Asianet Suvarna News Asianet Suvarna News

IPL Auction ದಾಖಲೆ ಖರೀದಿ ಮಾತ್ರವಲ್ಲ, ನಗುವಿನಲ್ಲೂ ಕ್ಲೀನ್ ಬೋಲ್ಡ್ ಮಾಡಿದ SRH ಒಡತಿ ಕಾವ್ಯ!

ಈ ಬಾರಿ ಐಪಿಎಲ್ ಹರಾಜಿನಲ್ಲಿ ಸನ್‌ರೈಸರ್ಸ್ ಒಡತಿ ಕಾವ್ಯಾ ಮಾರನ್ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಒಂದೆಡೆ ದಾಖಲೆ ಮೊತ್ತಕ್ಕೆ ಆಟಾಗಾರರನ್ನು ಖರೀದಿಸುತ್ತಿದ್ದರೆ, ಮತ್ತೊಂದೆಡೆ ತಮ್ಮ ನಗು, ರಿಯಾಕ್ಷನ್ ಮೂಲಕವೂ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ. ಇದೀಗ ಮಾರನ್ ಪ್ರತಿಕ್ರಿಯೆ ಭಾರಿ ವೈರಲ್ ಆಗಿದೆ.

IPL Auction 2024 SRH Owner Kavya Maran reaction goes viral during Players Bidding ckm
Author
First Published Dec 19, 2023, 3:24 PM IST

ದುಬೈ(ಡಿ.19) ಐಪಿಎಲ್ ಆಟಗಾರರ ಹರಾಜು ಕೆಲ ವಿಶೇಷ ಕ್ಷಣಗಳಿಗೆ ಸಾಕ್ಷಿಯಾಗಿದೆ. ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ಮೊತ್ತ ಬಿಡ್ಡಿಂಗ್ ಈ ಬಾರಿ ದಾಖಲಾಗಿದೆ. ಇದರ ಜೊತೆಗೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಒಡತಿ ಕಾವ್ಯಾ ಮಾರನ್ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಕೇಂದ್ರಬಿಂದುವಾಗಿದ್ದಾರೆ. ಕಾವ್ಯಾ ಮಾರನ್ ಪ್ರತಿ ಬಿಡ್ಡಿಂಗ್ ವೇಳೆ ನೀಡುತ್ತಿರುವ ಪ್ರತಿಕ್ರಿಯೆ ಭಾರಿ ವೈರಲ್ ಆಗಿದೆ. ಕೋಟಿ ಕೋಟಿ ರೂಪಾಯಿ ನೀಡಿ ಆಟಗಾರರನ್ನು ಖರೀದಿಸುವ ನಡುವೆ ನಗು ಮುಖದ ಪ್ರತಿಕ್ರಿಯೆ ಕೂಡ ಭಾರಿ ವೈರಲ್ ಆಗಿದೆ. 

ಶ್ರೀಲಂಕಾ ಕ್ರಿಕೆಟಿಗ ವಾನಿಂಡು ಹಸರಂಗಾ ಅವರನ್ನು 1.5 ಕೋಟಿ ರೂಪಾಯಿಗೆ ಸನ್‌ರೈಸರ್ಸ್ ಖರೀದಿಸಿದೆ. ವಾನಿಂಡು ಖರೀದಿಸಲು ಇತರರ ಫ್ರಾಂಚೈಸಿ ಮುಗಿ ಬೀಳುವ ನಿರೀಕ್ಷೆ ಇತ್ತು. ಆದರೆ 1.5 ಕೋಟಿ  ರೂಪಾಯಿ ತಲುಪುತ್ತಿದ್ದಂತೆ, ಇತರ ಫ್ರಾಂಚೈಸಿಗಳು ಹಿಂದೆ ಸರಿಯಿತು. ಹೀಗಾಗಿ 11.5 ಕೋಟಿ ರೂಪಾಯಿಗೆ ಕಾವ್ಯಾ ಮಾರನ್ ಬಿಡ್ಡಿಂಗ್ ಫೈನಲ್ ಆಗಿತ್ತು. ನಿರೀಕ್ಷೆಗಿಂತ ಕಡಿಮೆ ಮೊತ್ತಕ್ಕೆ ವಾನಿಂಡು ಹಸರಂಗಾ ಸನ್‌ರೈಸರ್ಸ್ ಹೈದರಾಬಾದ್ ತಂಡ ಸೇರಿಕೊಂಡಿದ್ದರು. ಇದು ಕಾವ್ಯಾ ಮಾರನ್ ಸಂಭ್ರಮ ಇಮ್ಮಡಿ ಮಾಡಿತ್ತು. ಈ ವೇಳೆ ನೀಡಿದ ನಗು ಇದೀಗ ವೈರಲ್ ಆಗಿದೆ.

