₹ 37 ಕೋಟಿಗೆ ಕೇವಲ ಮೂವರನ್ನು ಉಳಿಸಿಕೊಂಡ ಆರ್‌ಸಿಬಿ, ವಿರಾಟ್‌ ಕೊಹ್ಲಿಗೆ ಕೊಟ್ಟಿದ್ದೆಷ್ಟು?

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಿಂದ ರೂ.37 ಕೋಟಿಯಲ್ಲಿ ಕೇವಲ 3 ಆಟಗಾರರನ್ನು ಉಳಿಸಿಕೊಂಡಿದೆ.  ಈ ಬಾರಿ ವಿರಾಟ್ ಕೊಹ್ಲಿಗೆ ಕೊಟ್ಟ ಹಣವೆಷ್ಟು ಗೊತ್ತಾ?

IPL Auction 2025 RCB retain Kohli for Rs 21 crore and Rahul dropped by Lucknow sat

ಬೆಂಗಳೂರು (ಅ.31): ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)ತಂಡದಿಂದ ಈ ಬಾರಿ ವಿರಾಟ್ ಕೊಹ್ಲಿಗೆ ಬರೋಬ್ಬರಿ 21 ಕೋಟಿ ರೂ. ಹಣವನ್ನು ಕೊಟ್ಟು ಕೇವಲ ಮೂರು ಜನರನ್ನು ಮಾತ್ರ ಉಳಿಸಿಕೊಂಡಿದೆ. ಉಳಿದ ಎಲ್ಲ ಆಟಗಾರರನ್ನು ಬಿಟ್ಟುಕೊಟ್ಟಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಟಗಾರರ ಆಕ್ಷನ್‌ ವೇಳೆ ಆರ್‌ಸಿಬಿ ತಂಡದಿಂದ ಕೇವಲ 3 ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿದೆ. ವಿರಾಟ್ ಕೊಹ್ಲಿಗೆ ಬರೋಬ್ಬರಿ 21 ಕೋಟಿ ರೂ. ಕೊಟ್ಟು ತಂಡದಲ್ಲಿಯೇ ಉಳಿಸಿಕೊಂಡರೆ, ಉಳಿದಂತೆ ರಜತ್ ಪಾಟೀದಾರ್‌ಗೆ 11 ಕೋಟಿ ರೂ. ಹಾಗೂ ಯಶ್ ದಯಾಳ್‌ಗೆ 5 ಕೋಟಿ ರೂ. ಕೊಟ್ಟು ಉಳಿಸಿಕೊಳ್ಳಲಾಗಿದೆ. ಈ ಮೂಲಕ ಉಳಿದ ಎಲ್ಲ ಆಟಗಾರರನ್ನು ಆಕ್ಷನ್‌ಗೆ ಬಿಟ್ಟುಕೊಡಲಾಗಿದೆ. ಇನ್ನು ಈ ಬಾರಿ ವಿರಾಟ್ ಕೊಹ್ಲಿ ಪುನಃ ಆರ್‌ಸಿಬಿ ತಂಡಕ್ಕೆ ಕ್ಯಾಪ್ಟನ್ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಈ ಬಗ್ಗೆ ತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ರಾಹುಲ್ ಕೈಬಿಟ್ಟ ಲಕ್ನೋ: ಕಳೆದ ಬಾರಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕ್ಯಾಪ್ಟನ್ ಆಗಿದ್ದ ಕನ್ನಡಿಗ ಕೆ.ಎಲ್. ರಾಹುಲ್ ಅವರಿಗೂ ಹಾಗೂ ತಂಡದ ಮಾಲೀಕನಿಗೂ ಪಂದ್ಯದ ವೇಳೆಯೇ ದೊಡ್ಡ ಜಟಾಪಟಿ ನಡೆದಿತ್ತು. ಈ ವೇಳೆ ಪಂದ್ಯವನ್ನು ಸೋತಿದ್ದಕ್ಕೆ ತಂಡದ ಮಾಲೀಕರು ಕ್ಯಾಪ್ಟನ್ ರಾಹುಲ್‌ಗೆ ಬೈಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ನೆಟ್ಟಿಗರು ತಂಡವನ್ನು ಬಿಟ್ಟು ಬರುವಂತೆ ರಾಹುಲ್‌ಗೆ ಬೆಂಬಲ ನೀಡಿದ್ದರು. ಇದೀಗ 2025ನೇ ಸಾಲಿನ ಐಪಿಎಲ್‌ಗೆ ತಂಡಗಾರರ ಆಕ್ಷನ್‌ನಲ್ಲಿ ಲಕ್ನೋ ತಂಡವು ಕೆ.ಎಲ್. ರಾಹುಲ್‌ನನ್ನು ತಂಡದಿಂದ ಕೈ ಬಿಟ್ಟಿದೆ.

