2025ರ ಏಪ್ರಿಲ್ 10ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಅಬ್ಬರದ ಆಟವಾಡಿದರು. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರ್‌ಸಿಬಿಯನ್ನು ಸೋಲಿಸಿತು. 53 ಎಸೆತಗಳಲ್ಲಿ 93 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟ ರಾಹುಲ್ ಅವರ ಸಂಭ್ರಮಾಚರಣೆ ವೈರಲ್ ಆಗಿದೆ. ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಸತತ ನಾಲ್ಕನೇ ಗೆಲುವು ಸಾಧಿಸಿದೆ.

RCB vs/ DC 2025: ಕನ್ನಡಿಗ ಕೆ ಎಲ್‌ ರಾಹುಲ್‌ಗೆ ಆರ್‌ಸಿಬಿಯಲ್ಲಿ ಆಟ ಆಡಲು ಅವಕಾಶವೇ ಸಿಗಲಿಲ್ಲ. ಕನ್ನಡ ನೆಲದಲ್ಲಿಯೇ ಕೆ ಎಲ್ ರಾಹುಲ್‌‌ ಈ ಸಿಟ್ಟು ತೀರಿಸಿಕೊಂಡಿದ್ದಾರೆ. 2025 ಏಪ್ರಿಲ್‌ 10ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮ್ಯಾಚ್‌ ನಡೆದಿತ್ತು. ಆ ವೇಳೆ ಕೆ ಎಲ್‌ ರಾಹುಲ್‌ ಅಬ್ಬರಿಸಿದರು. ಆರ್‌ಸಿಬಿಯನ್ನು ಸೋಲಿಸಿದ್ದಲ್ಲದೆ, “ವೃತ್ತ ಬರೆದಾಗಿದೆ, ಈ ವೃತ್ತದಲ್ಲಿ ಇರೋದೆಲ್ಲ ನಂದೇ” ಎನ್ನುವಂತೆ ಸೆಲೆಬ್ರೇಶನ್‌ ಮಾಡಿದ್ದರು. ಈ ಸೆಲೆಬ್ರೇಶನ್‌ ವಿಡಿಯೋ ವೈರಲ್‌ ಆಗ್ತಿದೆ. 

ಕೆ ಎಲ್‌ ರಾಹುಲ್‌ ಸಂಭ್ರಮಾಚರಣೆ ವೈರಲ್!‌ 
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಪಂದ್ಯ ಇತ್ತು. ಆ ವೇಳೆ ಕೆಎಲ್ ರಾಹುಲ್ ಅವರ ಸಂಭ್ರಮಾಚರಣೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಚಿನ್ನಸ್ವಾಮಿಯಲ್ಲಿ ಆರ್‌ಸಿಬಿಯನ್ನು ಸೋಲಿಸುವ ಮೂಲಕ ಡಿಸಿ ತಂಡ ಸತತ ನಾಲ್ಕನೇ ಗೆಲುವು ಸಾಧಿಸಿದೆ. RCB ಆಲ್‌ರೌಂಡರ್ ಟಿಮ್ ಡೇವಿಡ್ ಪಂದ್ಯದ ನಂತರ ಡಿಸಿ ಬ್ಯಾಟ್ಸ್‌ಮನ್ ಫಾಫ್ ಡು ಪ್ಲೆಸಿಸ್ ಮುಂದೆ ಕೆ ಎಲ್‌ ರಾಹುಲ್ ಅವರ ಸಂಭ್ರಮಾಚರಣೆಯನ್ನು ಮಿಮಿಕ್ರಿ ಮಾಡುತ್ತಿರುವ ವಿಡಿಯೋ ಈಗ ವೈರಲ್‌ ಆಗ್ತಿದೆ. 

'ನನ್ನೂರು, ನನ್ನ ಗ್ರೌಂಡ್‌..' ಆರ್‌ಸಿಬಿ ವಿರುದ್ಧ ಗೆಲುವಿನ ಬಳಿಕ ಫ್ರಾಂಚೈಸಿಗೆ ತಿರುಗೇಟು ಕೊಟ್ಟ ಕೆಎಲ್‌ ರಾಹುಲ್‌!

ಟಿಮ್‌ ಡೇವಿಡ್‌ ಮಾತುಕತೆ! 
ಕೆಎಲ್ ರಾಹುಲ್ ಅವರು ಆರ್‌ಸಿಬಿ ವಿರುದ್ಧ 53 ಎಸೆತಗಳಲ್ಲಿ ಅಜೇಯ 93 ರನ್ ಗಳಿಸಿ ಪಂದ್ಯ ಗೆಲ್ಲಿಸುವಂತಹ ಪ್ರದರ್ಶನವನ್ನು ನೀಡಿದರು. ಅಷ್ಟೇ ಅಲ್ಲದೆ ಅವರ ತಂಡವು 6 ವಿಕೆಟ್‌ಗಳ ಗೆಲುವು ಸಾಧಿಸಲು ಸಹಾಯ ಮಾಡಿದ್ದರು. ತಮ್ಮ ತಂಡಕ್ಕೆ ಗೆಲುವಿನ ರನ್ ಗಳಿಸಿದ ನಂತರ ಕೆಎಲ್ ರಾಹುಲ್ ಅವರ ಅಬ್ಬರದ ಸಂಭ್ರಮಾಚರಣೆಯ ಬಗ್ಗೆ ಹಲವರು ಮಾತನಾಡುತ್ತಿದ್ದರೆ, ಟಿಮ್ ಡೇವಿಡ್ ಮತ್ತು ಫಾಫ್ ಡು ಪ್ಲೆಸಿಸ್ ಕೂಡ ಪಂದ್ಯದ ನಂತರ ಚಾಟ್ ಮಾಡುವಾಗ ಅದೇ ವಿಷಯದ ಬಗ್ಗೆ ಮಾತನಾಡುತ್ತಿರುವುದು ಕಂಡುಬಂದಿದೆ.

