ಐಪಿಎಲ್‌ನ 2ನೇ ಹಂತದ ವೇಳಾಪಟ್ಟಿ ಪ್ರಕಟಗೊಂಡಿದ್ದು, ಏಪ್ರಿಲ್ 13 ರಿಂದ ಮೇ 24ರ ವರೆಗೆ ಲೀಗ್ ಹಂತದ ಪಂದ್ಯಗಳು ನಡೆಯಲಿವೆ. ಈ ಲೇಖನದಲ್ಲಿ ಆರ್‌ಸಿಬಿ ತಂಡದ ಸಂಪೂರ್ಣ ವೇಳಾಪಟ್ಟಿ ಸೇರಿದಂತೆ, ಉದ್ಘಾಟನಾ ಸಮಾರಂಭ ರದ್ದತಿ ಮತ್ತು ಪ್ರಮುಖ ಆಟಗಾರರ ಲಭ್ಯತೆಯ ಬಗ್ಗೆ ಮಾಹಿತಿ ನೀಡಲಾಗಿದೆ.

ನವದೆಹಲಿ: ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆ ಘೋಷಣೆ ಬೆನ್ನಲ್ಲೇ ಐಪಿಎಲ್‌ನ 2ನೇ ಹಂತದ ವೇಳಾಪಟ್ಟಿ ಪ್ರಕಟಗೊಂಡಿದೆ. 2ನೇ ಹಂತದ ಪಂದ್ಯಗಳು ಏ.13ಕ್ಕೆ ಆರಂಭಗೊಳ್ಳಲಿದ್ದು, ಮೇ 24ರಂದು ಲೀಗ್‌ ಹಂತ ಪೂರ್ಣಗೊಳ್ಳಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಾ.28ರಿಂದ ಏ.12ರ ವರೆಗಿನ ಒಟ್ಟು 20 ಪಂದ್ಯಗಳ ವೇಳಾಪಟ್ಟಿ ಇತ್ತೀಚೆಗೆ ಪ್ರಕಟಗೊಂಡಿತ್ತು. ಗುರುವಾರ ಲೀಗ್‌ ಹಂತದ ಉಳಿದ 50 ಪಂದ್ಯಗಳ ಮಾಹಿತಿ ನೀಡಲಾಗಿದೆ. ಒಟ್ಟು 12 ನಗರಗಳಲ್ಲಿ ಈ ಪಂದ್ಯಗಳು ನಡೆಯಲಿವೆ. ಇದರಲ್ಲಿ 8 ಡಬಲ್ ಹೆಡರ್ಸ್‌(ದಿನಕ್ಕೆ 2 ಪಂದ್ಯ) ಇರಲಿವೆ. ಫೈನಲ್‌ ಸೇರಿದಂತೆ ಪ್ಲೇ-ಆಫ್‌ ಪಂದ್ಯಗಳ ವೇಳಾಪಟ್ಟಿ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ. ಮಾ.31ಕ್ಕೆ ಫೈನಲ್‌ ನಡೆಯಲಿದೆ.

ಆರ್‌ಸಿಬಿ ವೇಳಾಪಟ್ಟಿ

ದಿನಾಂಕ ಎದುರಾಳಿ ನಗರ ಸಮಯ

ಮಾ.28 ಸನ್‌ರೈಸರ್ಸ್‌ ಬೆಂಗಳೂರು ಸಂಜೆ 7.30

ಏ.5 ಚೆನ್ನೈ ಬೆಂಗಳೂರು ಸಂಜೆ 7.30

ಏ.10 ರಾಜಸ್ಥಾನ ಗುವಾಹಟಿ ಸಂಜೆ 7.30

ಏ.12 ಮುಂಬೈ ಮುಂಬೈ ಸಂಜೆ 7.30

ಏ.15 ಲಖನೌ ಬೆಂಗಳೂರು ಸಂಜೆ 7.30

ಏ.18 ಡೆಲ್ಲಿ ಬೆಂಗಳೂರು ಮಧ್ಯಾಹ್ನ 3.30

ಏ.24 ಗುಜರಾತ್‌ ಬೆಂಗಳೂರು ಸಂಜೆ 7.30

ಏ.27 ಡೆಲ್ಲಿ ನವದೆಹಲಿ ಸಂಜೆ 7.30

ಏ.30 ಗುಜರಾತ್‌ ಅಹ್ಮದಾಬಾದ್‌ ಸಂಜೆ 7.30

ಮೇ 7 ಲಖನೌ ಲಖನೌ ಸಂಜೆ 7.30

ಮೇ 10 ಮುಂಬೈ ರಾಯ್ಪುರ ಸಂಜೆ 7.30

ಮೇ 13 ಕೆಕೆಆರ್‌ ರಾಯ್ಪುರ ಸಂಜೆ 7.30

ಮೇ 17 ಪಂಜಾಬ್‌ ಧರ್ಮಶಾಲಾ ಮಧ್ಯಾಹ್ನ 3.30

ಮೇ 22 ಸನ್‌ರೈಸರ್ಸ್‌ ಹೈದ್ರಾಬಾದ್ ಸಂಜೆ 7.30

ಉದ್ಘಾಟನಾ ಸಮಾರಂಭವಿಲ್ಲ

ಕಳೆದ ವರ್ಷ ಬೆಂಗಳೂರಲ್ಲಿ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ, ಅವರ ಗೌರವಾರ್ಥವಾಗಿ ಈ ಬಾರಿ ಐಪಿಎಲ್ ಉದ್ಘಾಟನಾ ಸಮಾರಂಭ ನಡೆಸದಿರಲು ಬಿಸಿಸಿಐ ನಿರ್ಧರಿಸಿದೆ. ಆದರೆ ಫೈನಲ್‌ಗೂ ಮುನ್ನ ಮೇ 31ರಂದು ಅದ್ಧೂರಿ ಸಮಾರೋಪ ಸಮಾರಂಭ ನಡೆಯಲಿದೆ.

ಬೆಂಗ್ಳೂರಲ್ಲಿ ಪ್ಯಾಟ್‌ ಕಮಿನ್ಸ್, ಜೋಶ್‌ ಹೇಜಲ್‌ವುಡ್

ಗಾಯದ ಹೊರತಾಗಿಯೂ ಆರ್‌ಸಿಬಿ ವೇಗಿ ಜೋಶ್‌ ಹೇಜಲ್‌ವುಡ್‌, ಸನ್‌ರೈಸರ್ಸ್‌ ನಾಯಕ ಪ್ಯಾಟ್‌ ಕಮಿನ್ಸ್‌ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿ ತಮ್ಮ ತಂಡಗಳನ್ನು ಕೂಡಿಕೊಂಡಿದ್ದಾರೆ. ಆದರೆ ಇಬ್ಬರೂ ಟೂರ್ನಿಯ ಆರಂಭಿಕ ಪಂದ್ಯಗಳಿಗೆ ಗೈರಾಗಲಿದ್ದಾರೆ.