ಐಪಿಎಲ್ ಟೂರ್ನಿಯಿಂದ ಮೂವರು ಇಂಗ್ಲೆಂಡ್ ಕ್ರಿಕೆಟಿಗರು ಹಿಂದಕ್ಕೆ ಒಪ್ಪಂದ ಮಾಡಿ, ಟೂರ್ನಿಗೆ ಕೆಲ ದಿನಗಳಿರುವಾಗ ವಾಪಸ್ ನಿರ್ಧಾರ ಬಿಸಿಸಿಐಗೆ ಪತ್ರ ಬರೆದ ಫ್ರಾಂಚೈಸಿ, ಶಿಸ್ತು ಕ್ರಮಕ್ಕೆ ಆಗ್ರಹ
ಮುಂಬೈ(ಸೆ.12): ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯ ರದ್ದುಗೊಂಡ ಬೆನ್ನಲ್ಲೇ ಉಭಯ ಕ್ರಿಕೆಟ್ ಮಂಡಳಿ ಹಾಗೂ ಆಟಗಾರರಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದೆ. ಐಪಿಎಲ್ ಟೂರ್ನಿಗಾಗಿ ಟೆಸ್ಟ್ ಪಂದ್ಯ ರದ್ದು ಮಾಡಲಾಗಿದೆ ಅನ್ನೋ ಆರೋಪಗಳು ಕೇಳಿಬಂದಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ಕೆಲ ಕ್ರಿಕೆಟಿಗರು ಇದೀಗ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
ದುಬೈ ತಲುಪಿದ RCB ನಾಯಕ ವಿರಾಟ್ ಕೊಹ್ಲಿಗೆ ಅದ್ಧೂರಿ ಸ್ವಾಗತ; ಅಖಾಡ ರೆಡಿ!
ಜಾನಿ ಬೈರ್‌ಸ್ಟೋ ಹಾಗೂ ಡೇವಿಡ್ ಮಲನ್ ನಿನ್ನೆ(ಸೆ.11) ಐಪಿಎಲ್ ಟೂರ್ನಿಯಿಂದ ಹಿಂದೆ ಸರಿಯತ್ತಿರುವುದಾಗಿ ಘೋಷಿಸಿದ್ದರು. ಇದಾದ ಬಳಿಕ ಇಂದು ಕ್ರಿಸ್ ವೋಕ್ಸ್ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದಿದ್ದಾರೆ. ಜಾನಿ ಬೈರ್‌ಸ್ಟೋ ಐಪಿಎಲ್ 2021ರ ಮೊದಲ ಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿರುವ ಬೈರ್‌ಸ್ಟೋ ಅಲಭ್ಯತೆ ಇದೀಗ ಹೈದರಾಬಾದ್ ತಂಡಕ್ಕೆ ತೀವ್ರ ಹೊಡೆತ ನೀಡಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ರಿಸ್ ವೋಕ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡದ ಡೇವಿಡ್ ಮಲನ್ ಅಲಭ್ಯತೆ ತಂಡಕ್ಕೆ ತೀವ್ರ ಹಿನ್ನಡೆ ತಂದಿದೆ. ಟೀಂ ಇಂಡಿಯಾ ಕ್ರಿಕೆಟಿಗರು 5ನೇ ಟೆಸ್ಟ್ ಪಂದ್ಯ ರದ್ದು ಮಾಡಿದ್ದಾರೆ. ಹೀಗಾಗಿ ಇಂಗ್ಲೆಂಡ್ ಕ್ರಿಕೆಟಿಗರು ಐಪಿಎಲ್ ಟೂರ್ನಿಯಿಂದ ಹಿಂದೆ ಸರಿಯುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
IPL 2021: ಅಬುಧಾಬಿಗೆ ಬಂದಿಳಿದ ರೋಹಿತ್, ಸೂರ್ಯಕುಮಾರ್, ಬುಮ್ರಾ
ದಿಢೀರ್ ಟೂರ್ನಿಯಿಂದ ಹಿಂದೆ ಸರಿಯುತ್ತಿರುವ ಆಟಗಾರರ ವಿರುದ್ಧ ಕ್ರಮ ಕೈಗೊಳ್ಳಲು ಫ್ರಾಂಚೈಸಿ ಬಿಸಿಸಿಐಗೆ ಆಗ್ರಹಿಸಿದೆ. ಒಪ್ಪಂದ ಮಾಡಿಕೊಂಡು ಪಂದ್ಯ ಆರಂಭಕ್ಕೆ ಕೆಲ ದಿನಗಳಿರುವಾಗ ಹಿಂದೆ ಸರಿದರೆ ತಂಡಕ್ಕೆ ಅಪಾರ ನಷ್ಟವಾಗಲಿದೆ. ತಂಡದ ಸಮತೋಲನ ತಪ್ಪಲಿದೆ. ಹಣ ವ್ಯರ್ಥವಾಗಲಿದೆ. ಹೀಗಾಗಿ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮುಂದಿನ ಆವೃತ್ತಿಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬಾರದು ಎಂದು ಫ್ರಾಂಚೈಸಿ ಆಗ್ರಹಿಸಿದೆ
