ಅನ್ನೋದು ಗೊತ್ತಿಲ್ಲ. ಬಹುತೇಕ ಮುಂದಿನ ವರ್ಷ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ಬಳಿಕ ಅವರು ಒನ್​ಡೇ ಟೀಂ​ನಿಂದಲೂ ಕಿಕೌಟ್ ಆಗಲಿದ್ದಾರೆ. ಅಲ್ಲಿಯವರೆಗೂ ಅವರು ಬ್ಯಾಕ್ ಅಪ್ ಓಪನರ್. ಆದ್ರೆ ಕೆಲ ಆಟಗಾರರ ಅನುಪಸ್ಥಿತಿಯಲ್ಲಿ ವೆಸ್ಟ್​ ಇಂಡೀಸ್ ಒನ್​ಡೇ ಸಿರೀಸ್​ನಲ್ಲಿ ಟೀಂ ಇಂಡಿಯಾವನ್ನು ಶಿಖರ್ ಧವನ್ ಲೀಡ್ ಮಾಡ್ತಿದ್ದಾರೆ ಅಷ್ಟೆ.

ಸದ್ಯ ಶಿಖರ್ ಧವನ್, ಭಾರತ ಕ್ರಿಕೆಟ್ ತಂಡದ ಪರ 34 ಟೆಸ್ಟ್, 149 ಏಕದಿನ ಹಾಗೂ 68 ಟಿ20 ಪಂದ್ಯಗಳನ್ನಾಡಿ 10,300ಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಶಿಖರ್ ಧವನ್ 206 ಐಪಿಎಲ್ ಪಂದ್ಯಗಳನ್ನಾಡಿ 6,244 ರನ್ ಬಾರಿಸಿದ್ದಾರೆ.

ಟೆಸ್ಟ್​-ಒನ್​ಡೇಗೆ ಸೀಮಿತವಾದ ಶಮಿ: 

ಮೊಹಮ್ಮದ್ ಶಮಿ, ಭಾರತದ ಪರ 17 ಟಿ20 ಪಂದ್ಯಗಳನ್ನಾಡಿದ್ದು 18 ವಿಕೆಟ್ ಪಡೆದಿದ್ದಾರೆ. 9.54ರ ಎಕಾನಮಿಯಲ್ಲಿ ರನ್ ನೀಡಿದ್ದಾರೆ. ಟಿ20ಯಲ್ಲಿ ವಿಕೆಟ್ ಸಹ ಪಡೆಯುತ್ತಿಲ್ಲ, ರನ್ ಸಹ ಕಂಟ್ರೋಲ್ ಮಾಡ್ತಿಲ್ಲ. ಹಾಗಾಗಿ ಶಮಿ ಟಿ20 ಕೆರಿಯರ್ ಅನ್ನು ಬಿಸಿಸಿಐ ಕ್ಲೋಸ್ ಮಾಡಿದೆ. ಕಳೆದ ವರ್ಷದ ಟಿ20 ವಿಶ್ವಕಪ್ ಬಳಿಕ ಅವರನ್ನು ಟಿ20 ಟೀಂ​ಗೆ ಸೆಲೆಕ್ಟ್ ಮಾಡಿಲ್ಲ. ಅಲ್ಲಿಗೆ ಗಬ್ಬರ್ ಸಿಂಗ್ ಜೊತೆ ಮೊಹಮ್ಮದ್ ಶಮಿ (Mohammed Shami) ಟಿ20 ಕೆರಿಯರ್ ಕ್ಲೋಸ್ ಆಗಿದೆ. ಅನುಭವಿ ವೇಗಿ ಮೊಹಮ್ಮದ್ ಶಮಿ, ಭಾರತ ಕ್ರಿಕೆಟ್ ತಂಡದ ಪರ 60 ಟೆಸ್ಟ್, 79 ಏಕದಿನ ಹಾಗೂ 17 ಟಿ20 ಪಂದ್ಯಗಳನ್ನಾಡಿದ್ದು, ಒಟ್ಟಾರೆ 382 ವಿಕೆಟ್ ಕಬಳಿಸಿದ್ದಾರೆ.

Is Mohammed Shami Shikhar Dhawan International T20 Cricket Comes to an end kvn

Ind vs Eng ಎರಡನೇ ಟಿ20 ಪಂದ್ಯದಲ್ಲಿ ಕೊಹ್ಲಿಗಿಲ್ಲ ಸ್ಥಾನ..? ಮಾಜಿ ಕ್ರಿಕೆಟಿಗ ಹೇಳಿದ್ದೇನು?

ಆದರೆ ಮೊಹಮ್ಮದ್ ಶಮಿ, ಟೆಸ್ಟ್ ಮತ್ತು ಒನ್​ಡೇ ಟೀಂ​ನಲ್ಲಿದ್ದಾರೆ. ಮುಂದಿನ ವರ್ಷದ ಒನ್​ಡೇ ವರ್ಲ್ಡ್​ಕಪ್ ಬಳಿಕ ಏಕದಿನ ಕೆರಿಯರ್ ಸಹ ಕ್ಲೋಸ್ ಆಗಲಿದೆ. ಫಾರ್ಮ್​ ಮತ್ತು ಫಿಟ್ನೆಸ್ ಎಲ್ಲಿಯವರೆಗೂ ಇರುತ್ತದೋ ಅಲ್ಲಿಯವರೆಗೆ ಟೆಸ್ಟ್ ಕ್ರಿಕೆಟ್ ಆಡ್ತಾರೆ. ಒಟ್ನಲ್ಲಿ ಇಬ್ಬರ ಟಿ20 ಕೆರಿಯರ್ ಅನ್ನ ಬಿಸಿಸಿಐ ಸೈಲೆಂಟಾಗಿ ಕ್ಲೋಸ್ ಮಾಡಿದೆ.

Follow Us:
Download App:
  • android
  • ios