ಚೆನ್ನೈ(ಫೆ.18): IPL Auctionನಲ್ಲಿ ಈ ಬಾರಿ ಮೊದಲ ಖರೀದಿ ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್ ಸ್ಮಿತ್. 2 ಕೋಟಿ ಮೂಲ ಬೆಲೆಯ ಸ್ಟೀವ್ ಸ್ಮಿತ್ ಖರೀದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಸಕ್ತಿ ತೋರಿತ್ತು. 2 ಕೋಟಿಗೆ ಬಿಡ್ ಮಾಡಿತ್ತು. ಇನ್ನೇನು ಆರ್‌ಸಿಬಿ ತಂಡ ಖರೀದಿಸಬೇಕು ಅನ್ನೋವಷ್ಟರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬಿಡ್ ಆರಂಭಿಸಿತು.

IPL Auction; ಆರಂಭದಲ್ಲೇ ಕರುಣ್ ನಾಯರ್, ಫಿಂಚ್ ಸೇರಿ ಸ್ಟಾರ್ ಕ್ರಿಕೆಟಿಗರು ಆನ್‌ಸೋಲ್ಡ್!

2.20 ಕೋಟಿ ರೂಪಾಯಿ ಬಿಡ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಸ್ಟೀವ್ ಸ್ಮಿತ್ ಖರೀದಿಸುವಲ್ಲಿ ಯಶಸ್ವಿಯಾಯಿತು. ರಾಜಸ್ಥಾನ ರಾಯಲ್ಸ್, ಪುಣೆ ವಾರಿಯರ್ಸ್ ಸೇರಿದಂತೆ ಐಪಿಎಲ್ ಟೂರ್ನಿಯಲ್ಲಿ ಸಕ್ರಿಯವಾಗಿರುವ ಸ್ಟೀವ್ ಸ್ಮಿತ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಸೇರಿಕೊಂಡಿದ್ದಾರೆ. ಡೆಲ್ಲಿ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್, ಸ್ಮಿತ್ ಖರೀದಿಗೆ ಆಸಕ್ತಿ ತೋರಿದ್ದರು.