Breaking: ಸನ್‌ರೈಸರ್ಸ್‌ಗೆ ವಿಶ್ವಕಪ್‌ ಫೈನಲ್‌ ಹೀರೋ, 20 ಕೋಟಿಗೆ ಮಾರಾಟವಾದ ಕಮ್ಮಿನ್ಸ್‌

ಈ ಬಾರಿಯ ಹರಾಜಿನಲ್ಲಿ ಕಾವ್ಯಾ ಮಾರನ್ ಸೇರಿದಂತೆ ಪಂಜಾಬ್ ಕಿಂಗ್ಸ್ ಸಹ ಮಾಲಕಿ ಪ್ರೀತಿ ಝಿಂಟಾ, ಮುಂಬೈ ಇಂಡಿಯನ್ಸ್ ಒಡತಿ ನೀತಾ ಅಂಬಾನಿ ಸೇರಿದಂತೆ ಹಲವು ಮಹಿಳೆಯರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಆದರೆ ಕಾವ್ಯಾ ಮಾರನ್ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ. ಕಾವ್ಯಾ ಮಾರನ್ ಈ ಹಿಂದೆ ಐಪಿಎಲ್ ಪಂದ್ಯದ ವೇಳ ಪ್ರೇಕ್ಷಕರ ಗ್ಯಾಲರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಬದಲ್ಲೂ ಕಾವ್ಯಾ ಮಾರನ್ ಪ್ರತಿಕ್ರಿಯೆಗಲು ವೈರಲ್ ಆಗಿದೆ.

ಕಾವ್ಯಾ ಮಾರನ್ ಪ್ರತಿಕ್ರಿಯೆ ಮಾತ್ರವಲ್ಲ, ಖರೀದಿಯಲ್ಲೂ ದಾಖಲೆ ಬರೆದಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ ಹರಾಜಿನ ಆರಂಭಿಕ ಹಂತದಲ್ಲಿ ಮೂವರು ಆಟಗಾರರನ್ನು ಖರೀದಿಸಿದೆ. ಈ ಪೈಕಿ ಪ್ಯಾಟ್ ಕಮಿನ್ಸ್‌ಗೆ ಬರೋಬ್ಬರಿ 20.50 ಕೋಟಿ ರೂಪಾಯಿ ನೀಡಿ ದಾಖಲೆ ಬರೆದಿದೆ. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬರೀ 16 ಕೋಟಿಯ ಆಸ್ತಿ ಹೊಂದಿರುವ ವಿಂಡೀಸ್‌ ಆಟಗಾರನಿಗೆ ಒಂದೇ ಬಾರಿ 8 ಕೋಟಿಯ ಜಾಕ್‌ಪಾಟ್‌!

ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಿಟ್ಟಹೋರಾಟ ನೀಡಿ ಆಸ್ಟ್ರೇಲಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಟ್ರಾವಿಸ್ ಹೆಡ್‌ಗೆ 6.8 ಕೋಟಿ ರೂಪಾಯಿ  ನೀಡಿ ಖರೀದಿಸಿದೆ. ಇನ್ನು ವಾನಿಂಡು ಹಸರಂಗ 1.5 ಕೋಟಿ ರೂಪಾಯಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಸೇರಿಕೊಂಡಿದ್ದಾರೆ.


 

Follow Us:
Download App:
  • android
  • ios