ಐಪಿಎಲ್ ಹರಾಜು 2021: ಯಾವ ಫ್ರಾಂಚೈಸಿ ಎಷ್ಟು ಆಟಗಾರರನ್ನು ಖರೀದಿಸಬಹುದು..?
ಬೆಂಗಳೂರು: 14ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿಗೆ ದಿನಗಣನೆ ಆರಂಭವಾಗಿದ್ದು, ಫೆಬ್ರವರಿ 18ರಂದು ಚೆನ್ನೈ ಆಟಗಾರರ ಹರಾಜು ನಡೆಯಲಿದೆ. ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸೇರಿದಂತೆ ಎಲ್ಲಾ 8 ಫ್ರಾಂಚೈಸಿಗಳು ಸಾಕಷ್ಟು ಅಳೆದು ತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸುವ ಲೆಕ್ಕಾಚಾರ ಹಾಕಿಕೊಂಡಿವೆ.
ಈ ಸಂದರ್ಭದಲ್ಲಿ ಯಾವ ಫ್ರಾಂಚೈಸಿಯ ಬಳಿ ಆಟಗಾರರನ್ನು ಖರೀದಿಸಲು ಎಷ್ಟು ಹಣವಿದೆ? ಗರಿಷ್ಠ ಎಷ್ಟು ಆಟಗಾರರನ್ನು ಖರೀದಿಸಬಹುದು? ಅದರಲ್ಲಿ ಎಷ್ಟು ವಿದೇಶಿ ಆಟಗಾರರನ್ನು ಖರೀದಿಸಬಹುದು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಏಷ್ಯಾನೆಟ್ ಸುವರ್ಣನ್ಯೂಸ್.ಕಾಂ ವಿವರಿಸುತ್ತಿದೆ ನೋಡಿ
1.ಕಿಂಗ್ಸ್ ಇಲೆವನ್ ಪಂಜಾಬ್
ಪಂಬಾಬ್ ಫ್ರಾಂಚೈಸಿ ಪರ್ಸ್‌ನಲ್ಲಿ 53.20 ಕೋಟಿ ರುಪಾಯಿ ಹಣ ಬಾಕಿಯಿದ್ದು ಈ ಪೈಕಿ 5 ವಿದೇಶಿ ಆಟಗಾರರು ಸೇರಿದಂತೆ ಗರಿಷ್ಠ 9 ಆಟಗಾರರನ್ನು ಖರೀದಿಸಬಹುದಾಗಿದೆ
2. ರಾಯಲ್ ಚಾಲೆಂಜರ್ಸ್ ಬೆಂಗಳೂರು
ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ಬೆಂಗಳೂರು ಮೂಲದ ಫ್ರಾಂಚೈಸಿ ಬಳಿ 35.90 ಕೋಟಿ ರುಪಾಯಿ ಹಣವಿದ್ದು ಈ ಪೈಕಿ 4 ವಿದೇಶಿ ಆಟಗಾರರು ಸೇರಿದಂತೆ ಗರಿಷ್ಠ 13 ಆಟಗಾರರನ್ನು ಖರೀದಿಸಬಹುದಾಗಿದೆ.
3. ರಾಜಸ್ಥಾನ ರಾಯಲ್ಸ್
ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ಖಾತೆಯಲ್ಲಿ 34.85 ಕೋಟಿ ರುಪಾಯಿ ಹಣವಿದ್ದು, 3 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 8 ಆಟಗಾರರನ್ನು ಖರೀದಿಸಬಹುದಾಗಿದೆ.
4. ಚೆನ್ನೈ ಸೂಪರ್ ಕಿಂಗ್ಸ್
ಚೆನ್ನೈ ಮೂಲದ ಫ್ರಾಂಚೈಸಿ ಬಳಿ 22.90 ಕೋಟಿ ರುಪಾಯಿ ಹಣವಿದ್ದು, ಈ ಪೈಕಿ ಗರಿಷ್ಠ ಒಂದು ವಿದೇಶಿ ಆಟಗಾರ ಸೇರಿದಂತೆ ಒಟ್ಟು 7 ಆಟಗಾರರನ್ನು ಖರೀದಿಸಬಹುದಾಗಿದೆ.
5. ಮುಂಬೈ ಇಂಡಿಯನ್ಸ್
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಖಾತೆಯಲ್ಲಿ 15.35 ಕೋಟಿ ರುಪಾಯಿ ಹಣವಿದ್ದು, 4 ವಿದೇಶಿ ಕ್ರಿಕೆಟಿಗರು ಸೇರಿದಂತೆ ಒಟ್ಟು 7 ಆಟಗಾರರನ್ನು ಖರೀದಿಸಬಹುದಾಗಿದೆ.
6. ಡೆಲ್ಲಿ ಕ್ಯಾಪಿಟಲ್ಸ್
13ನೇ ಐಪಿಎಲ್ ಆವೃತ್ತಿಯ ರನ್ನರ್ ಅಪ್ ಡೆಲ್ಲಿ ಫ್ರಾಂಚೈಸಿ ಬಳಿ 12.90 ಕೋಟಿ ರುಪಾಯಿ ಹಣವಿದ್ದು, ಎರಡು ವಿದೇಶಿ ಆಟಗಾರರು ಸೇರಿದಂತೆ ಗರಿಷ್ಠ ಒಟ್ಟು 6 ಆಟಗಾರರನ್ನು ಖರೀದಿಸಬಹುದಾಗಿದೆ.
7. ಕೋಲ್ಕತ ನೈಟ್ ರೈಡರ್ಸ್
ಶಾರುಕ್ ಖಾನ್ ಒಡೆತನದ ಕೆಕೆಆರ್ ಫ್ರಾಂಚೈಸಿ ಬಳಿ 10.75 ಕೋಟಿ ರುಪಾಯಿ ಹಣವಿದ್ದು, 2 ವಿದೇಶಿ ಆಟಗಾರರು ಸೇರಿದಂತೆ ಒಟ್ಟು ಗರಿಷ್ಠ 8 ಆಟಗಾರರನ್ನು ಖರೀದಿಸಬಹುದಾಗಿದೆ.
8. ಸನ್‌ರೈಸರ್ಸ್ ಹೈದರಾಬಾದ್
ಹೈದ್ರಾಬಾದ್ ಮೂಲದ ಫ್ರಾಂಚೈಸಿ ಖಾತೆಯಲ್ಲಿ 10.75 ಕೋಟಿ ರುಪಾಯಿ ಹಣವಿದ್ದು, ಓರ್ವ ವಿದೇಶಿ ಆಟಗಾರ ಸೇರಿದಂತೆ ಗರಿಷ್ಠ ಮೂವರು ಆಟಗಾರರನ್ನು ಖರೀದಿಸಬಹುದಾಗಿದೆ.