IPL Retention ಐವರ ಬಿಡುಗಡೆ ಮಾಡಿ, ಕನ್ನಡಿಗನ ಉಳಿಸಿಕೊಂಡ ಡೆಲ್ಲಿ ಕ್ಯಾಪಿಟಲ್ಸ್!
ಐಪಿಎಲ್ 2023ರ ಟೂರ್ನಿಗೆ ಹೊಸ ಹುರುಪಿನೊಂದಿಗೆ ಕಣಕ್ಕಿಳಿಯಲು ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಜ್ಜಾಗಿದೆ. ಆದರೆ ಡೆಲ್ಲಿ ತಂಡ ತಂಡದ ಬಹುತೇಕ ಆಟಗಾರರನ್ನು ಉಳಿಸಿಕೊಂಡಿದೆ. ಐವರು ಕ್ರಿಕೆಟಿಗರ ಕೈಬಿಟ್ಟಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಂಪೂರ್ಣ ಲಿಸ್ಟ್ ಇಲ್ಲಿದೆ.
ದೆಹಲಿ(ನ.15): ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಬಾರಿಯ ಐಪಿಎಲ್ ರೆಟೆನ್ಶ್‌ನಲ್ಲಿ ಕೋರ್ ತಂಡವನ್ನು ಉಳಿಸಿಕೊಂಡಿದೆ. ಐವರು ಕ್ರಿಕೆಟಿಗರನ್ನು ಕೈಬಿಟ್ಟಿದೆ. ಇದರಲ್ಲಿ ಇಬ್ಬರು ಬ್ಯಾಕ್ ಅಪ್ ವಿಕೆಟ್ ಕೀಪರ್ ಅನ್ನೋದು ಗಮನಾರ್ಹ. ಕಾರಣ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಆಗಿದ್ದಾರೆ. ಇನ್ನು ರಿಷಬ್‌ಗೆ ಬ್ಯಾಕ್ ಅಪ್ ಆಗಿ ಈ ಬಾರಿಯ ಹರಾಜಿನಲ್ಲಿ ವಿಕೆಟ್ ಕೀಪರ್ ಖರೀದಿಸುವ ಸಾಧ್ಯತೆ ಇದೆ. ಈಗಾಗಲೇ ಡೆಲ್ಲಿ ತಂಡದಿಂದ ಟ್ರೇಡ್ ಮೂಲಕ ಕೋಲ್ಕತಾ ನೈಟ್ ರೈಡರ್ಸ್ ತಂಡ ಸೇರಿಕೊಂಡಿದ್ದಾರೆ. ಶಾರ್ದೂಲ್ ಠಾಕೂರ್, ಟಿಮ್ ಸೈಫರ್ಟ್, ಅಶ್ವಿನ್ ಹೆಬ್ಬಾರ್, ಕೆಎಸ್ ಭರತ್ ಹಾಗೂ ಮನ್ದೀಪ್ ಸಿಂಗ್‌ನನ್ನು ಡೆಲ್ಲಿ ಕ್ಯಾಪಿಟಲ್ಸ್ ಬಿಡುಗಡೆ ಮಾಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ
ಶಾರ್ದೂಲ್ ಠಾಕೂರ್, ಟಿಮ್ ಸೈಫರ್ಟ್, ಅಶ್ವಿನ್ ಹೆಬ್ಬಾರ್, ಕೆಎಸ್ ಭರತ್, ಮನ್ದೀಪ್ ಸಿಂಗ್
IPL Retention ಚಾಂಪಿಯನ್ ಗುಜರಾತ್ ಟೈಟಾನ್ಸ್‌ನಿಂದ ಜೇಸನ್ ರಾಯ್ ಸೇರಿ 6 ಕ್ರಿಕೆಟಿಗರ ಬಿಡುಗಡೆ!
