ದುಬೈನಲ್ಲಿ ನಡೆದ ಐಪಿಎಲ್ ಮಿನಿ ಬಿಡ್​ ಹಲವು ಅಚ್ಚರಿಗಳಿಗೆ ಕಾರಣವಾಗಿತ್ತು. ಈ ಅಚ್ಚರಿಗಳೇ ಈಗ ಹೊಸ ಚರ್ಚೆಯನ್ನು ಹುಟ್ಟುಹಾಕಿವೆ. ಯಾಕಂದ್ರೆ ಈ ಬಾರಿಯ ಆಕ್ಷನ್​ನಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಬರೋಬ್ಬರಿ 24.75 ಕೋಟಿಗೆ ಕೆಕೆಆರ್ ತಂಡಕ್ಕೆ ಬಿಕರಿಯಾಗಿದ್ದಾರೆ. ಈ ಮೂಲ್ಕ ಐಪಿಎಲ್​ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ​ ಪಾತ್ರರಾಗಿದ್ದಾರೆ.

ಬೆಂಗಳೂರು: ಐಪಿಎಲ್‌ನಲ್ಲಿ ವಿದೇಶಿ ಆಟಗಾರರಿಗೆ ಭಾರಿ ಮೊತ್ತ ಕೊಡುತ್ತಿರುವುದೇಕೆ..? ಭಾರತೀಯರಿಗೆ ಯಾಕೆ ಅಷ್ಟು ಹಣ ಸಿಗ್ತಿಲ್ಲ. ಸ್ಟಾರ್ಕ್​-ಕಮ್ಮಿನ್ಸ್​ಗಿಂತ ಕೊಹ್ಲಿ-ಬುಮ್ರಾ ಡಮ್ಮಿ ಪ್ಲೇಯರ್​ಗಳಾ..? ಭಾರತೀಯರಿಗೆ ಹಣ ಕೊಡಲು ಹಿಂದೇಟು ಹಾಕುವ ಫ್ರಾಂಚೈಸಿಗಳು, ವಿದೇಶಿಯರಿಗೇಕೆ ಅಷ್ಟು ಹಣ ಕೊಡುತ್ತಾರೆ..? ಈ ಎಲ್ಲದಕ್ಕೂ ಆನ್ಸರ್ ಇಲ್ಲಿದೆ ನೋಡಿ.

ಐಪಿಎಲ್ ಹಳೆ ನಿಯಮದಿಂದ ಭಾರತೀಯರಿಗೆ ಆಗ್ತಿದ್ಯಾ ಅನ್ಯಾಯ..?

ದುಬೈನಲ್ಲಿ ನಡೆದ ಐಪಿಎಲ್ ಮಿನಿ ಬಿಡ್​ ಹಲವು ಅಚ್ಚರಿಗಳಿಗೆ ಕಾರಣವಾಗಿತ್ತು. ಈ ಅಚ್ಚರಿಗಳೇ ಈಗ ಹೊಸ ಚರ್ಚೆಯನ್ನು ಹುಟ್ಟುಹಾಕಿವೆ. ಯಾಕಂದ್ರೆ ಈ ಬಾರಿಯ ಆಕ್ಷನ್​ನಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಬರೋಬ್ಬರಿ 24.75 ಕೋಟಿಗೆ ಕೆಕೆಆರ್ ತಂಡಕ್ಕೆ ಬಿಕರಿಯಾಗಿದ್ದಾರೆ. ಈ ಮೂಲ್ಕ ಐಪಿಎಲ್​ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ​ ಪಾತ್ರರಾಗಿದ್ದಾರೆ. ಮತ್ತೊಂದೆಡೆ ಪ್ಯಾಟ್ ಕಮಿನ್ಸ್ ಅವರನ್ನು ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ 20.50 ಕೋಟಿಗೆ ಖರೀದಿಸಿದೆ. ಇದು ಐಪಿಎಲ್​ ಇತಿಹಾಸದ 2ನೇ ದುಬಾರಿ ಬಿಡ್ಡಿಂಗ್. ಈ ಎರಡು ದುಬಾರಿ ಹರಾಜಿನ ಬೆನ್ನಲ್ಲೇ ಐಪಿಎಲ್ ನಿಯಮಗಳ ಬಗ್ಗೆ ಅಪಸ್ವರಗಳು ಕೇಳಿ ಬಂದಿವೆ.

ರಿಟೈನ್​​​ನಲ್ಲಿ ಕೊಹ್ಲಿಗೆ 15 ಕೋಟಿ, ಬುಮ್ರಾಗೆ 12 ಕೋಟಿ..!

