ಐಪಿಎಲ್‌ ಇತಿಹಾಸದ ಅತಿದೊಡ್ಡ 'ಕ್ಯಾಪ್ಟನ್‌' ಟ್ರೇಡಿಂಗ್‌, ಗುಜರಾತ್‌ಗೆ ರೋಹಿತ್‌, ಮುಂಬೈಗೆ ಹಾರ್ದಿಕ್‌ ಪಾಂಡ್ಯ?

Hardik Pandya to PlayMumbai Indians  ಈ ಸುದ್ದಿ ಅದೆಷ್ಟು ನಿಜವೋ ಗೊತ್ತಿಲ್ಲ. ಆದರೆ, ಕ್ರಿಕೆಟ್‌ ವಲಯದಲ್ಲಿ ಇಂಥದ್ದೊಂದು ಗಾಸಿಪ್‌ ಬಹಳ ಜೋರಾಗಿ ನಡೆಯುತ್ತಿದೆ. ಐಪಿಎಲ್‌ ಇತಿಹಾಸದಲ್ಲಿಯೇ ಅತಿದೊಡ್ಡ ಕ್ಯಾಪ್ಟನ್‌ ಟ್ರೇಡಿಂಗ್‌ ಮುಂದಿನ ದಿನಗಳಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

IPL 2024 Trading Hardik Pandya likely to play for Mumbai Indians Rohit Sharma playing for gujarat titans san

ಬೆಂಗಳೂರು (ನ.22): ಬಹುಶಃ ಈ ಸುದ್ದಿಯೇನಾದರೂ ನಿಜವಾದಲ್ಲಿ, ಐಪಿಎಲ್‌ ಇತಿಹಾಸದ ಈವರೆಗಿನ ಅತೀದೊಡ್ಡ ಟ್ರೇಡಿಂಗ್‌ ಅಂದರೆ ವರ್ಗಾವಣೆ ಎನಿಸಿಕೊಳ್ಳುವುದಂತೂ ಸತ್ಯ. ಕಳೆದ ಕೆಲವು ದಿನಗಳಲ್ಲಿ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ 2024ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ ವಾಪಸಾಗುವ ಸಾಧ್ಯತೆ ಎಂದು ಗಾಸಿಪ್‌ ಎದ್ದಿದೆ. ಹಾಗೇನಾದರೂ ಆದಲ್ಲಿ ಇದು ಐಪಿಎಲ್‌ ಇತಿಹಾಸದ ಅತಿದೊಡ್ಡ ಟ್ರೇಡಿಂಗ್‌ ಎನಿಸಿಕೊಳ್ಳುವುದಂತೂ ಸತ್ಯ ಪ್ರಸ್ತುತ ಐಪಿಎಲ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ತಂಡದ ನಾಯಕರಾಗಿರುವ ಹಾರ್ದಿಕ್‌ ಪಾಂಡ್ಯ, ಐದು ಬಾರಿಯ ಐಪಿಎಲ್‌ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡದ ಪರವಾಗಿ ಆಡುವ ಒಲವು ತೋರುತ್ತಿದ್ದಾರೆ ಎನ್ನಲಾಗಿದೆ. Cricketnext.com ಮಾಡಿರುವ ವರದಿಯ ಪ್ರಕಾರ ಹಾರ್ದಿ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್‌ಗೆ ಮರಳುವುದು ನಾಯಕರ ನೇರ ವಿನಿಮಯ ಕೂಡ ಆಗಿರಬಹುದು ಎಂದು ಹೇಳಿದೆ. ಹಾಗೇನಾದರೂ ಆದಲ್ಲಿ ರೋಹಿತ್‌ ಶರ್ಮ ಮುಂದಿನ ಆವೃತ್ತಿಯಲ್ಲಿ ಗುಜರಾತ್‌ ಟೈಟಾನ್ಸ್‌ ತಂಡದ ಪರವಾಗಿ ಆಡಲಿದ್ದಾರೆ. ಆದರೆ, ಸದ್ಯದ ಮಟ್ಟಿಗೆ ರೋಹಿತ್‌ ಶರ್ಮ ಅವರನ್ನು ಮುಂಬೈ ಇಂಡಿಯನ್ಸ್‌ ಕೈಬಿಡುವ ಸಾಧ್ಯತೆ ಬಹಳ ಕಡಿಮೆ. ಇದಾದಲ್ಲಿ ಜೋಫ್ರಾ ಆರ್ಚರ್‌ ಗುಜರಾತ್‌ ಟೈಟಾನ್ಸ್‌ಗೆ ಹೋಗಬಹುದು ಎನ್ನಲಾಗಿದೆ. ಅದಲ್ಲದೆ, ಮುಂಬೈಗೆ ಬರುವ ಹಾರ್ದಿಕ್‌ ಪಾಂಡ್ಯಗೆ 2025ರ ಐಪಿಎಲ್‌ನಲ್ಲಿ ತಂಡದ ನಾಯಕತ್ವ ಕೂಡ ಸಿಗಲಿದೆ ಎಂದು ವರದಿಯಾಗಿದೆ.

