ಟರ್ಕಿಯ ಪ್ರಮುಖ ನಗರ ಇಸ್ತಾನ್‌ಬುಲ್‌ನಲ್ಲಿ ಮುಂದಿನ ಐಪಿಎಲ್‌ ನಡೆಯಲಿದೆ ಎನ್ನುವ ವರದಿಯಲ್ಲಿ ಐಪಿಎಲ್‌ ಚೇರ್ಮನ್‌ ಅರುಣ್‌ ಧುಮಲ್‌ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಇದೊಂದು ಆಧಾರರಹಿತ ಸುದ್ದಿ ಎಂದು ಏಷ್ಯಾನೆಟ್‌ ನ್ಯೂಸ್‌ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಬೆಂಗಳೂರು (ಅ. 27): ಮುಂಬರುವ ಐಪಿಎಲ್‌ನ ಕೆಲ ಪಂದ್ಯಗಳು ಅಥವಾ ಐಪಿಎಲ್‌ನ ಮಿನಿ ಹರಾಜು ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆಯಬಹುದು ಎನ್ನುವ ಸುದ್ದಿಯನ್ನು ಐಪಿಎಲ್‌ ಅಧ್ಯಕ್ಷ ಅರುಣ್‌ ಧುಮಲ್‌ ಸಂಪೂರ್ಣವಾಗಿ ತಳ್ಳಿಹಾಕಿದ್ದು, ಇದೊಂದು ಆಧಾರರಹಿತ ಸುದ್ದಿ ಎಂದಿದ್ದಾರೆ. ಈ ಸುದ್ದಿಯ ಮೂಲ ಏನು ಎನ್ನುವುದೇ ನನಗೆ ಅರ್ಥವಾಗಿಲ್‌ಲ. ನಾನಂತೂ ಇದನ್ನು ಓದಿ ಬಹಳ ಅಚ್ಚರಿಪಟ್ಟಿದ್ದರೆ. ಮುಂದಿನ ಈವೆಂಟ್ ನಡೆಯುವ ದಿನಾಂಕಗಳ ಬಗ್ಗೆಯಷ್ಟೇ ನಾವೀಗ ಚರ್ಚೆ ಮಾಡುತ್ತಿದ್ದೇವೆ. ಯಾವ ಸ್ಥಳದಲ್ಲಿ ನಡೆಸಬೇಕು ಎನ್ನುವುದರ ಬಗ್ಗೆ ಸ್ವಲ್ಪವೂ ಯೋಚನೆ ಮಾಡಿಲ್ಲ. ಇನ್ನು ಇಸ್ತಾನ್‌ಬುಲ್‌ನಂಥ ಸ್ಥಳದ ಬಗ್ಗೆ ನಾವು ಈವರೆಗೂ ಒಂದು ಸ್ವಲ್ಪವೂ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.ಏಷ್ಯಾನೆಟ್‌ ನ್ಯೂಸ್‌ ಜೊತೆ ಎಕ್ಸ್‌ಕ್ಲೂಸಿವ್‌ ಆಗಿ ಮಾತನಾಡಿದ ನೂತನ ಐಪಿಎಲ್‌ ಚೇರ್ಮನ್‌ ಅರುಣ್‌ ಧುಮಲ್‌, ಇಸ್ತಾನ್‌ಬುಲ್‌ನಲ್ಲಿ ಐಪಿಎಲ್‌ ನಡೆಯಲಿದೆ ಎನ್ನುವ ವರದಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದರು. ಇಂಥದ್ದೊಂದು ಸುಳ್ಳು ಸುದ್ದಿಗಳು ಎಲ್ಲಿಂದ ಹಾಗೂ ಹೇಗೆ ಹರಡುತ್ತವೆ ಎನ್ನುವುದೇ ಗೊತ್ತಾಗುತ್ತಿಲ್ಲ ಎಂದಿದ್ದಾರೆ. 

