ಐಪಿಎಲ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್ 2025ರ ಟೂರ್ನಿಗೆ ಸಜ್ಜಾಗಿದೆ. ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ತಂಡವು ಮತ್ತೊಮ್ಮೆ ಕಣಕ್ಕಿಳಿಯಲಿದೆ. ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಆರಂಭಿಕರಾಗಲಿದ್ದು, ಮಧ್ಯಮ ಕ್ರಮಾಂಕದಲ್ಲಿ ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೇಯರ್ ಆಡಲಿದ್ದಾರೆ. ಬೌಲಿಂಗ್‌ನಲ್ಲಿ ಜೋಫ್ರಾ ಆರ್ಚರ್ ಮತ್ತು ವನಿಂದು ಹಸರಂಗ ಪ್ರಮುಖ ಆಟಗಾರರಾಗಿದ್ದಾರೆ. ಈ ಬಾರಿ ತಂಡವು ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

ಬೆಂಗಳೂರು: ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡವು ಇದೀಗ ಹೊಸ ಹುರುಪಿನೊಂಡಿಗೆ 2025ರ ಮಿಲಿಯನ್‌ ಡಾಲರ್ ಕ್ರಿಕೆಟ್ ಟೂರ್ನಿಗೆ ಸಜ್ಜಾಗಿದೆ. ಕಳೆದ ಕೆಲವು ಆವೃತ್ತಿಗಳಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಪ್ಲೇ ಆಫ್ ಪ್ರವೇಶಿಸುತ್ತಿದೆಯಾದರೂ ಎರಡನೇ ಕಪ್ ಗೆಲ್ಲಲು ಮಾತ್ರ ಸಾಧ್ಯವಾಗುತ್ತಿಲ್ಲ. ಕಳೆದ ನವೆಂಬರ್‌ನಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಸಾಕಷ್ಟು ತಂತ್ರಗಾರಿಕೆ ನಡೆಸಿ ತನಗೆ ಬೇಕಾದ ಆಟಗಾರರನ್ನು ಖರೀದಿಸುವಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಯಶಸ್ವಿಯಾಗಿದೆ. ಅಷ್ಟಕ್ಕೂ ಈ ಬಾರಿಯ ರಾಜಸ್ಥಾನ ರಾಯಲ್ಸ್ ತಂಡ ಹೇಗಿದೆ? ಬಲಿಷ್ಠ ಆಡುವ ಹನ್ನೊಂದರ ಬಳಗ ಹೇಗಿರಲಿದೆ ಎನ್ನುವುದನ್ನು ನೋಡೋಣ ಬನ್ನಿ

ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ಮತ್ತೆ ಅಗ್ನಿಪರೀಕ್ಷೆ!

ರಾಜಸ್ಥಾನ ರಾಯಲ್ಸ್ ತಂಡದ ನಾಯಕತ್ವ ಮತ್ತೆ ಸಂಜು ಸ್ಯಾಮ್ಸನ್ ಕೈಯಲ್ಲಿದೆ. ಸತತ 5ನೇ ಬಾರಿಗೆ ಕೇರಳ ಮೂಲದ ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ಡಡೆಸುತ್ತಿದ್ದಾರೆ. ಸಂಜು ಕಳೆದ ಸೀಸನ್‌ಗಳಲ್ಲಿ ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. 2022ರಲ್ಲಿ ತಂಡವನ್ನು ಫೈನಲ್‌ಗೆ ತಲುಪಿಸಿದ್ದರು, ಆದ್ರೆ ಗುಜರಾತ್ ವಿರುದ್ಧ ಸೋಲಬೇಕಾಯಿತು. ಆ ಸೀಸನ್‌ನಲ್ಲಿ ತಂಡ ಉತ್ತಮ ಪ್ರದರ್ಶನ ನೀಡಿತ್ತು. ಆದ್ರೆ, ಸಂಜು ಫಿಟ್‌ನೆಸ್ ಬಗ್ಗೆ ಚಿಂತೆ ಇದೆ. ಆದ್ರೆ, ಅವರು ಬೇಗನೆ ತಂಡ ಸೇರಿಕೊಳ್ಳುವ ನಿರೀಕ್ಷೆ ಇದೆ.

