Breaking: ಸನ್‌ರೈಸರ್ಸ್‌ಗೆ ವಿಶ್ವಕಪ್‌ ಫೈನಲ್‌ ಹೀರೋ, 20 ಕೋಟಿಗೆ ಮಾರಾಟವಾದ ಕಮ್ಮಿನ್ಸ್‌

ಐಪಿಎಎಲ್‌ 2024 ಆಟಗಾರರ ಹರಾಜು ಪ್ರಕ್ರಿಯೆ ದುಬೈನಲ್ಲಿ ಆರಂಭವಾಗಿದೆ. ನಿರೀಕ್ಷೆಯಂತೆಯೇ 2024 ವಿಶ್ವಕಪ್‌ ಫೈನಲ್‌ ಹೀರೋ ಟ್ರಾವಿನ್‌ ಹೆಡ್‌ ದೊಡ್ಡ ಮೊತ್ತದ ಐಪಿಎಲ್‌ ಒಪ್ಪಂದ ಪಡೆದುಕೊಂಡಿದ್ದಾರೆ. ವಿಶ್ವಕಪ್‌ ವಿಜೇತ ಆಸೀಸ್‌ ತಂಡದ ನಾಯಕ ಪ್ಯಾಟ್ದ ಕಮ್ಮಿನ್ಸ್‌ ದಾಖಲೆಯ 20 ಕೋಟಿಗೆ ಮಾರಾಟವಾಗಿದ್ದಾರೆ.
 

IPL 2024 Auction Travis Head to Play Sunrisers Manish Pandey Unsold Pat Cummins Got 20 crore SRH san

ದುಬೈ (ಡಿ.19): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ಗಾಗಿ ಇಂದು ದುಬೈನಲ್ಲಿ ಆಟಗಾರರನ್ನು ಹರಾಜು ಮಾಡಲಾಗುತ್ತಿದೆ. ಈ ಮಿನಿ ಹರಾಜಿನಲ್ಲಿ 332 ಆಟಗಾರರ ಭವಿಷ್ಯವನ್ನು ನಿರ್ಧಾರವಾಗಲಿದೆ.  ಅದರಲ್ಲಿ 216 ಭಾರತೀಯರು ಮತ್ತು 116 ವಿದೇಶಿ ಆಟಗಾರರಿದ್ದಾರೆ. ಈ 332 ಆಟಗಾರರನ್ನು 19 ಸೆಟ್‌ಗಳಾಗಿ ವಿಂಗಡಿಸಲಾಗಿದೆ. ಪಟ್ಟಿಯಲ್ಲಿ 23 ಆಟಗಾರರಿದ್ದು, ಅವರ ಮೂಲ ಬೆಲೆ 2 ಕೋಟಿ ರೂ.ಪಾಯಿ ಆಗಿದೆ. ಇದರಲ್ಲಿ ಮೂರು ಭಾರತೀಯರಾದ ಹರ್ಷಲ್ ಪಟೇಲ್, ಶಾರ್ದೂಲ್ ಠಾಕೂರ್ ಮತ್ತು ಉಮೇಶ್ ಯಾದವ್ ಸ್ಥಾನ ಪಡೆದಿದ್ದಾರೆ. ವೆಸ್ಟ್‌ ಇಂಡೀಸ್‌ ಆಲ್ರೌಂಡರ್‌ ರೋವ್‌ಮನ್‌ ಪಾವೆಲ್‌ ಅವರ ಮೂಲಕ ಐಪಿಎಲ್‌ ಹರಾಜು ಪ್ರಕ್ರಿಯೆ ಆರಂಭವಾಯಿತು. 1 ಕೋಟಿ ಮೂಲ ಬೆಲೆ ಹೊಂದಿದ್ದ ರೋವ್‌ಮನ್‌ ಪಾವೆಲ್‌ ಅವರನ್ನು ಖರೀದಿಸಲು ರಾಜಸ್ಥಾನ ರಾಯಲ್ಸ್‌ ಹಾಗೂ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡಗಳು ಕಾದಾಟ ನಡೆಸಿದವು. ಆದರೆ, ರೋವ್‌ಮನ್‌ ಪಾವೆಲ್‌ಗೆ ದೊಡ್ಡಮಟ್ಟದ ಬಿಡ್‌ ಮಾಡಿದ ರಾಜಸ್ಥಾನ ರಾಯಲ್ಸ್‌ ತಂಡ ಬರೋಬ್ಬರಿ 7.40 ಕೋಟಿ ರೂಪಾಯಿಗೆ ವೆಸ್ಟ್‌ ಇಂಡೀಸ್‌ ಆಟಗಾರರನ್ನು ಖರೀದಿಸಿತು. ಇನ್ನು ಮೂಲಬೆಲೆ1 ಕೋಟಿ ರೂಪಾಯಿ ಹೊಂದಿದ್ದ ರಿಲ್ಲಿ ರೋಸೌರನ್ನು ಖರೀದಿ ಮಾಡಲು ಯಾವ ತಂಡಗಳೂ ಮುಂದೆ ಬರದ ಕಾರಣ ಅನ್‌ಸೋಲ್ಡ್‌ ಆದರು.