ಕ್ರಿಕೆಟ್‌ (Cricket) ಕುರಿತಾಗಿ ವರದಿ ಮಾಡುವ ಖ್ಯಾತ ವೆಬ್‌ಸೈಟ್‌ ತನ್ನ ಇತ್ತೀಚಿನ ವರದಿಯಲ್ಲಿ ಮುಂದಿನ ಐಪಿಎಲ್‌ನ ಕೆಲ ಪಂದ್ಯಗಳು ಹಾಗೂ ಡಿಸೆಂಬರ್‌ ಮಧ್ಯಭಾಗದಲ್ಲಿ ನಡೆಯಲಿರುವ ಐಪಿಎಲ್‌ ಮಿನಿ ಹರಾಜು ಇಸ್ತಾನ್‌ಬುಲ್‌ನಲ್ಲಿ ನಡೆಯಲಿದೆ ಎಂದು ಪ್ರಕಟಿಸಿತ್ತು. ಇದನ್ನು ಬಹುತೇಕ ಮಾಧ್ಯಮಗಳು ಕೂಡ ವರದಿ ಮಾಡಿದ್ದವು. ಈ ಕುರಿತಾಗಿ ಅರುಣ್‌ ಧುಮಲ್‌ (Arun Dhumal) ಪ್ರತಿಕ್ರಿಯೆ ನೀಡಿದ್ದಾರೆ. 

ಮೂಲತಃ ಟರ್ಕಿಯ ಜೊತೆ ಹಾಗೂ ಇಸ್ತಾನ್‌ಬುಲ್‌ (Istanbul) ನಗರದೊಂದಿಗೆ ಭಾರತ ಉತ್ತಮ ಸಂಬಂಧ ಹೊಂದಿಲ್ಲ. ಇತ್ತೀಚೆಗೆ ಲುಫ್ತಾನ್ಸ ಬೆಂಗಳೂರು ವಿಮಾನವನ್ನು ತಾಂತ್ರಿಕವಲ್ಲದ ಕಾರಣಕ್ಕಾಗಿ ಇಸ್ತಾನ್‌ಬುಲ್‌ ವಿಮಾನ ನಿಲ್ದಾಣದ ಕಡೆಗೆ ತಿರುಗಿಸಲಾಗಿತ್ತು. ಆದರೆ, ಇಸ್ತಾನ್‌ಬುಲ್‌ನ ವಿಮಾನನಿಲ್ದಾಣದ ಅಧಿಕಾರಿಗಳು ಅಮೆರಿಕ ಹಾಗೂ ಇತರ ದೇಶಗಳ ಪಾಸ್‌ಪೋರ್ಟ್‌ ಹೊಂದಿದ್ದ ವ್ಯಕ್ತಿಗಳಿಗೆ ವಿಮಾನದಿಂದ ಹೊರಗೆ ಬರಲು ಅನುಮತಿ ನೀಡಿದ್ದಲ್ಲದೆ, ಹೋಟೆಲ್‌ಗೆ ತೆರಳಿ ವಿಶ್ರಾಂತಿ ತೆಗೆದುಕೊಳ್ಳಲು ಅನುಮತಿ ನೀಡಿತ್ತು. ಆದರೆ, ಭಾರತದ ಪಾಸ್‌ಪೋರ್ಟ್‌ ಹೊಂದಿದ್ದ ವ್ಯಕ್ತಿಗಳಿಗೆ ಈ ಅವಕಾಶವನ್ನು ನಿರಾಕರಿಸಿತ್ತು.

5 ತಂಡಗಳ ಮಹಿಳಾ ಐಪಿಎಲ್ ಟೂರ್ನಿಗೆ ಮುಹೂರ್ತ ಫಿಕ್ಸ್‌

ಅದಲ್ಲದೆ, ಕೆಲವು ದಿನಗಳ ಹಿಂದೆ, ಭಾರತ ವಿರೋಧಿ ಭಾವನೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಪಾಕಿಸ್ತಾನ ತನ್ನ ರಹಸ್ಯ ಡಿಜಿಟಲ್‌ ಆರ್ಮಿಯನ್ನು ಸ್ಥಾಪನೆ ಮಾಡಿತ್ತು. ಇದಕ್ಕೆ ಟರ್ಕಿಯ ಇಸ್ತಾನ್‌ಬುಲ್‌ ದೊಡ್ಡ ಕಾಣಿಕೆ ನೀಡಿತ್ತು ಎಂದು ವರದಿಯಾಗಿದ್ದವು. 

