ಚೆನ್ನೈ(ಫೆ.18): ಐಪಿಎಲ್ ಹರಾಜು ಪ್ರಕ್ರಿಯೆ ಆರಂಭಗೊಂಡಿದೆ. ಬಿಡ್‌ಗೆ ಆಯ್ಕೆ ಮಾಡಿದ ಮೊದಲ ಹೆಸರು ಕನ್ನಡಿಗ ಕರುಣ್ ನಾಯರ್. ಆದರೆ ಕರುಣ್ ನಾಯರ್ ಖರೀದಿಗೆ ಯಾವ ಫ್ರಾಂಚೈಸಿ ಕೂಡ ಆಸಕ್ತಿ ತೋರಲಿಲ್ಲ. 50 ಲಕ್ಷ ರೂಪಾಯಿ ಮೂಲ ಬೆಲೆ ಹೊಂದಿದ್ದ ಕರುಣ್ ನಾಯರ್ ಬಿಕರಿಯಾಗದೆ ಉಳಿದುಕೊಂಡರು.

IPL ಟೂರ್ನಿ ಟೈಟಲ್ ಪ್ರಾಯೋಜಕತ್ವ ಘೋಷಿಸಿದ ಚೇರ್ಮೆನ್ ಬ್ರಿಜೇಶ್ ಪಟೇಲ್!.

ಇನ್ನು ಇಂಗ್ಲೆಂಡ್ ಕ್ರಿಕೆಟಿಗ ಜೇಸನ್ ರಾಯ್ ಅನ್‌ಸೋಲ್ಡ್ ಆಗಿದ್ದಾರೆ.  ಅಲೆಕ್ಸ್ ಹೇಲ್ಸ್ ಕೂಡ ಬಿಕರಿಯಾಗಿಲ್ಲ. ಇನ್ನು ಆ್ಯರೋನ್ ಫಿಂಚ್ ಖರೀದಿಗೂ ಯಾವ ಫ್ರಾಂಚೈಸಿ ಕೂಡ ಆಸಕ್ತಿ ತೋರಲಿಲ್ಲ.

ಕ್ರಿಕೆಟಿಗ ಎವಿನ್ ಲೆವಿಸ್  ಸೇರಿದಂತೆ ಆರಂಭದಲ್ಲಿ ಅನ್‌ಸೋಲ್ಡ್ ಆಟಗಾರರ ಪಟ್ಟಿ ದೊಡ್ಡದಾಗುತ್ತಿದೆ.