ಚೆನ್ನೈ(ಫೆ.18): ಈ ಬಾರಿಯ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಖರೀದಿಯಲ್ಲೇ ಎಲ್ಲರ  ಹುಬ್ಬೇರಿಸಿದೆ. ಆಸ್ಟ್ರೇಲಿಯಾ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಬರೋಬ್ಬರಿ 14.25 ಕೋಟಿ ರೂಪಾಯಿ ನೀಡಿ ಖರೀದಿಸಿದೆ.

2021 IPL ಹರಾಜಿನ ಮೊದಲ ಖರೀದಿ ಸ್ಟೀವ್ ಸ್ಮಿತ್; ಯಾವ ತಂಡದ ಪಾಲು?

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವೆ ಜಿದ್ದಾ ಜಿದ್ದಿನ ಬಿಡ್ಡಿಂಗ್ ನಡೆದಿತ್ತು. 14 ಕೋಟಿ ವರೆಗೂ ಚೆನ್ನೈ ಸೂಪರ್ ಕಿಂಗ್ಸ್ ಬಿಡ್ಡಿ ಮಾಡಿತ್ತು. ಆದರೆ 14.25 ಕೋಟಿ ರೂಪಾಯಿ ನೀಡೋ ಮೂಲಕ ಮ್ಯಾಕ್ಸ್‍‌ವೆಲ್‌‍ಗೆ ಬೆಂಗಳೂರು ಫ್ಲೈಟ್ ಟಿಕೆಟ್ ಸಿಕ್ಕಿದೆ.

ಕಳೆದ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 10.75 ಕೋಟಿ ರೂಪಾಯಿ ನೀಡಿ ಮ್ಯಾಕ್ಸ್‌ವೆಲ್ ಖರೀದಿಸಿತ್ತು. ಆದರೆ ಕಳಪೆ ಪ್ರದರ್ಶನ ನೀಡಿದ್ದರು.