BCCI ಅಧ್ಯಕ್ಷ ಸ್ಥಾನಕ್ಕೆ ರೋಜರ್‌ ಬಿನ್ನಿ ನಾಮಪತ್ರ, ಧುಮಲ್‌ ಐಪಿಎಲ್‌ ಹೊಸ ಚೇರ್ಮನ್‌?

ಏನಿದೆ ವರದಿಯಲ್ಲಿ: ಸಾಂಪ್ರದಾಯಿಕವಾಗಿ ಐಪಿಎಲ್‌ ಅಧಿಕಾರಿಗಳು ಹರಾಜು (IPL Auction) ಕಾರ್ಯಕ್ರಮಗಳನ್ನು ವಿದೇಶದಲ್ಲಿ ನಡೆಸಬೇಕು ಎನ್ನುವ ಒಲವು ಹೊಂದಿದ್ದಾರೆ. ಕೆಲ ವರ್ಷಗಳ ಹಿಂದೆ ಐಪಿಎಲ್‌ ಫ್ರಾಂಚೈಸ ವರ್ಕ್‌ಶಾಪ್‌ ಸಿಂಗಾಪುರದಲ್ಲಿ ನಡೆದಿತ್ತು. ಇನ್ನೊಂದು ವರ್ಷದಲ್ಲಿ, ಬಿಸಿಸಿಐ (BCCI) ಹರಾಜು ಕಾರ್ಯಕ್ರಮವನ್ನು ಲಂಡನ್‌ನಲ್ಲಿ ಮಾಡುವ ಹಂತಕ್ಕೆ ಬಂದಿತು ಆದರೆ ಇದು ದುಬಾರಿ ವೆಚ್ಚ ಎಂದು ವಾದಿಸಿದ ಕೆಲವು ಫ್ರಾಂಚೈಸಿಗಳು ಪ್ರತಿರೋಧದ ವ್ಯಕ್ತಪಡಿಸಿದ್ದವು. ಕೊನೆಯ ಕ್ಷಣದಲ್ಲಿ ಅದನ್ನು ರದ್ದುಗೊಳಿಸಬೇಕಾಯಿತು.ಐಪಿಎಲ್ ಕೇಂದ್ರೀಯ ಆದಾಯದಿಂದ ಆದಾಯವು ಇತ್ತೀಚೆಗೆ ಮೂರು ಪಟ್ಟು ಹೆಚ್ಚಾಗುವುದರೊಂದಿಗೆ, ವಿಶೇಷವಾಗಿ ಕಳೆದ ವರ್ಷದ ಮಾಧ್ಯಮ ಹಕ್ಕುಗಳ ಮಾರಾಟದ ನಂತರ, ಫ್ರಾಂಚೈಸಿಗಳು ವಿದೇಶದಲ್ಲಿ ಐಪಿಎಲ್‌ ನಡೆಸಲು ಉತ್ಸುಕರಾಗಿದ್ದಾರೆ. ಇಸ್ತಾನ್‌ಬುಲ್ ಇನ್ನೂ ಎಲ್ಲಾ ಫ್ರಾಂಚೈಸಿಗಳ ಅವಿರೋಧ ಆಯ್ಕೆಯಾಗಿಲ್ಲ ಆದರೆ ಪ್ರಮುಖ ಐಪಿಎಲ್ ನಿರ್ಧಾರಗಳಿಗೆ ಬಂದಾಗ, ಬಿಸಿಸಿಐ ಯಾವಾಗಲೂ ತನ್ನ ನಿರ್ಧಾರದಂತೆ ಮಾಡುತ್ತದೆ. ಮುಂದಿನ ತಿಂಗಳ ಆರಂಭದಲ್ಲಿ ಬೆಂಗಳೂರನ್ನು ಸಂಭಾವ್ಯ ಎರಡನೇ ಆಯ್ಕೆಯಾಗಿಟ್ಟುಕೊಂಡು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಅದರ ಅಧಿಕಾರಿಗಳು ತಂಡಗಳಿಗೆ ತಿಳಿಸಿದ್ದಾರೆ.