ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಘೋಷವಾಕ್ಯ 'ಈ ಸಲ ಕಪ್ ನಮ್ದೇ' ಎಂದು ಹೇಳದಂತೆ ವಿರಾಟ್ ಕೊಹ್ಲಿ ಎಬಿ ಡಿ ವಿಲಿಯರ್ಸ್‌ಗೆ ಸೂಚಿಸಿದ್ದಾರೆ. ಈ ಬಾರಿ ಕಪ್ ಗೆಲ್ಲುವುದು ಸುಲಭವಲ್ಲ ಎಂದು ವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ. 2025ರ ಐಪಿಎಲ್‌ನಲ್ಲಿ ಆರ್‌ಸಿಬಿ ಲೀಗ್ ಹಂತದಲ್ಲಿ ಅತಿ ಹೆಚ್ಚು ಅಂದರೆ 17000 ಕಿ.ಮೀ ಪ್ರಯಾಣಿಸಲಿದೆ. ರಜತ್ ಪಾಟಿದಾರ್ ನಾಯಕತ್ವದಲ್ಲಿ ತಂಡವು ಕಪ್ ಗೆಲ್ಲುವ ನಿರೀಕ್ಷೆಯಿದೆ.
ಬೆಂಗಳೂರು: ಐಪಿಎಲ್‌ನ ಆರ್‌ಸಿಬಿ ತಂಡದ ‘ಈ ಸಲ ಕಪ್ ನಮ್ದೇ’ ಎಂಬ ಪ್ರಸಿದ್ಧ ಘೋಷವಾಕ್ಯವನ್ನು ಇನ್ನು ಬಳಸಬೇಡಿ ಎಂದು ತಂಡದ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್‌ಗೆ ಮಾಜಿ ನಾಯಕ ವಿರಾಟ್ ಕೊಹ್ಲಿ ಖಡಕ್ ಆಗಿ ಸೂಚಿಸಿದ್ದಾರೆ. ಇದನ್ನು ಸ್ವತಃ ವಿಲಿಯರ್ಸ್ ಬಹಿರಂಗಪಡಿಸಿದ್ದಾರೆ.
ಸ್ಟಾರ್‌ಸ್ಪೋರ್ಟ್ಸ್ ಪ್ರೆಸ್ ರೂಮ್ ವರ್ಚುವಲ್ ಸಂವಾದದಲ್ಲಿ ಮಾತನಾಡಿದ ವಿಲಿಯರ್ಸ್, ‘ನಾನೊಮ್ಮೆ ಈ ಸಲ ಕಪ್ ನಮ್ದೇ ಎಂದು ಹೇಳಿದ್ದೆ. ತಕ್ಷಣ ವಿರಾಟ್ ಕೊಹ್ಲಿ ಮೆಸೇಜ್ ಮಾಡಿ, ಇನ್ನು ಯಾವತ್ತೂ ಆ ರೀತಿ ಹೇಳದಂತೆ ಸೂಚಿಸಿದರು. ಹಾಗಾಗಿ ನಾನು ಸ್ವಲ್ಪ ತೊಂದರೆಗೆ ಸಿಲುಕಿದಂತಾಯಿತು. ಆದರೆ ನಿಜ ಹೇಳಬೇಕೆಂದರೆ, ಈ ಸಲ ಕಪ್ ನಮ್ದೇ ಎಂದು ಹೇಳಿ ನಮಗೇ ಸುಸ್ತಾಗಿದೆ’ ಎಂದರು. ವಿಶ್ವಕಪ್ ಗೆಲ್ಲಬಹುದಾದ 10 ವಿಶ್ವ ದರ್ಜೆಯ ತಂಡಗಳು ಐಪಿಎಲ್‌ನಲ್ಲಿವೆ. ಹೀಗಾಗಿ ಟ್ರೋಫಿ ಗೆಲ್ಲುವುದು ಸುಲಭವಲ್ಲ ಎಂದೂ ವಿಲಿಯರ್ಸ್ ಹೇಳಿದ್ದಾರೆ.
ಈ ಸಲನಾದ್ರೂ ಕಪ್ ಗೆಲ್ಲುತ್ತಾ ಆರ್‌ಸಿಬಿ:
'ಈ ಸಲ ಕಪ್ ನಮ್ದೇ' ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ಅಭಿಮಾನಿಗಳ ಘೋಷವಾಕ್ಯ ಎನಿಸಿಕೊಂಡಿದೆ. ಆರ್‌ಸಿಬಿ ತಂಡವು ಸೋತರೂ, ಗೆದ್ದರೂ ತಂಡವನ್ನು ಬೆಂಬಲಿಸಿಕೊಂಡೇ ಬಂದಿರುವ ಫ್ಯಾನ್ಸ್‌ಗೆ ಈ ಘೋಷವಾಕ್ಯವನ್ನು ದೇಶಾದ್ಯಂತ ಟ್ರೆಂಡಿಂಗ್ ಮಾಡಿದ್ದಾರೆ. ಕಳೆದ 17 ಸೀಸನ್‌ಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್‌ನಲ್ಲಿ ಆಡುತ್ತಾ ಬಂದಿದೆ. ಆದರೆ ಇದುವರೆಗೂ ಐಪಿಎಲ್ ಟ್ರೋಫಿ ಮಾತ್ರ ಗಗನ ಕುಸುಮವಾಗಿಯೇ ಉಳಿದಿದೆ. ಮೂರು ಬಾರಿ ಫೈನಲ್ ಪ್ರವೇಶಿಸಿದ್ದೇ ಆರ್‌ಸಿಬಿ ತಂಡದ ಈವರೆಗಿನ ಶ್ರೇಷ್ಠ ಪ್ರದರ್ಶನ ಎನಿಸಿಕೊಂಡಿದೆ.
