* ಮ್ಯಾಂಚೆಸ್ಟರ್‌ನಿಂದ ಯುಎಇಗೆ ಬಂದಿಳಿದ ಮುಂಬೈ ಇಂಡಿಯನ್ಸ್‌ ತಾರೆಯರು* ಸೆಪ್ಟೆಂಬರ್ 19ರಿಂದ ಐಪಿಎಲ್‌ ಭಾಗ 2 ಆರಂಭವಾಗಲಿವೆ* ಅಬುಧಾಬಿಯಲ್ಲಿ ಕ್ವಾರಂಟೈನ್‌ಗೆ ಒಳಗಾದ ರೋಹಿತ್ ಶರ್ಮಾ, ಬುಮ್ರಾ, ಸೂರ್ಯ

ನವದೆಹಲಿ(ಸೆ.11): ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 5ನೇ ಟೆಸ್ಟ್‌ ಕೋವಿಡ್ ಭೀತಿಯಿಂದಾಗಿ ಕೊನೆಯ ಕ್ಷಣದಲ್ಲಿ ರದ್ದಾಗಿತ್ತು. ಇದರ ಬೆನ್ನಲ್ಲೇ ಮುಂಬೈ ಇಂಡಿಯನ್ಸ್‌ ಕ್ರಿಕೆಟ್‌ ತಂಡದ ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಹಾಗೂ ಜಸ್ಪ್ರೀತ್ ಬುಮ್ರಾ ಯುಎಇ ಚರಣದ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಖಾಸಗಿ ವಿಶೇಷ ವಿಮಾನದಲ್ಲಿ ಇಂದು(ಸೆ.11) ಅಬುಧಾಬಿಗೆ ಬಂದಿಳಿದಿದ್ದಾರೆ.

14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಯುಎಇ ಚರಣದ ಐಪಿಎಲ್‌ ಪಂದ್ಯಾವಳಿಗಳು ಸೆಪ್ಟೆಂಬರ್ 19ರಿಂದ ಆರಂಭವಾಗಲಿವೆ. ಮ್ಯಾಂಚೆಸ್ಟರ್ ಪಂದ್ಯ ದಿಢೀರ್ ಸ್ಥಗಿತವಾಗಿದ್ದರಿಂದ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಆಟಗಾರರಿಗೆ ಹೆಚ್ಚಿನ ಅವಕಾಶ ಸಿಕ್ಕಂತೆ ಆಗಿದೆ. ಇದೀಗ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಹಾಗೂ ಜಸ್ಪ್ರೀತ್ ಬುಮ್ರಾ ತಮ್ಮ ಕುಟುಂಬದೊಟ್ಟಿಗೆ ಯುಎಇಗೆ ಬಂದಿಳಿದಿದ್ದು, ಐಪಿಎಲ್‌ ಮಾರ್ಗಸೂಚಿಯನ್ವಯ ಅಬುಧಾಬಿಯಲ್ಲಿ 6 ದಿನಗಳ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

IPL 2021: RCB ತಂಡ ಕೂಡಿಕೊಂಡ ಬೆಂಕಿ-ಬಿರುಗಾಳಿ..! ಈ ಸಲಾ ಕಪ್‌ ನಮ್ದೇ ನಾ..?

Scroll to load tweet…
Scroll to load tweet…

ಮ್ಯಾಂಚೆಸ್ಟರ್‌ನಿಂದ ಯುಎಇಗೆ ತೆರಳುವ ಮುನ್ನ ಎಲ್ಲಾ ಆಟಗಾರರ RT-PCR ಟೆಸ್ಟ್‌ ನೆಗೆಟಿವ್ ಬಂದ ಬಳಿಕವಷ್ಟೇ ಯುಎಇಗೆ ವಿಮಾನ ಏರಿದ್ದಾರೆ. ಅಬುಧಾಬಿಗೆ ಬಂದಿಳಿದ ಬಳಿಕ ಮತ್ತೊಮ್ಮೆ ಕೋವಿಡ್ ಟೆಸ್ಟ್‌ ಮಾಡಲಾಗಿದ್ದು, ಮತ್ತೆ ರಿಪೋರ್ಟ್ ನೆಗೆಟಿವ್ ಬಂದಿದೆ ಎಂದು ಮುಂಬೈ ಫ್ರಾಂಚೈಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್‌ ತಂಡವು ಸೆಪ್ಟೆಂಬರ್ 19ರಂದು ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಎದುರಿಸಲಿದೆ.