* ಐಪಿಎಲ್‌ನಲ್ಲಿ ಪ್ಲೇ ಆಫ್ ಪ್ರವೇಶಿಸಲು ವಿಫಲವಾದ ಪಂಜಾಬ್ ಕಿಂಗ್ಸ್, ಕೋಲ್ಕತಾ ನೈಟ್ ರೈಡರ್ಸ್* ಮುಂದಿನ ಅವೃತ್ತಿಯ ಐಪಿಎಲ್‌ನಲ್ಲಿ ಈ ಇಬ್ಬರು ಆಟಗಾರರು ನಾಯಕರಾಗಿ ಉಳಿಯೋದು ಡೌಟ್* ಕೆಕೆಆರ್ ಸಿಇಒ ಜತೆ ಕಿರಿಕ್ ಮಾಡಿಕೊಂಡ ಶ್ರೇಯಸ್ ಅಯ್ಯರ್
ಮುಂಬೈ(ಮೇ.19): ಈ ಸೀಸನ್ ಐಪಿಎಲ್ ಇನ್ನೂ ಮುಗಿದಿಲ್ಲ. ಪ್ಲೇ ಆಫ್ಗೆ ಎಂಟ್ರಿ ಪಡೆಯೋಕೆ ಇನ್ನೂ ಫೈಟ್ ನಡೆಯುತ್ತಿದೆ. ಈಗಲೇ ಮುಂದಿನ ಸೀಸನ್ ಬಗ್ಗೆ ಮಾತನಾಡುತ್ತಿದ್ದಾರೆ ಅಂದುಕೊಳ್ಳಬೇಡಿ. ಈ ಸೀಸನ್ನಲ್ಲಿ ಕಳಪೆ ಪ್ರದರ್ಶನ ನೀಡಿದ ತಂಡಗಳಲ್ಲಿ ಮೇಜರ್ ಸರ್ಜರಿ ಮಾಡೋದು ಕಾಮನ್. ಆದರೆ ಎರಡು ತಂಡಗಳು ಮಾತ್ರ ತಂಡದ ನಾಯಕನನ್ನೇ ಬದಲಿಸಲು ಮನಸ್ಸು ಮಾಡಿವೆ. ಹೌದು, ಎಲ್ಲವೂ ಅಂದುಕೊಂಡಂತೆಯೇ ಆದರೆ ಈ ಬಾರಿ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದ ನಾಯಕರು ಮುಂದಿನ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೇವಲ ಆಟಗಾರರಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.
ಕೆಕೆಆರ್‌ಗೆ ಶ್ರೇಯಸ್ಸನ್ನು ತರದ ಅಯ್ಯರ್:
ನಾಯಕನಾಗಬೇಕು ಅಂತ ಡೆಲ್ಲಿ ಕ್ಯಾಪಿಟಲ್ಸ್ ಬಿಟ್ಟು KKR ಸೇರಿಕೊಂಡ ಶ್ರೇಯಸ್ ಅಯ್ಯರ್, ತಂಡವನ್ನು ಪ್ಲೇ ಆಫ್ಗೆ ಕರೆದುಕೊಂಡು ಹೋಗುವಲ್ಲಿ ಎಡವಿದ್ದಾರೆ. ಜೊತೆಗೆ ಸಿಇಒ ವೆಂಕಿ ಮೈಸೂರ್ ಜೊತೆ ಬೇರೆ ಕಿರಿಕ್. ಪ್ಲೇಯಿಂಗ್-11ನಲ್ಲಿ ಸಿಇಒ ಪಾತ್ರ ಇರುತ್ತದೆ ಇದೇ ಸೋಲಿಗೆ ಕಾರಣವಾಗ್ತಿದೆ ಅನ್ನೋದನ್ನ ಇನ್ ಡೈರೆಕ್ಟಾಗಿ ಹೇಳೋ ಮೂಲಕ ಕಿರಿಕ್ ಮಾಡಿಕೊಂಡಿದ್ದಾರೆ. ಹಾಗಾಗಿ ಅವರು ನಾಯಕನಾಗಿ ಮಾತ್ರವಲ್ಲ, ಆಟಗಾರನಾಗಿಯೂ ಮುಂದಿನ ಸೀಸನ್ನಲ್ಲಿ ಕೆಕೆಆರ್ ಟೀಮ್ನಲ್ಲಿ ಇರೋದು ಡೌಟ್.
