ಆರ್‌ಸಿಬಿ ಸಿಡಿಸಿದ 221 ರನ್‌ನಿಂದ ಗೆಲುವು ಪಕ್ಕಾ ಎನ್ನುತ್ತಿದ್ದಾರೆ ಫ್ಯಾನ್ಸ್. ವಾಂಖಡೆಯಲ್ಲೇ ಚೇಸಿಂಗ್ ವರವಾಗಿದ್ದರೂ ಆರ್‌ಸಿಬಿ ಈ ಪಂದ್ಯದಲ್ಲಿ ಗೆಲುವು ಸಾಧಿಸುವ ವಿಶ್ವಾಸ ಹೇಗೆ?
ಮುಂಬೈ(ಏ.07) ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ತನ್ನ ಖದರ್ ತೋರಿಸಿದೆ. ವಾಂಖೆಡೆಯಲ್ಲಿ ಆರ್‌ಸಿಬಿ 221 ರನ್ ಸಿಡಿಸಿದೆ. ಈ ರನ್ ಆರ್‌ಸಿಬಿಗೆ ಭರ್ಜರಿ ಗೆಲುವು ತಂದುಕೊಡಲಿದೆ ಅನ್ನೋ ಲೆಕ್ಕಾಚಾರವೂ ಜೋರಾಗಿದೆ. ವಿರಾಟ್ ಕೊಹ್ಲಿ ದಾಖಲೆ ಅಭಿಮಾನಿಗಳ ಸಂಭ್ರಮ ಡಬಲ್ ಮಾಡಿದೆ. ಕಳೆದ ಪಂದ್ಯದ ಸೋಲಿನಿಂದ ಹೊರಬರಲು ಆರ್‌ಸಿಬಿ ಇದೀಗ ಸಜ್ಜಾಗಿದೆ. ಮುಂಬೈ ತಂಡ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದೆ ನಿಜ. ಆದರೆ ಈ ಆವೃತ್ತಿಯಲ್ಲಿ ಇನ್ನೂ ಲಯ ಕಂಡುಕೊಂಡಿಲ್ಲ. ಈಗಾಗಲೇ 3 ಪಂದ್ಯ ಸೋತಿರುವ ಮುಂಬೈ ಇಂಡಿಯನ್ಸ್ ಒತ್ತಡದಲ್ಲಿದೆ. ಇಷ್ಟೇ ಅಲ್ಲ ಆರ್‌ಸಿಬಿ ಬೌಲಿಂಗ್ ಉತ್ತಮವಾಗಿದೆ. ಹೀಗಾಗಿ ಈ ಮೊತ್ತ ಡಿಫೆಂಡ್ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 13000 ರನ್ ಪೂರೈಸಿದ್ದಾರೆ. ಈ ಮೂಲಕ ದಿಗ್ಗಜರ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ. 13 ಸಾವಿರ ರನ್ ಗಡಿ ದಾಟಿದ 5ನೇ ಕಿಕೆಟಿಗ ಅನ್ನೋ ದಾಖಲೆ ಬರೆದಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ 13 ಸಾವಿರ ರನ್ ಗಡಿದಾಟಿದ ಸಾಧಕರು
ಕ್ರಿಸ್ ಗೇಲ್: 14562
ಅಲೆಕ್ಸ್ ಹೇಲ್ಸ್: 13610
ಶೋಯಿಬ್ ಮಲಿಕ್:13557
ಕೀರನ್ ಪೊಲಾರ್ಡ್:13537
ವಿರಾಟ್ ಕೊಹ್ಲಿ: 13000*
ಆರ್‌ಸಿಬಿ ಇನ್ನಿಂಗ್ಸ್