ಕೆಲ ಆಟಗಾರರನ್ನು ನಿರ್ದಿಷ್ಟ ಮೊತ್ತ ನೀಡಿ ಫ್ರಾಂಚೈಸಿಗಳು ರಿಟೈನ್​ ಮಾಡಿಕೊಳ್ಳುತ್ತಾ ಬಂದಿವೆ. ಈ ಆಟಗಾರರು ಬಿಡ್ಡಿಂಗ್​ನಲ್ಲಿ ಕಾಣಿಸಿಕೊಂಡರೆ ಬೃಹತ್ ಮೊತ್ತಕ್ಕೆ ಸೇಲ್ ಆಗೋದು ಗ್ಯಾರಂಟಿ. ಫ್ರಾಂಚೈಸಿಗಳ ನಿಯಮಗಳಿಗೆ ಅನುಗುಣವಾಗಿ ಅವರೆಲ್ಲಾ ರಿಟೈನ್ ಆಗುತ್ತಾ ಬರುತ್ತಿದ್ದಾರೆ. ಆದರೆ ಹರಾಜಿನಲ್ಲಿ ಕಾಣಿಸಿಕೊಳ್ಳುವ ಆಟಗಾರರು ಮಾತ್ರ ಅವರಿಗಿಂತ ಹೆಚ್ಚಿನ ಮೊತ್ತಕ್ಕೆ ಬಿಡ್ ಆಗ್ತಿದ್ದಾರೆ. ಉದಾಹರಣೆಗೆ, ಆರ್​ಸಿಬಿ ಫ್ರಾಂಚೈಸಿ ಈ ಬಾರಿ ವಿರಾಟ್ ಕೊಹ್ಲಿಯನ್ನು 15 ಕೋಟಿಗೆ ರಿಟೈನ್ ಮಾಡಿಕೊಂಡಿದೆ. ಒಂದು ವೇಳೆ ಕಿಂಗ್ ಕೊಹ್ಲಿ ಹರಾಜಿನಲ್ಲಿ ಕಾಣಿಸಿಕೊಂಡ್ರೆ 25 ಕೋಟಿಗೂ ಅಧಿಕ ಮೊತ್ತಕ್ಕೆ ಸೇಲ್ ಆಗಲಿದ್ದಾರೆ.

ಧೋನಿಗೆ RCB ಗೆ ಬಂದು ಕಪ್ ಗೆಲ್ಲಿಸಿಕೊಡಿ ಎಂದ ಬೆಂಗಳೂರು ಅಪ್ಪಟ ಅಭಿಮಾನಿ: ಕ್ಯಾಪ್ಟನ್ ಕೂಲ್ ಕೊಟ್ಟ ರಿಪ್ಲೇ ವೈರಲ್

ಜಸ್​ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವುದು ಕೇವಲ 12 ಕೋಟಿಗೆ. ಆದರೆ ಇಲ್ಲಿ ಹರಾಜಿನಲ್ಲಿ ಕಾಣಿಸಿಕೊಂಡಿರುವ ಮಿಚೆಲ್ ಸ್ಟಾರ್ಕ್​ಗೆ ಸಿಕ್ಕಿರುವುದು 24.75 ಕೋಟಿ. ಅಂದರೆ ಬುಮ್ರಾ ಹರಾಜಿಗೆ ಬಂದರೆ ಸ್ಟಾರ್ಕ್​ಗಿಂತ ಹೆಚ್ಚಿನ ಮೊತ್ತ ಪಡೆಯುವುದರಲ್ಲಿ ಅನುಮಾನವೇ ಇಲ್ಲ. ಆದರೆ ಐಪಿಎಲ್ ರಿಟೈನ್ ನಿಯಮದಿಂದಾಗಿ ಭಾರತದ ಸ್ಟಾರ್ ಆಟಗಾರರು ಕಡಿಮೆ ವೇತನ ಪಡೆಯುವಂತಾಗಿದೆ. ಅತ್ತ ಹರಾಜಿನಲ್ಲಿ ಕಾಣಿಸಿಕೊಳ್ಳುವ ವಿದೇಶಿ ಆಟಗಾರರು ಮಾತ್ರ ಬೃಹತ್ ಮೊತ್ತಕ್ಕೆ ಬಿಡ್ ಆಗುತ್ತಿದ್ದಾರೆ.