ಇದನ್ನೂ ಓದಿ: ಆರ್‌ಸಿಬಿ ತಂಡದ ನಾಯಕತ್ವಕ್ಕೆ ಹಿಂದಿರುಗಿದ ವಿರಾಟ್ ಕೊಹ್ಲಿ!

ಕನ್ನಡಿಗ ಕೆ.ಎಲ್. ರಾಹುಲ್‌ಗೆ ಆರ್‌ಸಿಬಿ ಗಾಳ: ಐಪಿಎಲ್ 2024 ತಂಡದಿಂದ ಕೇವಲ ಮೂವರು ಆಟಗಾರರನ್ನು 37 ಕೋಟಿ ರೂ.ಗೆ ಉಳಿಸಿಕೊಂಡ ನಂತರ, ಆರ್‌ಸಿಬಿ ಐಪಿಎಲ್ 2025 ಮೆಗಾ ಹರಾಜಿನಲ್ಲಿ ಉಳಿದ 83 ಕೋಟಿ ರೂ. ಮತ್ತು ಮೂರು ಆರ್‌ಟಿಎಂಗಳೊಂದಿಗೆ ಹರಾಜಿನಲ್ಲಿ ಭಾಗವಹಿಸಲಿದೆ. ಇನ್ನು ಕಳೆದ ಬಾರಿಯ ಐಪಿಎಲ್‌ನಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂದು ಆರ್‌ಸಿಬಿ ತಂಡದ ಮೇಲೆ ಹೆಚ್ಚು ಒತ್ತಡ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ರಾಹುಲ್ ಕೂಡ ಲಕ್ನೋ ತಂಡದಿಂದ ಹೊರ ಬಂದಿದ್ದು, ಆರ್‌ಸಿಬಿಯಿಂದ ರಾಹುಲ್‌ನನ್ನು ತಂಡಕ್ಕೆ ಸೇರಿಸಿಕೊಳ್ಳುವುದೇ ಎಂಬ ನಿರೀಕ್ಷೆಗಳು ಹೆಚ್ಚಾಗಿವೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ರಿಂಕು ಸಿಂಗ್ 13 ಕೋಟಿ ರೂ., ವರುಣ್‌ ಚಕ್ರವರ್ತಿಗೆ 12 ಕೋಟಿ ರೂ., ಸುನಿಲ್ ನಾರಾಯಣ್‌ಗೆ 12 ಕೋಟಿ ರೂ., ಆಂಡ್ರೆ ರಸೆಲ್ 12 ಕೋಟಿ ರೂ.,  ಹರ್ಷಿತ್ ರಾಣಾಗೆ 4 ಕೋಟಿ ರೂ. ಹಾಗೂ ರಮಣದೀಪ್ ಸಿಂಗ್ 4 ಕೋಟಿ ರೂ ಕೊಟ್ಟು ಆಟಗಾರರನ್ನು ಉಳಿಸಿಕೊಂಡಿದೆ.

ಮುಂಬೈ ಉಳಿಸಿಕೊಂಡ ಆಟಗಾರರು: ಬುಮ್ರಾಗೆ 18 ಕೋಟಿ ರೂ., ಸೂರ್ಯ ಕುಮಾರ್ ಯಾದವ್ 16.5 ಕೋಟಿ ರೂ. ಹಾರ್ದಿಕ್ ಪಾಂಡ್ಯಗೆ 16.5 ಕೋಟಿ ರೂ., ರೋಹಿತ್ ಶರ್ಮಾಗೆ 16.30 ಕೋಟಿ ರೂ. ಹಾಗೂ ತಿಲಕ್ ವರ್ಮಾಗೆ 8 ಕೋಟಿ ರೂ. ಕೊಟ್ಟು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.

ಹೈದರಾಬಾದ್ ಉಳಿಸಿಕೊಂಡ ಆಟಗಾರರು: ಸನ್ ರೈಸರ್ಸ್ ಹೈದರಾಬಾದ್ ತಂಡದಿಂದ ಕ್ಲಾಸೆನ್‌ಗೆ 23 ಕೋಟಿ ರೂ., ಪ್ಯಾಟ್ ಕಮ್ಮಿನ್ಸ್ 18 ಕೋಟಿ ರೂ., ಟ್ರಾವಿಯಸ್ ಹೆಡ್‌ಗೆ 14 ಕೋಟಿ ರೂ., ಅಭಿಷೇಕ್ ಶರ್ಮಾ 14 ಕೋಟಿ ರೂ. ಹಾಗೂ ನಿತೀಶ್ ಕುಮಾರ್ ರೆಡ್ಡಿಗೆ 6 ಕೋಟಿ ರೂ. ಕೊಟ್ಟು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.

Latest Videos
Follow Us:
Download App:
  • android
  • ios