ಟ್ರೇಡಿಂಗ್ ಮೂಲಕ ಖರೀದಿಸಿದ ಆಟಗಾರರ ಪಟ್ಟಿ
ಅಮನ್ ಖಾನ್
ಆಟಗಾರರ ರಿಲೀಸ್ ಬಳಿಕ ತಂಡದಲ್ಲಿ ಬಾಕಿ ಉಳಿದಿರುವ ಹಣ
19.45 ಕೋಟಿ ರೂಪಾಯಿ
ಬಾಕಿ ಉಳಿದಿರುವ ವಿದೇಶಿ ಆಟಗಾರರ ಕೋಟಾ
2
ರಿಲೀಸ್ ಬಳಿಕ ತಂಡದಲ್ಲಿ ಉಳಿದುಕೊಂಡ ಆಟಗಾರರ ಪಟ್ಟಿ
ರಿಷಬ್ ಪಂತ್(ನಾಯಕ), ಡೇವಿಡ್ ವಾರ್ನರ್, ಪೃಥ್ವಿ ಶಾ, ರಿಪಲ್ ಪಟೇಲ್, ರೋವ್ಮನ್ ಪೊವೆಲ್, ಸರ್ಫರಾಜ್ ಖಾನ್, ಯಶ್ ಧುಲ್, ಮಿಚೆಲ್ ಮಾರ್ಶ್, ಲಲಿತ್ ಯಾದವ್, ಅಕ್ಸರ್ ಪಟೇಲ್, ಅನ್ರಿಚ್ ನೋರ್ಜೆ, ಚೇತನ್ ಸಕಾರಿಯಾ, ಕಮಲೇಶ್ ನಾಗರಕೋಟಿ, ಖಲೀಲ್ ಅಹಮ್ಮದ್, ಲುಂಗಿ ಎನ್‌ಗಿಡಿ, ಮುಸ್ತಾಫಿಜುರ್ ರಹಮಾನ್, ಅಮನ್ ಖಾನ್, ಕುಲ್ದೀಪ್ ಯಾದವ್, ಪ್ರವೀಣ್ ದುಬೆ, ವಿಕಿ ಒಸ್ಟ್‌ವಾಲ್
ಡೆಲ್ಲಿ ಕ್ಯಾಪಿಟಲ್ಸ್ ಕನ್ನಡಿಗ ಪ್ರವೀಣ್ ದುಬೆ ಉಳಿಸಿಕೊಂಡಿದೆ. ಕ್ಯಾಪಿಟಲ್ಸ್ ತಂಡ ಹೆಚ್ಚು ಬ್ಯಾಟ್ಸ್‌ಮನ್‌ಗಳನ್ನೇ ನೆಚ್ಚಿಕೊಂಡಿದೆ. ಕಳೆದ ಆವೃತ್ತಿಯಲ್ಲೂ ಡೆಲ್ಲಿ ಬ್ಯಾಟಿಂಗ್ ಬಲವನ್ನೇ ನೆಚ್ಚಿಕೊಂಡು ಕಣಕ್ಕಿಳಿದಿತ್ತು. ರಿಷಬ್ ಪಂತ್, ಡೇವಿಡ್ ವಾರ್ನರ್, ಸರ್ಫಾರಾಜ್, ಪೊವೆಲ್ ಸೇರಿದಂತೆ ಘಟಾನುಟಿ ಬ್ಯಾಟ್ಸ್‌ಮನ್ ತಂಡದಲ್ಲಿದ್ದಾರೆ. ಆದರೆ ಬೌಲಿಂಗ್ ಕುರಿತು ಕೊಂಚ ಗಮನ ನೀಡಬೇಕಿದೆ. ತಂಡದಲ್ಲಿ ಉತ್ತಮ ಬೌಲರ್‌ಗಳಿದ್ದಾರೆ. ಆದರೆ ಕಳೆದ ಆವೃತ್ತಿಯಲ್ಲಿ ನರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. 19 ಕೋಟಿ ಹಣ ಬಾಕಿ ಇದೆ. ಹೀಗಾಗಿ ಡೆಸೆಂಬರ್ 23ರಂದು ನಡೆಯಲಿರು ಐಪಿಎಲ್ ಹರಾಜಿನಲ್ಲಿ ಮತ್ತಷ್ಟು ಪ್ರಮುಖ ಆಟಗಾರರನ್ನು ಖರೀದಿಸುವ ಅವಕಾಶ ಡೆಲ್ಲಿ ತಂಡಕ್ಕಿದೆ.