ಇದನ್ನೂ ಓದಿ: ‘ಈ ಸಲ ಕಪ್‌ ನಮ್ದೇ’ ಅಂತ ಹೇಳ್ಬೇಡಿ: ಎಬಿ ಡಿವಿಲಿಯರ್ಸ್‌ಗೆ ಕೊಹ್ಲಿ ಖಡಕ್‌ ಎಚ್ಚರಿಕೆ!

ಆರ್‌ಆರ್ ಬ್ಯಾಟಿಂಗ್ ಈ ಸೀಸನ್‌ನಲ್ಲಿ ಯಾರ ಮೇಲೆ ಡಿಪೆಂಡ್ ಆಗಿದೆ?

ಆರ್‌ಆರ್ ಬ್ಯಾಟಿಂಗ್ ನೋಡಿದ್ರೆ, ಯಶಸ್ವಿ ಜೈಸ್ವಾಲ್ ಜೊತೆ ವೈಭವ್ ಸೂರ್ಯವಂಶಿ ಓಪನಿಂಗ್ ಮಾಡಬಹುದು. ವೈಭವ್ ಕೇವಲ 13 ವರ್ಷದವರಾಗಿದ್ದು, ಚಿಕ್ಕ ವಯಸ್ಸಿನ ಆಟಗಾರ. ಆದರೂ ಅವರ ಫಾರ್ಮ್ ಚೆನ್ನಾಗಿದೆ. ಅವರ ಮೇಲೆ ಎಲ್ಲರ ಕಣ್ಣು ಇರಲಿದೆ. ಸಂಜು ನಂಬರ್ 3ರಲ್ಲಿ ಆಡುತ್ತಾರೆ. ನಂತರ ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೇಯರ್, ನಿತೀಶ್ ರಾಣಾ ಮಿಡಲ್ ಆರ್ಡರ್‌ನಲ್ಲಿ ಆಡಲಿದ್ದಾರೆ. ಇವರಲ್ಲದೆ ಜೋಫ್ರಾ ಆರ್ಚರ್ ಮತ್ತು ವನಿಂದು ಹಸರಂಗ ಆಲ್ ರೌಂಡರ್ ಆಗಿ ಆಡಲಿದ್ದಾರೆ.

ರಾಜಸ್ಥಾನ ರಾಯಲ್ಸ್ ಬೌಲಿಂಗ್ ಹೇಗಿರಲಿದೆ?

ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ಬೌಲಿಂಗ್ ಬಗ್ಗೆ ಹೇಳುವುದಾದರೆ, ಜೋಫ್ರಾ ಆರ್ಚರ್, ಫಜಲ್ಹಕ್ ಫಾರೂಕಿ, ಕ್ವೆನ್ ಮಫಕಾ ಮತ್ತು ಆಕಾಶ್ ಮಧ್ವಾಲ್ ವೇಗದ ಬೌಲಿಂಗ್‌ನಲ್ಲಿ ಆಡಲಿದ್ದಾರೆ. ಸ್ಪಿನ್ ಬೌಲಿಂಗ್‌ನಲ್ಲಿ ಮಹೇಶ್ ತೀಕ್ಷಣ ಮತ್ತು ವನಿಂದು ಹಸರಂಗ ಆಪ್ಷನ್ ಇದ್ದಾರೆ.

ಇದನ್ನೂ ಓದಿ: IPL 2025: ಈ ಬಾರಿ ಅಬ್ಬರಿಸಲು ರೆಡಿಯಾಗಿದ್ದಾರೆ ಟಾಪ್ 5 ಫಾರಿನ್ ಸ್ಟಾರ್ಸ್!

ರಾಜಸ್ಥಾನ ರಾಯಲ್ಸ್ ಬಲಿಷ್ಠ ಆಡುವ ಹನ್ನೊಂದರ ಬಳಗ ಹೀಗಿದೆ:

ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್, ನಿತೀಶ್ ರಾಣಾ, ರಿಯಾನ್ ಪರಾಗ್, ಶಿಮ್ರೊನ್ ಹೆಟ್ಮೇಯರ್, ಧೃವ್ ಜುರೆಲ್, ಜೋಫ್ರಾ ಆರ್ಚರ್, ವನಿಂದು ಹಸರಂಗ, ಫಝಲ್‌ಹಕ್ ಫಾರೂಕಿ, ಸಂದೀಪ್ ಶರ್ಮಾ.