Asianet Suvarna News Asianet Suvarna News

ದುಬೈ ತಲುಪಿದ RCB ನಾಯಕ ವಿರಾಟ್ ಕೊಹ್ಲಿಗೆ ಅದ್ಧೂರಿ ಸ್ವಾಗತ; ಅಖಾಡ ರೆಡಿ!

  • ಇಂಗ್ಲೆಂಡ್ ಟೆಸ್ಟ್ ಅಂತ್ಯಗೊಂಡ ಬಳಿಕ ದುಬೈಗೆ ಬಂದಿಳಿದ ವಿರಾಟ್ ಕೊಹ್ಲಿ
  • ನಾಯಕ ವಿರಾಟ್ ಕೊಹ್ಲಿಗೆ ಅದ್ಧೂರಿ ಸ್ವಾಗತ ಕೋರಿದ ಆರ್‌ಸಿಬಿ
  • ಕುಟುಂಬ ಸಮೇತ ದುಬೈಗೆ ತಲುಪಿದ ಕೊಹ್ಲಿ, ಕೌಂಟ್‌ಡೌನ್ ಆರಂಭ
RCB captain Virat Kohli Mohammed Siraj reached UAE for 2nd phase of IPL 2021 ckm
Author
Bengaluru, First Published Sep 12, 2021, 3:49 PM IST

ದುಬೈ(ಸೆ.12): ಐಪಿಎಲ್ ಟೂರ್ನಿ 2021ರ ಎರಡನೇ ಭಾಗದ ಪಂದ್ಯಕ್ಕಾಗಿ 8 ಫ್ರಾಂಚೈಸಿ ಇದೀಗ ದುಬೈನಲ್ಲಿದೆ. ರಾಷ್ಟ್ರೀಯ ಕರ್ತವ್ಯದಲ್ಲಿದ್ದ ಆಟಗಾರರು ಇದೀಗ ಒಬ್ಬರ ಹಿಂದೊಬ್ಬರು ತಂಡ ಸೇರಿಕೊಳ್ಳುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯ ರದ್ದಾದ ಕಾರಣ ನಾಯಕ ವಿರಾಟ್ ಕೊಹ್ಲಿ ಇದೀಗ ದುಬೈ ತಲುಪಿದ್ದಾರೆ. 

IPL 2021: ದುಬೈ ತಲುಪಿದ ಆರ್‌ಸಿಬಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್‌ಗೆ ಅದ್ಧೂರಿ ಸ್ವಾಗತ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡಿಕೊಳ್ಳಲು ವಿರಾಟ್ ಕೊಹ್ಲಿ ದುಬೈಗೆ ಬಂದಿಳಿದಿದ್ದಾರೆ. ಕೊಹ್ಲಿಗೆ ಆರ್‌ಸಿಬಿ ಅದ್ಧೂರಿ ಸ್ವಾಗತ ನೀಡಿದೆ. ಇಂಗ್ಲೆಂಡ್‌ನಿಂದ ಆಗಮಿಸುವ ಟೀಂ ಇಂಡಿಯಾ ಕ್ರಿಕೆಟಿಗರಿಗು ನೇರವಾಗಿ ತಂಡ ಸೇರಿಕೊಳ್ಳಬಹುದು. ಕಾರಣ ಇಂಗ್ಲೆಂಡ್‌ನಲ್ಲಿ ಬಯೋಬಬಲ್‌ನಲ್ಲಿದ್ದ ಕಾರಣ ನಿಯಮದಲ್ಲಿ ಸಡಿಲಿಕೆ ಮಾಡಲಾಗಿದೆ. ಆದರೆ ದುಬೈನಲ್ಲಿ ಆರ್‌ಸಿಬಿ ಬಯೋಬಬಲ್‌ನಲ್ಲಿ 6 ದಿನ ಕ್ವಾರಂಟೈನ್ ಕಡ್ಡಾಯವಾಗಿದೆ.

 

ದುಬೈ ಬಂದಿಳಿದ ವಿರಾಟ್ ಕೊಹ್ಲಿ ನೇರವಾಗಿ ಹೊಟೆಲ್‌ಗೆ ತೆರಳಿದ್ದಾರೆ. ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಪುತ್ರಿ ಜೊತೆ ದುಬೈಗೆ ಆಗಮಿಸಿದ್ದಾರೆ. ಎಬಿ ಡಿವಿಲಿಯರ್ಸ್ ಈಗಾಗಲೇ ದುಬೈನಲ್ಲಿ ಬೀಡು ಬಿಟ್ಟಿದ್ದಾರೆ. ನಾಳೆಯಿಂದ ವಿರಾಟ್ ಕೊಹ್ಲಿ ಅಭ್ಯಾಸ ಆರಂಭಿಸಲಿದ್ದಾರೆ. 

IPL 2021: RCB ತಂಡ ಕೂಡಿಕೊಂಡ ಬೆಂಕಿ-ಬಿರುಗಾಳಿ..! ಈ ಸಲಾ ಕಪ್‌ ನಮ್ದೇ ನಾ..?

ವಿರಾಟ್ ಕೊಹ್ಲಿ ಜೊತೆ ಆರ್‌ಸಿಬಿ ವೇಗಿ ಮೊಹಮ್ಮದ್ ಸಿರಾಜ್ ಕೂಡ ದುಬೈಗೆ ಆಗಮಿಸಿದ್ದಾರೆ. ಸಿರಾಜ್ ಕೂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್‌ನಲ್ಲಿದ್ದರು. ಇದೀಗ ಕೊಹ್ಲಿ ಹಾಗೂ ಸಿರಾಜ್ ಜೊತೆಯಾಗಿ ಆರ್‌ಸಿಬಿ ತಂಡ ಸೇರಿಕೊಂಡಿದ್ದಾರೆ.

ಕೊಹ್ಲಿ ಹಾಗೂ ಸಿರಾಜ್ ಕ್ವಾರಂಟೈನ್ ಅವಧಿ ಸೆಪ್ಟೆಂಬರ್ 18 ಅಥವಾ 19ಕ್ಕೆ ಅಂತ್ಯವಾಗಲಿದೆ.  ಆರ್‌ಸಿಬಿ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 20 ರಂದು ಕೆಕೆಆರ್ ವಿರುದ್ಧ ಆಡಲಿದೆ. ಸೆಪ್ಟೆಂಬರ್ 24 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಹೋರಾಟ ನಡೆಸಲಿದೆ
 

Follow Us:
Download App:
  • android
  • ios