ಗೆಲುವು ತಂದ ರಾಹುಲ್
ಅಭಿಷೇಕ್ ಪೊರೆಲ್, ಫಾಫ್ ಡು ಪ್ಲೆಸಿಸ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಕಡಿಮೆ ರನ್‌ಗಳಿಗೆ ಬೌಲಿಂಗ್ ಮಾಡಿದರೂ, ಕೆಎಲ್ ರಾಹುಲ್ ಅವರ ಹಿಡಿತ, ಸ್ಟ್ರೋಕ್‌ ಪ್ಲೇ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸಹಾಯ ಮಾಡಿತು. ಟ್ರಿಸ್ಟಾನ್ ಸ್ಟಬ್ಸ್ ಅವರೊಂದಿಗೆ 111 ರನ್‌ಗಳ ಭರ್ಜರಿ ಆಟ, 93 ರನ್‌ಗಳು ತಂಡಕ್ಕೆ ಇನ್ನಷ್ಟು ಹುರುಪು ತಂದುಕೊಟ್ಟಿತು. ಹೀಗಾಗಿ ಆರ್‌ಸಿಬಿ ವಿರುದ್ಧದ 164 ರನ್‌ಗಳ ಗುರಿ ರೀಚ್‌ ಆಗಲು ಸಹಾಯ ಮಾಡಿತು. 

ಕೆ ಎಲ್‌ ರಾಹುಲ್‌ ಮಾಡಿದ್ದು ಸರಿಯೇ?
ಕೆ ಎಲ್‌ ರಾಹುಲ್‌ ಆರ್‌ಸಿಬಿಯಲ್ಲಿ ಇದ್ದಿದ್ರೆ ಅಭಿಮಾನಿಗಳಿಗೂ ಕನ್ನಡಿಗ ಎಂದು ಇನ್ನಷ್ಟು ಖುಷಿ ಆಗುತ್ತಿತ್ತು. ಆದರೆ ಅವರಿಗೆ ಆರ್‌ಸಿಬಿಯಲ್ಲಿ ಆಡಲು ಅವಕಾಶ ಇಲ್ಲದಂತಾಗಿದೆ. ರಾಹುಲ್‌ ಮಾಡಿದ್ದು ಸರಿ ಇದೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಆಟ ಆಡಿದ್ದು ಸರಿ, ಆ ರೀತಿ ಆಚರಣೆ ಅಗತ್ಯ ಇರಲಿಲ್ಲ ಎಂದು ಕೆಲವರು ವ್ಯಂಗ್ಯ ಮಾಡಿದ್ದಾರೆ.

RCBvsDC: ಆರ್‌ಸಿಬಿಗೆ ಸೋಲಿನ ತಾಳಿ ಕಟ್ಟಿದ ಕರಿಮಣಿ ಮಾಲೀಕ ರಾಹುಲ್ಲ!

ಮುಂದೆ ಏನಾಗುವುದು?
ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಐಪಿಎಲ್ 2025 ರಲ್ಲಿ ಅಜೇಯವಾಗಿ ನಾಲ್ಕು ಪಂದ್ಯಗಳನ್ನು ಆಡಿ ಗೆದ್ದಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಏಪ್ರಿಲ್ 13 ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಮುಂಬರುವ ಪಂದ್ಯದಲ್ಲಿ ಹೇಗೆ ಆಡಲಿದೆ ಎಂದು ಕಾದು ನೋಡಬೇಕಿದೆ. 

ಕೆ ಎಲ್‌ ರಾಹುಲ್‌ ಅವರು ಮೂಲತಃ ಬೆಂಗಳೂರಿನವರು. ನಟ ಸುನೀಲ್‌ ಶೆಟ್ಟಿ ಮಗಳು ಅಥಿಯಾ ಶೆಟ್ಟಿಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಕೆ ಎಲ್‌ ರಾಹುಲ್‌ ಹಾಗೂ ಅಥಿಯಾ ಶೆಟ್ಟಿ ಇತ್ತೀಚೆಗೆ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದರು. ಈ ಪುಟ್ಟಲಕ್ಷ್ಮೀಯೇ ರಾಹುಲ್‌ಗೆ ಅದೃಷ್ಟ ತಂದಿತು ಎಂದು ಕೆಲವರು ಹೇಳುತ್ತಿದ್ದಾರೆ. 

Scroll to load tweet…