ಮಯಾಂಕ್ಗೆ ಕುಂಬ್ಳೆಯೇ ಆದ್ರಾ ವಿಲನ್..?:
ಪಂಜಾಬ್ ಕೋಚ್ ಅನಿಲ್ ಕುಂಬ್ಳೆ, ಕ್ಯಾಪ್ಟನ್ ಮಯಾಂಕ್ ಅಗರ್ವಾಲ್. ಇಬ್ಬರೂ ಕನ್ನಡಿಗರೇ. ಕನ್ನಡ ಮಂತ್ರ ಸಕ್ಸಸ್ ಮಂತ್ರವಾಗುತ್ತೆ ಅಂತ ಪಂಜಾಬ್ ಪ್ರಾಂಚೈಸಿ ಅಂದುಕೊಂಡಿದ್ದರು. ಆದ್ರೆ ಎಲ್ಲವೂ ಉಲ್ಟಾ ಆಗಿ ಹೋಯ್ತು. ಪಂಜಾಬ್ 13ರಲ್ಲಿ ಗೆದ್ದಿರೋದು ಆರು ಪಂದ್ಯ ಮಾತ್ರ. ಮಯಾಂಕ್ ವೈಯಕ್ತಿಕವಾಗಿಯೂ ವಿಫಲರಾಗಿದ್ದಾರೆ. ಕುಂಬ್ಳೆಯ ಡಿಕ್ಟೇಟರ್‌ಶಿಪ್ ಪಂಜಾಬ್ಗೆ ಮಾರಕವಾಗ್ತಿದೆ ಅಂತ ಹೇಳಲಾಗ್ತಿದೆ. ಶ್ರೇಯಸ್ ಉತ್ತಮ ನಾಯಕ ಅನ್ನೋದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ನಲ್ಲಿ ಪ್ರೂವ್ ಮಾಡಿದ್ರು. ಆದ್ರೆ ಟೀಮ್ನಲ್ಲಿನ ಕಿರಿಕ್ ಅವರನ್ನ ಈಗ ಕೆಕೆಆರ್ನಿಂದಲೇ ಡ್ರಾಪ್ ಮಾಡುವಂತೆ ಮಾಡಿದೆ. ಇನ್ನು ಮಯಾಂಕ್ಗೆ ನಾಯಕತ್ವದ ಗುಣಗಳಿಲ್ಲ ಅಂದರೂ ಅವರು ಉತ್ತಮವಾಗಿಯೇ ಪಂಜಾಬ್ ಟೀಮ್ ಲೀಡ್ ಮಾಡಿದ್ರು. ಆದ್ರೆ ಯಾಕೋ ಲಕ್ ಕೈ ಹಿಡಿಯಲಿಲ್ಲ. ಒಟ್ನಲ್ಲಿ ಈ ಸಲ ನಾಯಕರಾದವರು ಮುಂದಿನ ಸೀಸನ್ನಲ್ಲಿ ಪ್ಲೇಯರ್ ಆಗಿ ಆಡಬೇಕಾಗಬಹುದು.
IPL 2022 ಲಖನೌ ಎದುರು ರೋಚಕ ಸೋಲಿನ ಬಳಿಕ ಕಣ್ಣೀರಿಟ್ಟ ರಿಂಕು ಸಿಂಗ್..!
ಸದ್ಯ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನೂತನ ತಂಡಗಳಾದ ಗುಜರಾತ್ ಟೈಟಾನ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ಪ್ಲೇ ಆಫ್ ಹಾದಿಯನ್ನು ಖಚಿತಪಡಿಸಿಕೊಂಡಿದರೆ, ರಾಜಸ್ಥಾನ ರಾಯಲ್ಸ್ ತಂಡ ಕೂಡಾ ಬಹುತೇಕ ಪ್ಲೇ ಆಫ್‌ನೊಳಗೆ ಒಂದು ಕಾಲಿಟ್ಟಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪ್ಲೇ ಆಫ್‌ಗೇರಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಇದೆಲ್ಲದರ ನಡುವೆ ಐಪಿಎಲ್‌ನಲ್ಲಿ ಮೊದಲ ಬಾರಿಗೆ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿರುವ ಹಾರ್ದಿಕ್ ಪಾಂಡ್ಯ, ಇನ್ನೂ ಒಂದು ಪಂದ್ಯ ಭಾಕಿ ಇರುವಂತೆಯೇ ಗುಜರಾತ್ ಟೈಟಾನ್ಸ್ ತಂಡವನ್ನು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿಸಿದ್ದಾರೆ.