ಇದನ್ನೂ ಓದಿ: RCB Unbox Event: ಸಂಜಿತ್ ಹೆಗ್ಡೆಗೆ ಈ ಹಾಡು ಹಾಡದಂತೆ ಫ್ಯಾನ್ಸ್ ತಾಕೀತು!
ಇನ್ನು ಇದೀಗ 18ನೇ ಅವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪ್ರತಿಭಾನ್ವಿತ ಕ್ರಿಕೆಟಿಗ ರಜತ್ ಪಾಟೀದಾರ್‌ಗೆ ಆರ್‌ಸಿಬಿ ಫ್ರಾಂಚೈಸಿಯು ನಾಯಕತ್ವ ಪಟ್ಟ ಕಟ್ಟಿದೆ. ತಂಡದಲ್ಲಿ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್, ಲಿಯಾಮ್ ಲಿವಿಂಗ್‌ಸ್ಟೋನ್, ಜೋಶ್ ಹೇಜಲ್‌ವುಡ್ ಅವರಂತಹ ಆಟಗಾರರಿದ್ದಾರೆ. ಇನ್ನು ಫಿಲ್ ಸಾಲ್ಟ್, ರಜತ್ ಪಾಟೀದಾರ್, ಯಶ್ ದಯಾಳ್ ಅವರಂತಹ ಟಿ20 ಸ್ಪೆಷಲಿಸ್ಟ್ ಆಟಗಾರರ ಬಲವು ಆರ್‌ಸಿಬಿ ತಂಡಕ್ಕಿದ್ದು, ಈ ಬಾರಿಯಾದರೂ ಬೆಂಗಳೂರು ತಂಡವು ಐಪಿಎಲ್ ಕಪ್ ಗೆಲ್ಲುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಲೀಗ್ ಹಂತದಲ್ಲಿ 17000 ಕಿ.ಮೀ. ಪ್ರಯಾಣಿಸಲಿದೆ ಆರ್‌ಸಿಬಿ ತಂಡ
ನವದೆಹಲಿ: ಚೊಚ್ಚಲ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಆರ್‌ಸಿಬಿ, 2025ರ ಐಪಿಎಲ್‌ನ ಲೀಗ್ ಹಂತದಲ್ಲಿ ಬರೋಬ್ಬರಿ 17000 ಕಿಲೋ ಮೀಟರ್‌ಗಿಂತಲೂ ಹೆಚ್ಚಿನ ಪ್ರಯಾಣ ಕೈಗೊಳ್ಳಲಿದೆ.
ಲೀಗ್ ಹಂತದಲ್ಲಿ ಎಲ್ಲ 10 ತಂಡಗಳು ತಲಾ 14 ಪಂದ್ಯಗಳನ್ನು ಆಡಲಿವೆ. ಇದರಲ್ಲಿ 7 ಪಂದ್ಯಗಳನ್ನು ತನ್ನ ತವರಿನಂಗಳದಲ್ಲಿ ಆಡಲಿದ್ದು, ಇನ್ನುಳಿದ 7 ಪಂದ್ಯಗಳಿಗೆ ಪ್ರಯಾಣ ಬೆಳಸಲಿವೆ. ಒಟ್ಟಾರೆ ಒಂದು ತಂಡ ಕನಿಷ್ಠ 8 ವಿವಿಧ ನಗರಗಳಲ್ಲಿ ಪಂದ್ಯಗಳನ್ನು ಆಡಲಿದೆ. ಆದರೆ, ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ 2ನೇ ತವರನ್ನು ಸಹ ಹೊಂದಿದ್ದು, ಈ ಮೂರು ತಂಡಗಳು 9 ನಗರಗಳಲ್ಲಿ ಆಡಲಿವೆ. ಆದರೂ, ಎಲ್ಲರಿಗಿಂತ ಹೆಚ್ಚು ಆರ್‌ಸಿಬಿಯೇ ಪ್ರಯಾಣ ಮಾಡಲಿದೆ.
ಇದನ್ನೂ ಓದಿ: ಡೆಲ್ಲಿ ಕ್ಯಾಪಿಟಲ್ಸ್ ಪರ ಕನ್ನಡಿಗ ಕೆ.ಎಲ್.ರಾಹುಲ್‌ಗೆ ಹೊಸ ಜವಾಬ್ದಾರಿ?
2025ರ ಐಪಿಎಲ್: ಯಾವ ತಂಡಕ್ಕೆ ಎಷ್ಟು ಪ್ರಯಾಣ
ತಂಡ ದೂರ (ಕಿ.ಮೀ.ಗಳಲ್ಲಿ)
ಸನ್‌ರೈಸರ್ಸ್ ಹೈದರಾಬಾದ್: 8,536
ಡೆಲ್ಲಿ ಕ್ಯಾಪಿಟಲ್ಸ್: 9,270
ಲಖನೌ ಸೂಪರ್ ಜೈಂಟ್ಸ್: 9,747
ಗುಜರಾತ್ ಟೈಟಾನ್ಸ್: 10,405
ಮುಂಬೈ ಇಂಡಿಯನ್ಸ್: 12,702
ರಾಜಸ್ಥಾನ ರಾಯಲ್ಸ್: 12,730
ಕೋಲ್ಕತಾ ನೈಟ್ ರೈಡರ್ಸ್: 13,537
ಪಂಜಾಬ್ ಕಿಂಗ್ಸ್: 14,341
ಚೆನ್ನೈ ಸೂಪರ್ ಕಿಂಗ್ಸ್: 16,184
ಆರ್‌ಸಿಬಿ: 17,084
