2014ರಲ್ಲಿ ಮೊದಲ ಬಾರಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಕೂಡಿಕೊಂಡಿದ್ದ ಡೇವಿಡ್ ವಾರ್ನರ್, ಅಮೋಘ ಪ್ರದರ್ಶನದ ಮೂಲಕ ಆರೆಂಜ್ ಆರ್ಮಿ ಪಾಲಿನ ಹೀರೋ ಎನಿಸಿಕೊಂಡಿದ್ದರು. ಇದಷ್ಟೇ ಅಲ್ಲದೇ 2016ರ ಐಪಿಎಲ್ ಟೂರ್ನಿಯಲ್ಲಿ ನಾಯಕನಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ವಾರ್ನರ್ ಚಾಂಪಿಯನ್ ಪಟ್ಟಕ್ಕೇರಿಸಿದ್ದರು.
ದುಬೈ(ಡಿ.19): ಬಹುನಿರೀಕ್ಷಿತ 2024ರ ಐಪಿಎಲ್ ಟೂರ್ನಿಗೂ ದುಬೈನಲ್ಲಿ ಆಟಗಾರರ ಹರಾಜು ಭರ್ಜರಿಯಾಗಿಯೇ ನಡೆಯುತ್ತಿದೆ. ಹೀಗಿರುವಾಗಲೇ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಕೂಡಿಕೊಂಡ ಆಸೀಸ್ ಆಟಗಾರರಾದ ಟ್ರಾವಿಸ್ ಹೆಡ್ ಹಾಗೂ ಪ್ಯಾಟ್ ಕಮಿನ್ಸ್ ಅವರಿಗೆ ಶುಭಕೋರಲು ಮುಂದಾದ ಡೇವಿಡ್ ವಾರ್ನರ್‌ಗೆ ಶಾಕ್ ಕಾದಿತ್ತು.
ಹೌದು, 2014ರಲ್ಲಿ ಮೊದಲ ಬಾರಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಕೂಡಿಕೊಂಡಿದ್ದ ಡೇವಿಡ್ ವಾರ್ನರ್, ಅಮೋಘ ಪ್ರದರ್ಶನದ ಮೂಲಕ ಆರೆಂಜ್ ಆರ್ಮಿ ಪಾಲಿನ ಹೀರೋ ಎನಿಸಿಕೊಂಡಿದ್ದರು. ಇದಷ್ಟೇ ಅಲ್ಲದೇ 2016ರ ಐಪಿಎಲ್ ಟೂರ್ನಿಯಲ್ಲಿ ನಾಯಕನಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ವಾರ್ನರ್ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಆ ಆವೃತ್ತಿಯಲ್ಲಿ 848 ರನ್ ಬಾರಿಸುವ ಮೂಲಕ ಟೂರ್ನಿಯಲ್ಲಿ ಎರಡನೇ ಗರಿಷ್ಠ ರನ್ ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
'ಬಲಗೈ ಸುರೇಶ್ ರೈನಾ..' ಸಮೀರ್ ರಿಜ್ವಿಯನ್ನು 8.40 ಕೋಟಿಗೆ ಖರೀದಿಸಿದ ಚೆನ್ನೈ ಸೂಪರ್ ಕಿಂಗ್ಸ್!
ಇದಾದ ಬಳಿಕ ಬಾಲ್ ಟ್ಯಾಂಪರಿಂಗ್ ಮಾಡಿದ ತಪ್ಪಿಗಾಗಿ ನಾಯಕತ್ವ ಕಳೆದುಕೊಂಡು ಮತ್ತೆ 2020ರಲ್ಲಿ ಸನ್‌ರೈಸರ್ಸ್‌ಗೆ ನಾಯಕರಾಗಿ ಮರು ಆಯ್ಕೆಯಾಗಿದ್ದರು. ಆದರೆ 2021ರಲ್ಲಿ ವಾರ್ನರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಇನ್ನು 2022ರ ಐಪಿಎಲ್ ಹರಾಜಿಗೂ ಮುನ್ನ ವಾರ್ನರ್ ಅವರಿಗೆ ಆರೆಂಜ್ ಆರ್ಮಿ ತಂಡದಿಂದಲೇ ಗೇಟ್‌ಪಾಸ್ ನೀಡಿತ್ತು. ಸದ್ಯ ಡೇವಿಡ್ ವಾರ್ನರ್, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ
ಇದೀಗ 2024ರ ಐಪಿಎಲ್ ಮಿನಿ ಹರಾಜು ನಡೆಯುತ್ತಿದೆ. ಆರಂಭದಲ್ಲೇ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು 6.80 ಕೋಟಿ ನೀಡಿ ಟ್ರಾವಿಸ್ ಹೆಡ್ ಅನ್ನು ಖರೀದಿಸಿತು. ಇದಾದ ಬಳಿಕ ಆಸೀಸ್‌ಗೆ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಪ್ಯಾಟ್ ಕಮಿನ್ಸ್ ಅವರಿಗೆ ಬರೋಬ್ಬರಿ 20.50 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತು.
'ದೇಶಕ್ಕಾಗಿ ಆಡಿ, ದುಡ್ಡು ಬೇಡ ಅಂದ್ರು ಬರುತ್ತೆ.. ' ಕಮ್ಮಿನ್ಸ್ ಬೆಸ್ಟ್ ಉದಾಹರಣೆ ಎಂದ ಐಪಿಎಲ್ ಫ್ಯಾನ್ಸ್!
ಇದರ ಬೆನ್ನಲ್ಲೇ ಡೇವಿಡ್ ವಾರ್ನರ್, ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಕೂಡಿಕೊಂಡ ಆಸೀಸ್ ಸಹ ಆಟಗಾರರಾದ ಹೆಡ್ ಹಾಗೂ ಕಮಿನ್ಸ್‌ಗೆ ಶುಭಕೋರಲು ಮುಂದಾದರು. ಆದರೆ ವಾರ್ನರ್‌ಗೆ ವಿಶ್ ಮಾಡಲು ಸಾಧ್ಯವಾಗಲಿಲ್ಲ. ಯಾಕೆಂದರೆ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಡೇವಿಡ್ ವಾರ್ನರ್ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಬ್ಲಾಕ್ ಮಾಡಿದೆ. ಇದೀಗ ಈ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಸನ್‌ರೈಸರ್ಸ್ ಹೈದರಾಬಾದ್ ಈ ನಡೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿವೆ.