ಮುಂಬೈ ಲೆಕ್ಕಾಚಾರದಂತೆ ಆರಂಭದಲ್ಲೇ ವಿಕೆಟ್ ಪತನಗೊಂಡಿತ್ತು. ಆರ್‌ಸಿಬಿಯ ಫಿಲಿಪ್ ಸಾಲ್ಟ್ ಕೇವಲ 4 ರನ್ ಸಿಡಿಸಿ ನಿರ್ಗಮಿಸಿದ್ದರು. ಇಲ್ಲಿಗೆ ಗುಜರಾತ್ ಟೈಟಾನ್ಸ್ ವಿರುದ್ಧ ಆರ್‌ಸಿಬಿ ಬ್ಯಾಟಿಂಗ್ ರೀತಯಲ್ಲೇ ಸಾಗಲಿದೆ ಅನ್ನೋ ಆತಂಕ ಎದುರಾಗಿತ್ತು. ಆದರೆ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಜೊತೆಯಾಟ ಆರ್‌ಸಿಬಿ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಸ್ಫೋಟಕ ಬ್ಯಾಟಿಂಗ್ ಆರ್‌ಸಿಬಿಗೆ ವರವಾಯಿತು. ಎರಡನೇ ವಿಕೆಟ್‌ಗೆ ಈ ಜೋಡಿ 91 ರನ್ ಜೊತೆಯಾಟ ನೀಡಿತ್ತು. ಇದರಿಂದ ಆರ್‌ಸಿಬಿ ಬೃಹತ್ ಮೊತ್ತದ ಸೂಚನೆ ನೀಡಿತು.
ವಿರಾಟ್ ಕೊಹ್ಲಿ ಹಾಫ್ ಸೆಂಚುರಿ ಸಿಡಿಸಿದರು. ಕಳೆದೆರಡು ಪಂದ್ಯದಲ್ಲಿ ಕೊಹ್ಲಿ ಅಬ್ಬರ ಇರಲಿಲ್ಲ. ಗುಜರಾತ್ ವಿರುದ್ದ ತೀವ್ರ ನಿರಾಸೆ ಅನುಭವಿಸಿದ್ದರು. ಮುಂಬೈ ಇಂಡಿಯನ್ಸ್ ವಿರುದ್ಧ ಸಿಡಿಸಿದ ಹಾಫ್ ಸೆಂಚುರಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿತ್ತು. ಇತ್ತ ದೇವದತ್ ಪಡಿಕ್ಕಲ್ 37 ರನ್ ಸಿಡಿಸಿ ನಿರ್ಗಮಿಸಿದರು. ಕೊಹ್ಲಿ ಹಾಗೂ ರಜತ್ ಪಾಟೀದಾರ್ ಜೊತೆಯಾಟ ಆರಂಭಗೊಂಡಿತು. ಈ ವೇಳೆ ರನ್ ರೇಟ್ ಕೊಂಚ ಇಳಿಕೆಯಾಗಿತ್ತು. ಇದರ ನಡುವೆ ಕೊಹ್ಲಿ 67 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ನಾಯಕ ರಜತ್ ಪಾಟೀದಾರ್ 32 ರನ್ ಕಾಣಿಕೆ ನೀಡಿ ಔಟಾದರು. ಲಿಯಾಮ್ ಲಿವಿಂಗ್ ಸ್ಟೋನ್ ನಿರಾಸೆ ಅನುಭವಿಸಿದರು. ರಜತ್ ಪಾಟೀದಾರ್ ಅಬ್ಬರಕ್ಕೆ ಮುಂಬೈ ನಲುಗಿತ್ತು. 32 ಎಸೆತದಲ್ಲಿ 64 ರನ್ ಸಿಡಿಸಿದರು. ಈ ಮೂಲಕ ಆರ್‌ಸಿಬಿ 200 ರ್ ಗಡಿ ದಾಡಿತ್ತು. ಇತ್ತ ಜಿತೇಶ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಜಿತೇಶ್ ಶರ್ಮಾ ಅಜೇಯ 40 ರನ್ ಸಿಡಿಸಿದರು. ಆರ್‌ಸಿಬಿ 5 ವಿಕೆಟ್ ನಷ್ಟಕ್ಕೆ 221 ರನ್ ಸಿಡಿಸಿತು.
