Published : Feb 18 2021, 02:45 PM IST| Updated : Feb 18 2021, 10:41 PM IST
Share this Liveblog
FB
TW
Linkdin
Whatsapp
IPL Auction 2021 Live : ಹರಾಜು ಪ್ರಕ್ರಿಯೆ ಅಂತ್ಯ, ಯಾವ ಪ್ಲೇಯರ್ ಯಾವ ತಂಡ?
ಸಾರಾಂಶ
2021ರ IPLಗಾಗಿ ಚೆನ್ನೈನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ಕೊನೆಗೊಂಡಿದೆ. ಎಂಟು ಫ್ರಾಂಚೈಸಿಗಳು ಸಕ್ರಿಯವಾಗಿ ಭಾಗವಹಿಸಿ, ತೀವ್ರ ಪೈಪೋಟಿಯೊಡ್ಡಿ ಆಟಗಾರರನ್ನು ಖರೀದಿಸಿದ್ದಾರೆ. ಇನ್ನು ಹರಾಜು ಪ್ರಕ್ರಿಯೆಯಲ್ಲಿ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಮೊತ್ತಕ್ಕೆ ಹರಾಜಾಗುವ ಮೂಲಕ ಕ್ರಿಸ್ ಮೊರಿಸ್ ಹೊಸ ದಾಖಲೆ ಬರೆದಿದ್ದಾರೆ. ಇವರು ಬರೋಬ್ಬರಿ 16.25 ಕೋಟಿ ರೂಪಾಯಿ ರಾಜಸ್ಥಾನ್ ರಾಯಲ್ಸ್ ಖರೀದಿಸಿದೆ. ದುಬಾರಿ ಮೊತ್ತಕ್ಕೆ ಸೇಲಾದವರಲ್ಲಿ ಜೇಯ್ ರಿಚ್ಚರ್ಡ್‌ಸನ್ ಎರಡನೇ ಸ್ಥಾನದಲ್ಲಿದ್ದಾರೆ. ಕನ್ನಡಿಗ ಗೌತಮ್ ಕೂಡಾ 9.25 ಕೋಟಿ ಮೊತ್ತಕ್ಕೆ ಸಿಎಸ್‌ಕೆ ಪಡೆ ಸೇರ್ಪಡೆಗೊಂಡಿದ್ದಾರೆ. ಇನ್ನು ಹರ್ಭಜನ್ ಸಿಂಗ್ ಮೊದಲ ಸುತ್ತಿನಲ್ಲಿ ಅನ್‌ಸೋಲ್ಡ್ ಆಗಿದ್ದರೂ, ಎರಡನೇ ಸುತ್ತಿನಲ್ಲಿ 2 ಕೋಟಿ ಮೊತ್ತಕ್ಕೆ ಕೆಕೆಆರ್ ಸೇರ್ಪಡೆಗೊಂಡಿದ್ದಾರೆ. ಇಷ್ಟೇ ಅಲ್ಲದೇ ನಿಮ್ಮಿಷ್ಟದ ಆಟಗಾರ ಯಾವ ತಂಡ ಸೇರಿದ್ದಾರೆ? ಎಲ್ಲಾ ವಿವರ ಇಲ್ಲಿದೆ ನೋಡಿ.
08:40 PM (IST) Feb 18
ಪಂಜಾಬ್ ಕಿಂಗ್ಸ್ ತಂಡಕ್ಕೆ ಶಾರುಖ್ ಖಾನ್ ಸೇರ್ಪಡೆ; ಕುಣಿದು ಕುಪ್ಪಳಿಸಿದ ಪ್ರೀತಿ ಜಿಂಟಾ!
ಶಾರುಖ್ ಖಾನ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಸೇರಿಕೊಂಡಿದ್ದಾರೆ. ಗೊಂದಲಕ್ಕೀಡಾಗಬೇಡಿ. ಇದು ಕೆಕೆಆರ್ ಮಾಲೀಕ, ಬಾಲಿವುಡ್ ನಟ ಶಾರುಖ್ ಖಾನ್ ಅಲ್ಲ. ಇದು ಯುವ ಕ್ರಿಕೆಟಿಗ ಶಾರುಖ್ ಖಾನ್. ಈ ಕ್ರಿಕೆಟಿಗರ ಖರೀದಿಗೆ ಪಂಜಾಬ್ ಕಿಂಗ್ಸ್ ಜಿದ್ದಿಗೆ ಬಿದ್ದಿತ್ತು.
14ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ನಿರೀಕ್ಷೆಯಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾಗಿದ್ದಾರೆ. ಚೆನ್ನೈನಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ಬೆಂಗಳೂರು ಮೂಲದ ಫ್ರಾಂಚೈಸಿ ಬರೋಬ್ಬರಿ 14.25 ಕೋಟಿ ರುಪಾಯಿ ನೀಡಿ ಮ್ಯಾಕ್ಸ್‌ವೆಲ್‌ರನ್ನು ಖರೀದಿಸಿದೆ
IPL Auction: ಅನ್‌ಸೋಲ್ಡ್ ಆಗಿದ್ದ ಹರ್ಭಜನ್, ಕರುಣ್ ನಾಯರ್ ಸೇಲ್!
ಐಪಿಎಲ್ ಹರಾಜಿನಲ್ಲಿನ 8 ಫ್ರಾಂಚೈಸಿಗಳು ಪ್ರಮುಖ ಆಟಗಾರರನ್ನು ಖರೀದಿಸಿದೆ. ಆರಂಭದಲ್ಲೇ ಸೇಲಾಗದೆ ಉಳಿದಿದ್ದ ಆಟಗಾರರು ಇದೀಗ ಬಿಕರಿಯಾಗಿದ್ದಾರೆ. ಕರ್ನಾಟಕ ಕ್ರಿಕೆಟಿಗ ಕರುಣ್ ನಾಯರ್ ಆರಂಭದಲ್ಲಿ ಅನ್‌ಸೋಲ್ಡ್ ಆಗಿದ್ದರು. ಆದರೆ ಅಂತಿಮ ಹಂತದಲ್ಲಿ ಕೆಕೆಆರ್ ತಂಡ ಕರುಣ್ ನಾಯರ್ ಅವರನ್ನು ಖರೀದಿಸಿದೆ.