Asianet Suvarna News Asianet Suvarna News

IPL Retention ಕನ್ನಡಿಗ ಮನೀಶ್ ಪಾಂಡೆ ಸೇರಿ 7 ಕ್ರಿಕೆಟಿಗರಿಗೆ ಕೊಕ್, ಲಖನೌ ತಂಡದ ಸಂಪೂರ್ಣ ಲಿಸ್ಟ್!

ಕೆಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್‌ಜೈಂಟ್ಸ್ ತಂಡ ಘಟಾನುಘಟಿ ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಿದೆ. ಕನ್ನಡಿಗ ನಾಯಕತ್ವದ ಲಖನೌ ತಂಡದಿಂದ ಸ್ಟಾರ್ ಕನ್ನಡಿಗ ಮನೀಶ್ ಪಾಂಡೆ ಹೊರಬಿದ್ದಿದ್ದಾರೆ. ಲಖನೌ ಸೂಪರ್‌ಜೈಂಟ್ಸ್ ತಂಡದಿಂದ ಹೊರಬಿದ್ದ ಹಾಗೂ ಉಳಿದುಕೊಂಡ ಆಟಗಾರರ ವಿವರ ಇಲ್ಲಿದೆ.

IPL Retention Manish Pandey to Jason Holder Lucknow Super Giants release 7 players Full list ckm
Author
First Published Nov 15, 2022, 8:00 PM IST

ಲಖನೌ(ನ.15): ಕಳೆದ ಐಪಿಎಲ್ ಆವೃತ್ತಿ ಮೂಲಕ ಮಿಲಿಯನ್ ಡಾಲರ್ ಟೂರ್ನಿಗೆ ಎಂಟ್ರಿಕೊಟ್ಟ ಲಖನೌ ಸೂಪರ್‌ಜೈಂಟ್ಸ್ ಅತ್ಯುತ್ತಮ ಪ್ರದರ್ಶನದ ಮೂಲಕ ಗಮನಸಳೆದಿದೆ. ಒಂದು ಹಂತದಲ್ಲಿ ಲಖನೌ ಪ್ರಶಸ್ತಿ ಗೆಲ್ಲಲಿದೆ ಅನ್ನೋ ಭರವಸೆ ಮೂಡಿಸಿತ್ತು. ಮೊದಲ ಪ್ರಯತ್ನದಲ್ಲಿ ಪ್ರಶಸ್ತಿ ಮಿಸ್ ಮಾಡಿಕೊಂಡ ಲಖನೌ ಸೂಪರ್‌ಜೈಂಟ್ಸ್ ಇದೀಗ ಎರಡನೇ ಪ್ರಯತ್ನದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಲು ಪ್ಲಾನ್ ಹಾಕಿಕೊಂಡಿದೆ. ಆದರೆ ಲಖನೌ ತಂಡ ತನ್ನ ಸ್ಟಾರ್ ಕ್ರಿಕೆಟಿಗರನ್ನೇ ಕೈಬಿಟ್ಟಿದೆ. ಕನ್ನಡಿಗ ಮನೀಶ್ ಪಾಂಡೆ, ವೆಸ್ಟ್ ಇಂಡೀಸ್ ಅಲ್‌ರೌಂಡರ್ ಜೇಸನ್ ಹೋಲ್ಡರ್ ಸೇರಿದಂತೆ 7 ಕ್ರಿಕೆಟಿಗರನ್ನು ತಂಡದಿಂದ ಬಿಡುಗಡೆ ಮಾಡಿದೆ. ಆದರೆ ತಂಡದಲ್ಲಿದ್ದ ಮತ್ತೊರ್ವ ಕನ್ನಡಿಗ ಕೃಷ್ಣಪ್ಪ ಗೌತಮ್‌ನನ್ನು ತಂಡದಲ್ಲೇ ಉಳಿಸಿಕೊಂಡಿದೆ.

ಲಖನೌ ಸೂಪರ್‌ಜೈಂಟ್ಸ್ ತಂಡ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ
ಆ್ಯಂಡ್ರೂ ಟೈ, ಅಂಕಿತ್ ರಜಪೂತ್, ದುಷ್ಮಂತ್ ಚಮೀರಾ, ಇವಿನ್ ಲಿವಿಸ್, ಜೇಸನ್ ಹೋಲ್ಡರ್, ಮನೀಶ್ ಪಾಂಡೆ, ಶಹಬಾಜ್ ನದೀಮ್

IPL Retention ಐವರ ಬಿಡುಗಡೆ ಮಾಡಿ, ಕನ್ನಡಿಗನ ಉಳಿಸಿಕೊಂಡ ಡೆಲ್ಲಿ ಕ್ಯಾಪಿಟಲ್ಸ್!

