ಚೆನ್ನೈ(ಫೆ.18): ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಕ್ರಿಸ್ ಮೊರಿಸ್ ಹೊಸ ದಾಖಲೆ ಬರೆದಿದ್ದಾರೆ.  ಇದುವರೆಗಿನ ಬಿಡ್ಡಿಂಗ್‌ನಲ್ಲಿ ಕ್ರಿಸ್ ಮೊರಿಸ್ ಗರಿಷ್ಠ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಈ ಮೂಲಕ ಯುವರಾಜ್ ಸಿಂಗ್ ದಾಖಲೆ ಮುರಿದಿದ್ದಾರೆ. ಮೊರಿಸ್ ಬರೋಬ್ಬರಿ 16.25 ಕೋಟಿ ರೂಪಾಯಿಗೆ ಬಿಕರಿಯಾಗಿದ್ದಾರೆ. ರಾಜಸ್ಥಾನ ರಾಯಲ್ಸ್ ದಾಖಲೆ ಮೊತ್ತ ನೀಡಿ ಕ್ರಿಸ್ ಮೊರಿಸ್ ಖರೀದಿಸಿದೆ. ಇದು ಐಪಿಎಲ್ ಹರಾಜು ಇತಿಹಾಸದಲ್ಲೇ ದಾಖಲೆಯಾಗಿದೆ. ಈ ಮೂಲಕ  ಗ್ಲೆನ್ ಮ್ಯಾಕ್ಸ್‌ವೆಲ್ ದಾಖಲೆ ಹಿಂದಿಕ್ಕಿದ್ದಾರೆ.

ಐಪಿಎಲ್ ಹರಾಜಿನಲ್ಲಿ ಯುವರಾಜ್ ಸಿಂಗ್ 16 ಕೋಟಿ ರೂಪಾಯಿಗೆ ಸೇಲ್ ಆಗಿದ್ದರು. ಅತ್ಯಂತ ಗರಿಷ್ಠ ಮೊತ್ತಕ್ಕೇ ಸೇಲಾದ ಆಟಗಾರ ಅನ್ನೋ ಹೆಗ್ಗಳಿಕೆಗೆ .ಯುವಿ ಪಾತ್ರರಾಗಿದ್ದರು. ಇದೀಗ 16.25 ಕೋಟಿ ರೂಪಾಯಿಗೆ ಸೇಲ್ ಆಗೋ ಮೂಲಕ ಕ್ರಿಸ್ ಮೊರಿಸ್ ಹೊಸ ದಾಖಲೆ ಬರೆದಿದ್ದಾರೆ. 

IPL Auction 2021 Live Updates: ಮ್ಯಾಕ್ಸ್‌ವೆಲ್ ಖರೀದಿಗೆ ಬಿಗ್ ಫೈಟ್!

ಕ್ರಿಸ್ ಮೊರಿಸ್‌ಗಾಗಿ ಮುಂಬೈ ಇಂಡಿಯನ್ಸ್, ರಾಜಸ್ಥಾನ ರಾಯಲ್ಸ್ ಹಾಗೂ  ಪಂಜಾಬ್‌ ಕಿಂಗ್ಸ್ ತೀವ್ರ ಪೈಪೋಟಿ ನಡೆಸಿತು. ಬಳಿಕ ರಾಜಸ್ಥಾನ ಹಾಗೂ ಪಂಜಾಬ್ ಜಿದ್ದಿಗೆ ಬಿದ್ದು ಬಿಡ್ ಕೂಗಿತು. 10 ಕೋಟಿ ರುಪಾಯಿವರೆಗೂ ಬಿಡ್‌ ಮಾಡಿ ಆ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಿಂದೆ ಸರಿದಿತ್ತು. ಕಳೆದ ಆವೃತ್ತಿಯಲ್ಲಿ ಕ್ರಿಸ್ ಮೊರಿಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರತಿನಿಧಿಸಿದ್ದರು. 

IPL Auction: ದಾಖಲೆ ಮೊತ್ತ ನೀಡಿದ ಮ್ಯಾಕ್ಸ್‌ವೆಲ್ ಖರೀದಿಸಿದ RCB!

ಜಿದ್ದಿನ ಬಿಡ್ಡಿಂಗ್‌ನಲ್ಲಿ ಕ್ರಿಸ್ ಮೊರಿಸ್, ಆರ್‌ಸಿಬಿ ಖರೀದಿಸಿದ 14.25 ಕೋಟಿ ನೀಡಿ ಖರೀದಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ ದಾಖಲೆ ಅಳಿಸಿ ಹಾಕಿದರು.  ಇನ್ನು ಭಾರತೀಯ ಕ್ರಿಕೆಟಿಗ ಶಿವ ದುಬೆಗೆ 4.4 ಕೋಟಿ ರೂಪಾಯಿಗೆ ರಾಜಸ್ಥಾನ ರಾಯಲ್ ಪಾಲಾಗಿದ್ದಾರೆ.