ಇತಿಹಾಸ ನಿರ್ಮಿಸಿದ ಕಮ್ಮಿನ್ಸ್‌:  ವಿಶ್ವಕಪ್‌ ವಿಜೇತ ಆಸೀಸ್‌ ತಂಡದ ನಾಯಕ ಪ್ಯಾಟ್‌ ಕಮ್ಮಿನ್ಸ್‌ ಐಪಿಎಲ್‌ ಇತಿಹಾಸ ನಿರ್ಮಿಸಿದ್ದಾರೆ. ಐಪಿಎಲ್‌ ಇತಿಹಾಸದಲ್ಲಿಯೇ ದಾಖಲೆಯ ಮೊತ್ತಕ್ಕೆ ಮಾರಾಟವಾದ ಆಟಗಾರ ಎನಿಸಿದ್ದಾರೆ. 2 ಕೋಟಿ ರೂಪಾಯಿ ಮೂಲ ಬೆಲೆ ಹೊಂದಿದ್ದ ಪ್ಯಾಟ್‌ ಕಮ್ಮಿನ್ಸ್‌ರನ್ನು ಖರೀದಿ ಮಾಡುವ ನಿಟ್ಟಿನಲ್ಲಿ ಆರ್‌ಸಿಬಿ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ದೊಡ್ಡ ರೇಸ್‌ನಲ್ಲಿದ್ದವು. ಎರಡೂ ತಂಡಗಳು ಕಮ್ಮಿನ್ಸ್‌ರನ್ನು ಖರೀದಿ ಮಾಡುವ ನಿಟ್ಟಿನಲ್ಲಿ ಬಿಡ್‌ಅನ್ನು 10 ಕೋಟಿಗೂ ಮೇಲೆ ಏರಿಸಿದ್ದವು. ಅದಾದ ಕೆಲವೇ ಹೊತ್ತಿನಲ್ಲಿ ಕಮ್ಮಿನ್ಸ್‌ ಅವರ ಬೆಲೆ 20 ಕೋಟಿಯ ಗಡಿ ಮುಟ್ಟಿದಾಗ ಐಪಿಎಲ್‌ ಇತಿಹಾಸದಲ್ಲಿಯೇ ಗರಿಷ್ಠ ಮೊತ್ತಕ್ಕೆ ಮಾರಾಟವಾಗುವ ಆಟಗಾರ ಎನಿಸಿದರು. ಕೊನೆಗೆ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ದಾಖಲೆಯ 20.50 ಕೋಟಿ ರೂಪಾಯಿಗೆ ಅವರನ್ನು ತಂಡಕ್ಕೆ ಖರೀದಿ ಮಾಡಿತು. 

ಟ್ರಾವಿಸ್‌ ಹೆಡ್‌ಗೆ ಜಾಕ್‌ಪಾಟ್‌: 2024ರ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಅದ್ಭುತ ಶತಕ ಬಾರಿಸಿ ಭಾರತದ ಇಡೀ ಕನಸುಗಳನ್ನು ನುಚ್ಚುಮೂರು ಮಾಡಿದ್ದ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ ಟ್ರಾವಿಸ್‌ ಹೆಡ್‌ ನಿರೀಕ್ಷೆಯಂತೆಯೇ ದೊಡ್ಡ ಮಟ್ಟದ ಜಾಕ್‌ಪಾಟ್‌ ಗಳಿಸಿದರು. 2 ಕೋಟಿ ರೂಪಾಯಿ ಮೂಲಬೆಲೆ ಹೊಂದಿದ್ದ ಟ್ರಾವಿಸ್‌ ಹೆಡ್‌ರನ್ನು ಖರೀದಿ ಮಾಡಲು ಮೊದಲಿಗೆ ಸನ್‌ರೈಸರ್ಸ್ ಹೈದರಾಬಾದ್‌ ತಂಡ ಮುಂದೆ ಬಂದಿತು. ಕೊನೆಗೆ ಚೆನ್ನೈ ಸೂಪರ್‌ ಕಿಂಗ್ಸ್‌ ಕೂಡ ಕಾಲಿಟ್ಟಿತು. ಟ್ರಾವಿಸ್‌ ಹೆಡ್‌ರನ್ನು ಕೊನೆಗೆ 6.80 ಕೋಟಿ ರೂಪಾಯಿಗೆ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಖರೀದಿ ಮಾಡಿತು.

ಮನೀಷ್‌ ಪಾಂಡೆ ಅನ್‌ಸೋಲ್ಟ್‌: ಐಪಿಎಲ್‌ನಲ್ಲಿ ಹಲವು ತಂಡಗಳ ಪರ ಆಡಿ, ನಾಯಕರೂ ಆಗಿದ್ದ ಕನ್ನಡಿಗ ಮನೀಷ್‌ ಪಾಂಡೆ ಮೊದಲ ಸುತ್ತಿನಲ್ಲಿ ಸನ್‌ಸೋಲ್ಡ್‌ ಆಗಿದ್ದಾರೆ. 50 ಲಕ್ಷ ಮೂಲ ಬೆಲೆ ಹೊಂದಿದ್ದ ಅವರನ್ನು ಖರೀದಿಸಲು ಯಾರೂ ಮುಂದೆ ಬರಲಿಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿದ ಕರುಣ್ ನಾಯರ್ ಮೊದಲ ಸುತ್ತಿನಲ್ಲಿ ಮಾರಾಟವಾಗದೆ ಉಳಿದರು. ನಾಯರ್ ಮೂಲ ಬೆಲೆ 50 ಲಕ್ಷ ರೂಪಾಯಿ ಆಗಿತ್ತು. ಮತ್ತೊಂದೆಡೆ, ಆಸ್ಟ್ರೇಲಿಯಾದ ಆಟಗಾರ ಸ್ಟೀವ್ ಸ್ಮಿತ್ ಕೂಡ ಮೊದಲ ಸುತ್ತಿನಲ್ಲಿ ಮಾರಾಟವಾಗದೆ ಉಳಿದಿದ್ದಾರೆ. ಸ್ಮಿತ್ ಮೂಲ ಬೆಲೆ 2 ಕೋಟಿ ರೂಪಾಯ ಆಗಿತ್ತು.

Latest Videos
Follow Us:
Download App:
  • android
  • ios