ಚೆನ್ನೈ(ಫೆ.18):  ಐಪಿಎಲ್ ಹರಾಜಿನಲ್ಲಿನ 8 ಫ್ರಾಂಚೈಸಿಗಳು ಪ್ರಮುಖ ಆಟಗಾರರನ್ನು ಖರೀದಿಸಿದೆ. ಆರಂಭದಲ್ಲೇ ಸೇಲಾಗದೆ ಉಳಿದಿದ್ದ ಆಟಗಾರರು ಇದೀಗ ಬಿಕರಿಯಾಗಿದ್ದಾರೆ. ಕರ್ನಾಟಕ ಕ್ರಿಕೆಟಿಗ ಕರುಣ್ ನಾಯರ್ ಆರಂಭದಲ್ಲಿ ಅನ್‌ಸೋಲ್ಡ್ ಆಗಿದ್ದರು. ಆದರೆ ಅಂತಿಮ ಹಂತದಲ್ಲಿ ಕೆಕೆಆರ್ ತಂಡ ಕರುಣ್ ನಾಯರ್ ಅವರನ್ನು ಖರೀದಿಸಿದೆ.

ಪಂಜಾಬ್ ಕಿಂಗ್ಸ್ ತಂಡಕ್ಕೆ ಶಾರುಖ್ ಖಾನ್ ಸೇರ್ಪಡೆ; ಕುಣಿದು ಕುಪ್ಪಳಿಸಿದ ಪ್ರೀತಿ ಜಿಂಟಾ

ಕೆಕೆಆರ್ 50 ಲಕ್ಷ ರೂಪಾಯಿ ನೀಡಿ ಕರುಣ್ ನಾಯರ್ ಅವರನ್ನು ಖರೀದಿಸಿದೆ. ಇನ್ನು ಆರಂಭದಲ್ಲಿ ಹರ್ಭಜನ್ ಸಿಂಗ್ ಖರೀದಿಸಲು ಆಸಕ್ತಿ ತೋರದ ಫ್ರಾಂಚೈಸಿ ಅಂತಿಮ ಹಂತದಲ್ಲಿ ಮೂಲ 2 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಹರ್ಭಜನ್ ಸಿಂಗ್ ಕೂಡ ಕೆಕೆಆರ್ ತಂಡದ ಪಾಲಾಗಿದ್ದಾರೆ.

ಅನ್‌ಸೋಲ್ಡ್ ಆಗಿದ್ದ ಕೇದಾರ್ ಜಾದವ್ ಅವರಿಗೆ 2 ಕೋಟಿ ರೂಪಾಯಿ ನೀಡಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಖರೀದಿ ಮಾಡಿದೆ.