ಐದು ಬಾರಿ ತಂಡವನ್ನು ಚಾಂಪಿಯನ್‌ ಪಟ್ಟಕ್ಕೆ ಏರಿಸಿರುವ ರೋಹಿತ್‌ ಶರ್ಮ ಅವರನ್ನು ಮುಂಬೈ ತಂಡ ಬಿಟ್ಟುಕೊಡುವ ಸಾಧ್ಯತೆ ಕಡಿಮೆ. ಆದರೆ, ಹಾರ್ದಿಕ್‌ ಪಾಂಡ್ಯಗಾಗಿ ರೋಹಿತ್‌ ಶರ್ಮ ಅವರನ್ನೇ ಗುಜರಾತ್‌ ಪಟ್ಟು ಹಿಡಿದಲ್ಲಿ ಈ ಟ್ರೇಡಿಂಗ್‌ ಕೂಡ ನಡೆಯಬಹುದು. ರೋಹಿತ್‌ ಶರ್ಮಗೆ ಈಗ 36 ವರ್ಷ. ಹೆಚ್ಚಿನ ದಿನ ಟಿ20 ಕ್ರಿಕೆಟ್‌ ಆಡುವ ಸಾಧ್ಯತೆ ಕೂಡ ಕಡಿಮೆ. ಭವಿಷ್ಯದ ತಂಡವನ್ನು ಕಟ್ಟುವ ದೃಷ್ಟಿಯಲ್ಲಿ ಮುಂಬೈ ಇಂಡಿಯನ್ಸ್ ಹಾರ್ದಿಕ್‌ ಪಾಂಡ್ಯ ಮೇಲೆ ಗಮನ ಕೇಂದ್ರೀಕರಿಸಿದೆ.

ಮೊಣಕಾಲು ಗಾಯದಿಂದ ಬಳಲುತ್ತಿದ್ದಾರೆ ಧೋನಿ, ಈ ಬಾರಿಯ ಐಪಿಎಲ್‌ಗೆ ಡೌಟ್!

ಮುಂಬೈ ಇಂಡಿಯನ್ಸ್‌, ರೋಹಿತ್‌ನಿಂದ ನಾಯಕನಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಆರ್ಚರ್ ಬದಲಿಗೆ ತಂಡವನ್ನು ಸೇರಲು ಹಾರ್ದಿಕ್ ಅವರನ್ನು ವಿನಂತಿ ಮಾಡುವ ಸಾಧ್ಯತೆ ಇದೆ. ಹಾರ್ದಿಕ್ ತಮ್ಮ ಐಪಿಎಲ್ ವೃತ್ತಿಜೀವನವನ್ನು ಮುಂಬೈನೊಂದಿಗೆ ಪ್ರಾರಂಭಿಸಿದರು ಮತ್ತು 2015, 2017, 2019 ಮತ್ತು 2020 ರಲ್ಲಿ ನಾಲ್ಕು ಪ್ರಶಸ್ತಿ ವಿಜೇತ ಅಭಿಯಾನದ ಭಾಗವಾಗಿದ್ದರು. 2022ರಲ್ಲಿ ಗುಜರಾತ್‌ ಟೈಟಾನ್ಸ್‌ ತಂಡವನ್ನು ಸೇರಿದ್ದ ಹಾರ್ದಿಕ್‌ ಪಾಂಡ್ಯ, ನಾಯಕರಾಗಿ ಅವರ ಮೊದಲ ಋತುವಿನಲ್ಲಿ ಟೂರ್ನಿಯನ್ನು ಗೆದ್ದಿದ್ದು ಮಾತ್ರವಲ್ಲದೆ, 2023ರಲ್ಲಿ ತಂಡವನ್ನು ಫೈನಲ್‌ಗೆ ಏರಿಸಿದ್ದರು. ಐಪಿಎಲ್ ವರ್ಗಾವಣೆ ವಿಂಡೋಗೆ ಗಡುವು ನವೆಂಬರ್ 26 ಕ್ಕೆ ಮುಗಿಯಲಿದೆ.

ಭಾರತ ಮಣಿಸಿ ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಅಚ್ಚರಿ ನಿರ್ಧಾರ ಪ್ರಕಟಿಸಿದ ಪ್ಯಾಟ್ ಕಮಿನ್ಸ್‌..!

Latest Videos
Follow Us:
Download App:
  • android
  • ios