Asianet Suvarna News Asianet Suvarna News

IPL Auction ಕೋಲ್ಕತಾ ನೈಟ್ ರೈಡರ್ಸ್ ತೆಕ್ಕೆಗೆ ಜಾರಿದ ಶಕೀಬ್, ವೀಸಾ, ಕೆಕೆಆರ್ ಈಗ ಮತ್ತಷ್ಟು ಸ್ಟ್ರಾಂಗ್..!

* ಮಿನಿ ಹರಾಜಿನಲ್ಲಿ 8 ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾದ ಕೆಕೆಆರ್
* 90 ಲಕ್ಷ ರುಪಾಯಿಗೆ ಎನ್‌ ಜಗದೀಶನ್ ಕೆಕೆಆರ್ ತೆಕ್ಕೆಗೆ
* ಮೂಲ ಬೆಲೆಗೆ ಶಕೀಬ್ ಅಲ್ ಹಸನ್, ಡೇವಿಡ್ ವೀಸಾ ಕೋಲ್ಕತಾ ನೈಟ್‌ ರೈಡರ್ಸ್‌ ಸೇರ್ಪಡೆ

IPL Auction 2023 Kolkata Knight Riders pic Shakib Al Hasan to N Jagadeesan KKR Full Squad after Mini Auction kvn
Author
First Published Dec 24, 2022, 2:57 PM IST

ಕೊಚ್ಚಿ(ಡಿ.24): ಎರಡು ಬಾರಿಯ ಐಪಿಎಲ್ ಚಾಂಪಿಯನ್‌ ಕೋಲ್ಕತಾ ನೈಟ್ ರೈಡರ್ಸ್ ತಂಡವು ಈ ಬಾರಿಯ ಮಿನಿ ಹರಾಜಿನಲ್ಲಿ ಕಡಿಮೆ ಮೊತ್ತದಲ್ಲೇ ಆರು ಪ್ರಮುಖ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಕೆಕೆಆರ್ ತಂಡವು, ಇದೀಗ ಸಾಕಷ್ಟು ಅಳೆದು-ತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ.

ಕೋಲ್ಕತಾ ನೈಟ್ ರೈಡರ್ಸ್ ತಂಡವು ಮಿನಿ ಹರಾಜಿನಲ್ಲಿ ಅತಿ ಕಡಿಮೆ ಮೊತ್ತವನ್ನಿಟ್ಟುಕೊಂಡು ಆಟಗಾರರನ್ನು ಖರೀದಿಸಲು ಕಣಕ್ಕಿಳಿದಿತ್ತು. ಇದೀಗ ಮಿನಿ ಹರಾಜಿನಲ್ಲಿ ಬಾಂಗ್ಲಾದೇಶದ ಸ್ಟಾರ್ ಕ್ರಿಕೆಟಿಗ ಶಕೀಬ್ ಅಲ್ ಹಸನ್, ನಮೀಬಿಯಾದ ಡೇವಿಡ್ ವೀಸಾ ಅವರನ್ನು ಮೂಲ ಬೆಲೆಗೆ ಖರೀದಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ದೇಶಿ ಕ್ರಿಕೆಟ್‌ನಲ್ಲಿ ರನ್ ಮಳೆ ಹರಿಸಿರುವ ಎನ್ ಜಗದೀಶನ್ ಅವರನ್ನು 90 ಲಕ್ಷ ರುಪಾಯಿ ನೀಡಿ ಖರೀದಿಸುವಲ್ಲಿ ಕೆಕೆಆರ್ ತಂಡವು ಯಶಸ್ವಿಯಾಗಿದೆ.

ಮಿನಿ ಹರಾಜಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ಖರೀದಿಸಿದ ಆಟಗಾರರ ವಿವರ ಹೀಗಿದೆ:

* ಶಕೀಬ್ ಅಲ್ ಹಸನ್‌ - ಆಲ್ರೌಂಡರ್ - 1.50 ಕೋಟಿ ರುಪಾಯಿ
* ಡೇವಿಡ್ ವೀಸಾ - ಆಲ್ರೌಂಡರ್ - 1 ಕೋಟಿ ರುಪಾಯಿ
* ಎನ್ ಜಗದೀಶನ್ - ವಿಕೆಟ್ ಕೀಪರ್ - 90 ಲಕ್ಷ ರುಪಾಯಿ
* ವೈಭವ್ ಅರೋರ - ಬೌಲರ್ - 60 ಲಕ್ಷ ರುಪಾಯಿ
* ಮನ್ದೀಪ್ ಸಿಂಗ್ - ಬ್ಯಾಟರ್ - 50 ಲಕ್ಷ ರುಪಾಯಿ
*  ಲಿಟನ್ ದಾಸ್ - ವಿಕೆಟ್ ಕೀಪರ್ - 50 ಲಕ್ಷ ರುಪಾಯಿ
* ಕುಲ್ವಂತ್ ಖೆಜ್ರೋಲಿಯಾ - ಬೌಲರ್ - 20 ಲಕ್ಷ ರುಪಾಯಿ
* ಸುಯಾಶ್ ಶರ್ಮಾ - ಬೌಲರ್ - 20 ಲಕ್ಷ ರುಪಾಯಿ

IPL Retention: ಪ್ಯಾಟ್‌ ಕಮ್ಮಿನ್ಸ್‌, ಫಿಂಚ್‌, ರಹಾನೆ ಸೇರಿದಂತೆ 16 ಆಟಗಾರರ ರಿಲೀಸ್‌ ಮಾಡಿದ ಕೆಕೆಆರ್‌!

ಆಟಗಾರರ ರೀಟೈನ್ ಬಳಿಕ, ಮಿನಿ ಹರಾಜಿಗೂ ಮುನ್ನ ಕೋಲ್ಕತಾ ನೈಟ್ ರೈಡರ್ಸ್ ತಂಡವು ಹೀಗಿತ್ತು:

ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ರಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಸುನೀಲ್‌ ನಾರಾಯನ್‌,  ಶಾರ್ದೂಲ್ ಠಾಕೂರ್, ಲಾಕಿ ಫರ್ಗ್ಯುಸನ್‌, ಉಮೇಶ್ ಯಾದವ್, ಟಿಮ್ ಸೌಥಿ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಅನುಕುಲ್ ಸಿಂಗ್ ರಾಯ್, ರಿಂಕು

 

Follow Us:
Download App:
  • android
  • ios