ಟ್ರೇಡಿಂಗ್ ಮೂಲಕ ಖರೀದಿಸಿದ ಆಟಗಾರರ ಪಟ್ಟಿ
ಲಖನೌ ಸೂಪರ್‌ಜೈಂಟ್ಸ್ ಟ್ರೇಡಿಂಗ್ ಮೂಲಕ ಯಾವುದೇ ಆಟಗಾರರನ್ನು ಖರೀದಿಸಿಲ್ಲ

ತಂಡದಲ್ಲಿ ಉಳಿದಿರುವ ಬಾಕಿ ಹಣ
23.35 ಕೋಟಿ ರೂಪಾಯಿ

ಬಾಕಿ ಉಳಿದಿರುವ ವಿದೇಶಿ ಆಟಗಾರರ ಕೋಟಾ
4

ರಿಲೀಸ್ ಬಳಿಕ ತಂಡದಲ್ಲಿ ಉಳಿದುಕೊಂಡ ಆಟಗಾರರ ಪಟ್ಟಿ
ಕೆಎಲ್ ರಾಹುಲ್(ನಾಯಕ), ಆಯುಷ್ ಬದೊನಿ, ಕರಣ್ ಶರ್ಮಾ, ಮನನ್ ವೋಹ್ರಾ, ಕ್ವಿಂಟನ್ ಡಿಕಾಕ್, ಮಾರ್ಕಸ್ ಸ್ಟೊಯ್ನಿಸ್, ಕೃಷ್ಣಪ್ಪ ಗೌತಮ್, ದೀಪಕ್ ಹೂಡ, ಕೈಲ್ ಮೇಯರ್ಸ್, ಕ್ರುನಾಲ್ ಪಾಂಡ್ಯ, ಅವೇಶ್ ಖಾನ್, ಮೊಹ್ಸಿನ್ ಖಾನ್, ಮಾರ್ಕ್ ವುಡ್, ಮಯಾಂಕ್ ಯಾದವ್, ರವಿ ಬಿಶ್ನೋಯ್

IPL Retention: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಿಂದ ಡ್ವೇನ್‌ ಬ್ರಾವೋ ಔಟ್‌!

ಆನ್ ಪೇಪರ್‌ನಲ್ಲಿ ಲಖನೌ ಸೂಪರ್‌ಜೈಂಟ್ಸ್ ಈಗಲೂ ಬಲಿಷ್ಠ ತಂಡವಾಗಿ ಗೋಚರಿಸುತ್ತಿದೆ. ಕಾರಣ ಟಾಪ್ ಆರ್ಡರ್‌ನಲ್ಲಿ ರಾಹುಲ್ ಹಾಗೂ ಕ್ವಿಂಟನ್ ಡಿಕಾಕ್ ಅಬ್ಬರ ತಂಡಕ್ಕೆ ಉತ್ತಮ ಆರಂಭ ನೀಡಲಿದೆ. ಮಧ್ಯಮ ಕ್ರಮಾಂಕದಲ್ಲಿ ಆಯುಷ್ ಬದೋನಿ ಹಾಗೂ ದೀಪಕ್ ಹೂಡ ಬಲ ತಂಡಕ್ಕಿದೆ . ಮಾರ್ಕಸ್ ಸ್ಟೊಯ್ನಿಸ್ ಹಾಗೂ ಕ್ರುನಾಲ್ ಪಾಂಡ್ಯ ಅಲ್ರೌಂಡರ್ ಕೋಟಾದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಆವೇಶ್ ಖಾನ್, ಮಾರ್ಕ್ ವುಡ್, ಮೊಹ್ಸಿನ್ ಖಾನ್ ಸೇರಿದಂತ ಬೌಲಿಂಗ್ ಬಲವೂ ತಂಡಕ್ಕಿದೆ. 

ಕಳೆದ ಐಪಿಎಲ್ ಟೂರ್ನಿಯಲ್ಲಿ ಕೆಎಲ್ ರಾಹುಲ್ ಇಡೀ ಜವಾಬ್ದಾರಿಯನ್ನು ಹೊತ್ತು ಅತ್ಯತ್ತಮ ಪ್ರದರ್ಶನ ನೀಡಿದ್ದರು. ಈ ಮೂಲಕ ಲಖನೌ ಸೂಪರ್‌ಜೈಂಟ್ಸ್ ಪ್ಲೇ ಆಫ್ ಪ್ರವೇಶಿಸಿತ್ತು. ಈ ಬಾರಿ ಪ್ರಶಸ್ತಿಗೆ ಮುತ್ತಿಕ್ಕಲು ಸಜ್ಜಾಗಿದೆ. ಯುವ ಹಾಗೂ ಅನುಭವಿ ಆಟಗಾರರನ್ನೊಳಗೊಂಡ ಲಖನೌ ಸೂಪರ್‌ಜೈಂಟ್ಸ್ ಮಿನಿ ಹರಾಜಿನಲ್ಲಿ ತಂಡದ ವೀಕ್ನೆಸ್ ಸರಿಪಡಿಸಿಕೊಳ್ಳಲು ತಯಾರಿ ನಡೆಸುತ್ತಿದೆ.
 

Follow Us:
Download App:
  • android
  • ios