ಚೆನ್ನೈ(ಫೆ.18):  ಐಪಿಎಲ್ ಟೂರ್ನಿ ಹರಾಜು ಪ್ರಕ್ರಿಯೆ ಆರಂಭಗೊಂಡಿದೆ. ಚೆನ್ನೈನಲ್ಲಿ ನಡೆಯುತ್ತಿರುವ ಆಟಗಾರರ ಹರಾಜಿನ ಆರಂಭದಲ್ಲಿ ಬಿಸಿಸಿಐ ಮುಂಬರವು ಐಪಿಎಲ್ ಟೂರ್ನಿಯ ಟೈಟಲ್ ಪ್ರಾಯೋಜಕತ್ವ ಘೋಷಿಸಿದೆ. 2021ರ ಐಪಿಎಲ್ ಟೂರ್ನಿಯ ಟೈಟಲ್ ಪ್ರಾಯೋಜಕತ್ವ ವಿವೋ ಮೊಬೈಲ್ ಪಾಲಾಗಿದೆ.

IPL Auction 2021 Live Updates: ಹರಾಜಿನ ಕ್ಷಣ ಕ್ಷಣದ ಮಾಹಿತಿ ನಿಮಗಾಗಿ

2020ರ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದಿದ್ದ ವಿವೋ, ಇದೀಗ 2021ರಲ್ಲಿ ಮತ್ತೆ ಟೈಟಲ್ ಪ್ರಾಯೋಜಕತ್ವ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. 2020ರಲ್ಲಿ ಡ್ರೀಮ್ ಇಲೆವೆನ್ ಐಪಿಎಲ್ ಟೈಟಲ್ ಪ್ರಾಯೋಜಕತ್ವ ಪಡೆದುಕೊಂಡಿತ್ತು.

ಮತ್ತೆ ಟೈಟಲ್ ಪ್ರಾಯೋಜಕತ್ವ ಪಡೆದುಕೊಂಡ ವಿವೋಗೆ ಬ್ರಿಜೇಶ್ ಪಟೇಲ್ ಸ್ವಾಗತ ನೀಡಿದ್ದಾರೆ. ಹರಾಜು ಪ್ರಕ್ರಿಯೆ ಪ್ರಸ್ತಾವಿಕ ಭಾಷಣದಲ್ಲಿ ಬ್ರಿಜೇಶ್ ಪಟೇಲ್ ಈ ಘೋಷಣೆ ಮಾಡಿದ್ದಾರೆ.