ಕೊಹ್ಲಿ, ರೋಹಿತ್, ಬುಮ್ರಾ ಅಥವಾ ಧೋನಿಯಂತಹ ಆಟಗಾರರಿಗೆ ಮಾಡುವ ಅನ್ಯಾಯ ಎಂದು ಅನೇಕರು ವಿಶ್ಲೇಷಿಸಿದ್ದಾರೆ. ಏಕೆಂದರೆ ಈ ಆಟಗಾರರು ಒಂದೇ ಫ್ರಾಂಚೈಸಿ ಪರ ನಿಯತ್ತಾಗಿದ್ದರೂ ಹೆಚ್ಚಿನ ಸಂಭಾವನೆ ಪಡೆಯುತ್ತಿಲ್ಲ. ಇದೇ ವೇಳೆ ಹರಾಜಿನಲ್ಲಿ ಕಾಣಿಸಿಕೊಳ್ಳುವ ಆಟಗಾರರಿಗೆ ಫ್ರಾಂಚೈಸಿಗಳು ಹೆಚ್ಚಿನ ಮೊತ್ತ ನೀಡುತ್ತಿದ್ದಾರೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.

ಫಾರಿನ್ ಪ್ಲೇಯರ್ಸ್​ಗೆ ವಿಶೇಷ ಪರ್ಸ್​

ಐಪಿಎಲ್ ಹರಾಜಿನಲ್ಲಿ ವಿದೇಶಿಯರಿಗೆ ಬೇರೆ ಪರ್ಸ್ ಮೊತ್ತವನ್ನು ನಿಗದಿ ಮಾಡಬೇಕು ಎಂದು ಟೀಮ್ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆ ಸಲಹೆ ನೀಡಿದ್ದಾರೆ. ಇದರಿಂದ ಭಾರತ ಮತ್ತು ವಿದೇಶಿ ಆಟಗಾರರ ನಡುವಿನ ವೇತನ ವ್ಯತ್ಯಾಸವನ್ನು ಕಡಿಮೆ ಮಾಡಬಹುದು. ಇಲ್ಲಿ ವಿದೇಶಿ ಆಟಗಾರರಿಗೆ ಇಂತಿಷ್ಟು ಪರ್ಸ್ ಮೊತ್ತ ನಿಗದಿ ಮಾಡುವುದರಿಂದ ಆ ಮೊತ್ತದೊಳಗೆ ಅವರು 8 ಆಟಗಾರರನ್ನು ಖರೀದಿಸಬೇಕಾಗುತ್ತದೆ. ಇದರಿಂದ ಪ್ರಸ್ತುತ ಕಂಡು ಬರುತ್ತಿರುವಂತಹ ವೇತನ ತಾರತಮ್ಯವನ್ನು ದೂರ ಮಾಡಬಹುದು ಎಂದು ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.

ಹಳೆಯ ನಿಯಮದಲ್ಲೇ ಉಳಿದ ಐಪಿಎಲ್

ಐಪಿಎಲ್‌ನ ರಿಟೈನ್ ನಿಯಮ ರೂಪಿಸಿರುವುದು 2008ರಲ್ಲಿ. ಅಂದು ಎಲ್ಲಾ ತಂಡಗಳ ಪರ್ಸ್ ಮೊತ್ತ ಕಡಿಮೆಯಿತ್ತು. ಆದರೀಗ ಹರಾಜು ಮೊತ್ತವನ್ನು 100 ಕೋಟಿಗೆ ಏರಿಸಲಾಗಿದೆ. ಈಗ ಫ್ರಾಂಚೈಸಿಗಳು ಶೇಕಡ 70 ರಷ್ಟು ಹಣವನ್ನು ಆಟಗಾರರನ್ನು ಉಳಿಸಿಕೊಳ್ಳುವಲ್ಲಿ ಖರ್ಚು ಮಾಡುತ್ತಿವೆ. ಇನ್ನುಳಿದ ಮೊತ್ತವನ್ನು ವಿದೇಶಿ ಆಟಗಾರರ ಖರೀದಿಗೆ ಬಳಸಲಾಗುತ್ತಿದೆ. ಇದರಿಂದ ಭಾರತದ ಸ್ಟಾರ್ ಆಟಗಾರರಿಗಿಂತ ವಿದೇಶಿ ಪ್ಲೇಯರ್ಸ್ ಹೆಚ್ಚಿನ ಮೊತ್ತ ಪಡೆಯುತ್ತಿದ್ದಾರೆ. ಹೀಗಾಗಿ ಮುಂಬರುವ ಸೀಸನ್​ಗಳಲ್ಲಿ ವಿದೇಶಿ ಆಟಗಾರರಿಗೆ ವಿಶೇಷ ಪರ್ಸ್​ ಮೊತ್ತ ರೂಪಿಸುವುದು ಉತ್ತಮ. ಇಲ್ಲದಿದ್ದರೆ ಭಾರತೀಯ ಸ್ಟಾರ್ ಆಟಗಾರರು ಖಾಯಂ ತಂಡಗಳಿಂದ ಹೊರಬರುವುದಂತು ಖಚಿತ.

ಸ್ಪೋರ್ಟ್ಸ್​ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್