ಐಪಿಎಲ್ 2027 ಹರಾಜು ಪ್ರಕ್ರಿಯೆ ತಯಾರಿ ಆರಂಭಗೊಂಡಿದೆ. ಇದೀಗ 10 ತಂಡಗಳು ರಿಲೀಸ್ ಮಾಡಲಿರುವ ಆಟಗಾರರ ಲಿಸ್ಟ್ ಬಹುತೇಕ ಅಂತಿಮಗೊಂಡಿದೆ. ಈ ಪಟ್ಟಿಯಲ್ಲಿ ಹತ್ತು ಅಚ್ಚರಿ ಹೆಸರುಗಳಿವೆ.
ನವದೆಹಲಿ (ಅ.11) ಐಪಿಎಲ್ ಟೂರ್ನಿ ತಯಾರಿಯಲ್ಲಿರುವ ಫ್ರಾಂಚೈಸಿಗಳು ಇದೀಗ ಆಟಗಾರರ ರಿಲೀಸ್, ರಿಟೇನ್ ಹಾಗೂ ಹರಾಜಿಗೆ ಸಜ್ಜಾಗುತ್ತಿದೆ. ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಐಪಿಎಲ್ 2027 ಹರಾಜು ನಡೆಯಲಿದೆ. ಕೆಲವೇ ದಿನಗಳಲ್ಲಿ ಆಟಗಾರರ ರಿಲೀಸ್ ಹಾಗೂ ರಿಟೇನ್ ಪಟ್ಟಿ ಘೋಷಣೆ ಮಾಡಲಿದೆ. ಈ ಬಾರಿಯ ರಿಲೀಸ್ ಪಟ್ಟೆಯಲ್ಲಿ ಕೆಲ ಅಚ್ಚರಿ ಹೆಸರುಗಳಿವೆ. ಅದರಲ್ಲೂ 10 ಸ್ಟಾರ್ ಬ್ಯಾಟರ್ ಈ ಬಾರಿ ಹರಾಜಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಂಭಾವ್ಯ ರಿಲೀಸ್ ಪಟ್ಟಿಯಲ್ಲಿರುವ 10 ಆಟಗಾರರ ಹೆಸರು ಅಭಿಮಾನಿಗಳಿಗೆ ಅಚ್ಚರಿ ಮೂಡಿಸುವುದು ಖಚಿತ.
ಐಪಿಎಲ್ 2027 ಟೂರ್ನಿ ಹರಾಜಿಗೂ ಮೊದಲು 10 ಫ್ರಾಂಚೈಸಿಗಳು ತಂಡದಿಂದ ಬಿಡುಗಡೆ ಮಾಡಲಿರುವ ಆಟದಾರರ ಪೈಕಿ 10 ಸ್ಟಾರ್ ಬ್ಯಾಟರ್ ಇದ್ದಾರೆ ಎಂದು ವರದಿಯಾಗಿದೆ. ಈ ಬಾರಿ ರಿಲೀಸ್ ಪಟ್ಟಿಯಲ್ಲಿರುವ ಸಂಭಾವ್ಯ 10 ಬ್ಯಾಟರ್ ಲಿಸ್ಟ್ ಇಲ್ಲಿದೆ.
10 ಫ್ರಾಂಚೈಸಿಗಳ ರಿಲೀಸ್ ಪಟ್ಟಿಯಲ್ಲಿರುವ ಸಂಭಾವ್ಯ ಬ್ಯಾಟರ್
- ಸೂರ್ಯಕುಮಾರ್ ಯಾದವ್
- ರಾಹುಲ್ ಟಿವಾಟಿಯಾ
- ಪೃಥ್ವಿ ಶಾ
- ಜೆಕಬ್ ಬೆಥಲ್
- ಸರ್ಫರಾಜ್ ಖಾನ್
- ಆ್ಯಡಿನ್ ಮರ್ಕ್ರಮ್
- ಅಜಿಂಕ್ಯ ರಹಾನೆ
- ಶಿಮ್ರೊನ್ ಹೆಟ್ಮೆಯರ್
- ಶೆರ್ಫಾನೆ ರುದರ್‌ಫೋರ್ಡ್
- ಅಬ್ದುಲ್ ಸಮಾದ್
ಆರ್‌ಸಿಬಿ ಸ್ಟಾರ್ ಬ್ಯಾಟರ್ ಔಟ್ ಸಾಧ್ಯತೆ
ಫ್ರಾಂಚೈಸಿಗಳ ಸಂಭಾವ್ಯ ಆಟಗಾರರ ರಿಲೀಸ್ ಪಟ್ಟಿಯಲ್ಲಿ ಕಾಣಿಸಿಕೊಂಡ ಸ್ಟಾರ್ ಬ್ಯಾಟರ್ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೇಕಬ್ ಬೆಥಲ್ ಕೂಡ ಸೇರಿದ್ದಾರೆ. 2026ರ ಐಪಿಎಲ್ ಟೂರ್ನಿಯಲ್ಲಿ ಜೇಕಬ್ ಬೆಥಲ್ ತಂಡದಲ್ಲಿದ್ದರು. ಆರಂಭದಲ್ಲಿ ಬೆಂಚ್ ಕಾದಿದ್ದ ಬೆಥಲ್ ಬಳಿಕ ಅವಕಾಶ ಪಡೆದುಕೊಂಡಿದ್ದರು. ಆದರೆ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು. ಈ ಬಾರಿಯ ಐಪಿಎಲ್ ಟೂರ್ನಿಗೂ ಮೊದಲು ಜೇಕಬ್ ಬೆಥಲ್ ರಿಲೀಸ್ ಮಾಡಲು ಆರ್‌ಸಿಬಿ ಮುಂದಾಗಲಿದೆ. ಜೇಕಬ್ ಬೆಥಲ್ 2027ರ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
2026ರ ಟಿ20 ವಿಶ್ವಕಪ್ ವರಗೆ ಸೂರ್ಯಕುಮಾರ್ ಯಾದವ್ ಕಿಂಗ್ ಆಗಿದ್ದರು. ಟೀಂ ಇಂಡಿಯಾ ಟಿ20 ನಾಯಕ, ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಸೇರಿದಂತೆ ಹಲವು ಕೀರ್ತಿಗಳು ಸೇರಿತ್ತು. ಆದರೆ 2026 ಐಪಿಎಲ್ ಟೂರ್ನಿಯಿಂದ ಸೂರ್ಯಕುಮಾರ್ ಯಾದವ್ ಬ್ಯಾಡ್ ಟೈಮ್ ಆರಂಭಗೊಂಡಿತ್ತು. 2026ರ ಐಪಿಎಲ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ಕಳಪೆ ಪ್ರದರ್ಶನ ನೀಡಿದ್ದರು. ಇದರ ಬೆನ್ನಲ್ಲೇ ಟೀಂ ಇಂಡಿಯಾ ಟಿ20 ತಂಡದ ನಾಯಕತ್ವ ಮಾತ್ರವಲ್ಲ ತಂಡದಿಂದಲೂ ಹೊರಬಿದ್ದರು. ಇದೀಗ ಮುಂಬೈ ಇಂಡಿಯನ್ಸ್ ತಂಡದಿಂದಲೂ ಸೂರ್ಯಕುಮಾರ್ ಯಾದವ್ ರಿಲೀಸ್ ಮಾಡುವ ಸಾಧ್ಯತೆ ಇದೆ.


